II PUC Exam: ಪಿಯು ಪರೀಕ್ಷೆಗೆ 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು! ಬೆಂಗಳೂರು ಪ್ರಥಮ
ಬೆಂಗಳೂರು, ಮಾರ್ಚ್ 05: ಕರ್ನಾಟಕ ರಾಜ್ಯಾದ್ಯಂತ ಮಾರ್ಚ್ 01ರ ಶನಿವಾರದಿಂದ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಆರಂಭವಾಗಿವೆ. ಮಾರ್ಚ್ 20ರವರೆಗೆ ಪರೀಕ್ಷೆಗಳು ನಡೆಯಲಿವೆ. ಮೊನ್ನೆ ಸೋಮವಾರ ನಡೆದ ಗಣಿತ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪ್ರಮುಖ ಪರೀಕ್ಷೆಗೆ ಗೈರಾಗುವ ಮೂಲಕ ವಿದ್ಯಾರ್ಥಿಗಳು ದಾಖಲೆ ಮಾಡಿದ್ದಾರೆ.
ಪರೀಕ್ಷೆ ಆರಂಭವಾದ ಎರಡನೇ ದಿನವಾದ ಮಾರ್ಚ್ 3ರಂದು ಸೋಮವಾರ ನಡೆದ ದ್ವಿತೀಯ ಪಿಯು ಗಣಿತ ಪರೀಕ್ಷೆಯ ರಾಜ್ಯಾದ್ಯಂತ 12,533 ವಿದ್ಯಾರ್ಥಿಗಳು ಹಾಜರಾಗದೇ ಹೊರಗುಳಿದಿದ್ದಾರೆ. ಮೊದಲ ಎರಡು ದಿನ ನಡೆದಿ ಪರೀಕ್ಷೆಯಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು, ದುಷ್ಕೃತ್ಯ ನಡೆದಿಲ್ಲ ಎಂದು 'ಡಿಎಚ್' ವರದಿ ಮಾಡಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, 2024ರ ಪರೀಕ್ಷೆಗಳಿಂದ ಪರೀಕ್ಷೆಗಳಿಗೆ ವೆಬ್ ಸ್ಟ್ರೀಮಿಂಗ್ ಜಾರಿಗೆ ತರಲಾಗಿದೆ. ಹೀಗಾಗಿ ಯಾವುದೇ ದುಷ್ಕೃತ್ಯ ತಡೆಯುವಲ್ಲಿ ಇದು ಸಹಕಾರಿಯಾಗುತ್ತದೆ. ಮೂರು ಪ್ರಮುಖ ಪರೀಕ್ಷೆಗಳ ಕಾರಣದಿಂದ ವಿದ್ಯಾರ್ಥಿಗಳು ಗೈರಾಗಿದ್ದಾರೆ. ವಿದ್ಯಾರ್ಥಿಗಳು ಸೂಕ್ತ ತಯಾರಿ ನಡೆಸಿಲ್ಲದ ಕಾರಣದಿಂದ ಇನ್ನೂ ಎರಡು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿದೆ. ಆದರೆ ಅವರು ಪರೀಕ್ಷೆಗಳನ್ನು ಬಿಟ್ಟುಬಿಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಗಣಿತ ಪರೀಕ್ಷೆ ಗೈರುಹಾಜರಾದ ವಿದ್ಯಾರ್ಥಿಗಳಲ್ಲಿ ಬೆಂಗಳೂರು ದಕ್ಷಿಣದವರ ಹೆಚ್ಚು (1,510) ಇದ್ದಾರೆ. ನಂತರ ಸ್ಥಾನದಲ್ಲಿ ರಾಯಚೂರು ಜಿಲ್ಲೆಯ 1,058 ವಿದ್ಯಾರ್ಥಿಗಳು, ವಿಜಯಪುರ 1,010 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದಿದ್ದಾರೆ.
ಇನ್ನೂ ಬೆಂಗಳೂರು ಗ್ರಾಮಾಂತ ಜಿಲ್ಲೆಯ ವ್ಯಾಪ್ತಿಯಲ್ಲಿ 79, ಚಾಮರಾಜನಗರ 80 ಹಾಗೂ ಹಾಸನ 119 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ ಎಂದು ವರದಿ ಆಗಿದೆ. ಸದ್ಯ ಗೈರಾದ ಗಣಿತ ಪರೀಕ್ಷೆಯ ಪತ್ರಿಕೆ ಅಷ್ಟೇನು ಕಠಿಣವಾಗಿಲ್ಲ ಎಂದು ಹಾಜರಾದ ವಿದ್ಯಾರ್ಥಿಗಳು ಹೇಳಿದ್ದು, ಕೆಲವು ಪ್ರಶ್ನೆಗಳು ಕೊಂಚ ಜಟಿಲವಾಗಿದ್ದವು. ಗಣಿತ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಸರಳವಾಗಿರುತ್ತದೆ. ಒಂದಷ್ಟು ಒಂದು ಮತ್ತು ಎರಡು ಅಂಕದ ಪ್ರಶ್ನೆಗಳು ಜಟಿಲವಾಗಿದ್ದವು ಎಂದಿದ್ದಾರೆ.












Click it and Unblock the Notifications