ವಿಜಯಪುರ: ಮನೆ ಛಾವಣಿ ಕುಸಿದು ಮೂವರ ದುರ್ಮರಣ

Posted By:
Subscribe to Oneindia Kannada

ವಿಜಯಪುರ, ಆಗಸ್ಟ್ 28 : ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರಾಮಮಂದಿರ ಬಳಿಯ ಮಠಪತಿ ಓಣಿಯಲ್ಲಿ ಭಾನುವಾರ ರಾತ್ರಿ ಮನೆಯೊಂದರ ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ.

ಅಶೋಕ ಗೌಡೆನ್ನವರ (40), ಶಕುಂತಲಾ ಗೌಡೆನ್ನವರ (30), ಚಂದ್ರಶೇಖರ ಗೌಡೆನ್ನವರ ಮೃತಪಟ್ಟ ದುರ್ದೈವಿಗಳು. ಕಳೆದ ಮೂರು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಅಶೋಕ ಅವರ ಮನೆ ಛಾವಣಿ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ 5 ಜನರ ಪೈಕಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

3 dies after house wall collapsed due to heavy rain in Vijayapura

ಅದೃಷ್ಟವಷಾತ್ ಅಶೊಕ ಗೌಡೆನ್ನವರ ಚಿಕ್ಕಪ್ಪನ ಮಕ್ಕಳಾದ ರಂಜೀತ್ ಗೌಡೆನ್ನವರ(8) ಮತ್ತು ಅಜೀತ್ ಗೌಡೆನ್ನವರ (5) ಬದುಕುಳಿದಿದ್ದಾರೆ. ಸ್ಥಳಕ್ಕೆ ಗಾಂಧಿಚೌಕ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three people killed after roof of a house collapsed to heavy rain in Vijayapura. Incident took place in Gandhichowk police station limits on August 27.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ