ಪ್ರಶ್ನೆ ಪತ್ರಿಕೆ ಸೋರಿಕೆ, ಸಚಿವರ ಪಿಎ ಸೇರಿ ಮೂವರ ಬಂಧನ

ಬೆಂಗಳೂರು, ಏಪ್ರಿಲ್ 04 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿ ಹಾಲಿ ಸಚಿವರೊಬ್ಬರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]

ಬಂಧಿತ ಆರೋಪಿಗಳನ್ನು ಮಂಜುನಾಥ್, ಓಬಳರಾಜ್ ಮತ್ತು ರುದ್ರಪ್ಪ ಎಂದು ಗುರುತಿಸಲಾಗಿದೆ. ಓಬಳರಾಜ್ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ವಿಶೇಷಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. [ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?]

cid

ಮಾರ್ಚ್ 21ರಂದು ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಪರೀಕ್ಷೆ ನಡೆದ ಬಳಿಕ ಅದನ್ನು ರದ್ದುಪಡಿಸಲಾಗಿತ್ತು. ಪಶ್ನೆ ಪತ್ರಿಕೆ ಸೋರಿಕೆ ಕುರಿತು ಸಿಐಡಿ ತನಿಖೆ ನಡೆಸಲು ಆದೇಶ ನೀಡಲಾಗಿತ್ತು. ತನಿಖೆಗೆ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು 5 ತಂಡಗಳನ್ನು ರಚನೆ ಮಾಡಿದ್ದರು. [ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಐಡಿ ತನಿಖೆ]

ವಿವರಗಳು : ಬೆಂಗಳೂರಿನ ವಿಜಯನಗರದ ನ್ಯೂ ಕೇಂಬ್ರಿಡ್ಜ್ ಕಾಲೇಜಿನ ದೈಹಿಕ ತರಬೇತಿ ಉಪನ್ಯಾಸಕ ಮತ್ತು ಎಲ್‌ಐಸಿ ಏಜೆಂಟ್ ಮಂಜುನಾಥ್‌ಗೆ ಮೊದಲು ಪ್ರಶ್ನೆ ಪತ್ರಿಕೆ ಸಿಕ್ಕಿತ್ತು. ಮಂಜುನಾಥ್‌ಗೆ ಪತ್ರಿಕೆ ತಂದುಕೊಟ್ಟ ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ. [ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?]

ಪತ್ರಿಕೆ ಸಿಕ್ಕಿದ ನಂತರ ಮಂಜುನಾಥ್ ಕೈ ಬರಹದಲ್ಲಿ ಬರೆದ ಪತ್ರಿಕೆಯನ್ನು ಬರೆದು ಓಬಳರಾಜ್‌ಗೆ ನೀಡಿದ್ದ. ಓಬಳರಾಜ್ ರುದ್ರಪ್ಪ ಅವರಿಗೆ 10 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರುದ್ರಪ್ಪ ಅವರ ಪುತ್ರಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಮಗಳಿಗಾಗಿ ಪತ್ರಿಕೆ ಖರೀದಿಸಿದ್ದ ರುದ್ರಪ್ಪ ನಂತರ, ಪತ್ರಿಕೆಯನ್ನು ಖಾಸಗಿ ಕಾಲೇಜು ಮತ್ತು ಕೆಲವು ಟೂಟೋರಿಯಲ್ಸ್‌ಗೆ ಮಾರಾಟ ಮಾಡಿದ್ದರು. [ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]

ಮಾರ್ಚ್ 21ರಂದು ಪ್ರಶ್ನೆ ಪತ್ರಿಕೆ ಬಹಿರಂಗವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾರ್ಚ್ 31ರಂದು ಪತ್ರಿಕೆ ಸೋರಿಕೆಯಾದ ಪ್ರಕರಣದ ಹಿಂದೆಯೂ ಇವರ ಕೈವಾಡವಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಲಾಗಿದೆ.

ಈಗ ಉಳಿದಿರುವ ಪ್ರಶ್ನೆ :

* ಮಂಜುನಾಥ್‌ಗೆ ಪ್ರಶ್ನೆ ಪತ್ರಿಕೆಯನ್ನು ಸರಬರಾಜು ಮಾಡಿದವರು ಯಾರು?
* ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ ಟೂಟೋರಿಯಲ್‌ಗಳ ಹೆಸರುಗಳು ಏನು?
* ಅಪರಾಧದಲ್ಲಿ ಪಾಲ್ಗೊಂಡವರಿಗೆ ದಯಪಾಲಿಸಲಾಗುವ ಶಿಕ್ಷೆಗಳೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+