JDS Candidates 2nd List : ಹಾಸನ ಬಿಟ್ಟು ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಸಂಜೆ (ಏ 1) ಬಿಡುಗಡೆ?

ಬೆಂಗಳೂರು, ಏಪ್ರಿಲ್‌ 1: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಈಗಾಗಲೇ 93 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್‌ ಏಪ್ರಿಲ್‌ 1ರಂದು ಶನಿವಾರ ಸಂಜೆ ವೇಳೆಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

ಎರಡನೇ ಪಟ್ಟಿ ಬಿಡುಗಡೆ ಮಾಡಲಿರುವ ಜೆಡಿಎಸ್ಈ ಬಾರಿಯೂ ಹಾಸನ ಟಿಕೆಟ್‌ ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಇದೆ. ಆದ್ದರಿಂದ ಈ ಬಾರಿಯೂ ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್‌ ಘೋಷಣೆ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನೂ ಹಾಸನ ಟಿಕೆಟ್‌ಗೆ ಅಂತಿಮ ಹಂತದ ಕಸರತ್ತು ನಡೆಸಿರುವ ಎಚ್‌ಡಿ ರೇವಣ್ಣ ಟಿಕೆಟ್‌ ಪಡೆದೇ ತಿರುವ ಹಠಕ್ಕೆ ಬಿದ್ದಿದ್ದಾರೆ.

2nd list of JDS candidates released on Saturday except Hassan

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಅನ್ನು ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ನೀಡುವುದಿಲ್ಲ ಎಂದು ನೇರವಾಗಿ ತಿಳಿಸದಿರುವ ಎಚ್‌ಡಿ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಸನದ ಟಿಕೆಟ್‌ ಅನ್ನು ಸ್ವರೂಪ ಅವರಿಗೆ ನೀಡಲಾಗುತ್ತದೆ ಎಂದು ಗೊತ್ತಿದ್ದರೂ ಶನಿವಾರ ಮಧ್ಯಾಹ್ನ ಎಚ್‌ಡಿ ರೇವಣ್ಣ ಅವರು ಮಾಜಿ ಪ್ರಧಾನಿ ಎಚ್‌ಡಿ ರೇವಣ್ಣ ಅವರ ಮನೆಯಲ್ಲಿ ನಡೆಯುವ ಸಭೆಯಲ್ಲಿ ನೇರವಾಗಿ ಟಿಕೆಟ್‌ ಕೇಳಲಿದ್ದಾರೆ ಎಂದು ಗೊತ್ತಾಗಿದೆ.

ಹಾಸನ ಕ್ಷೇತ್ರಕ್ಕೆ ಈಗಾಗಲೇ ಇಬ್ಬರು ನಾಯಕರು ಟಿಕೆಟ್‌ ಬಯಸಿದ್ದಾರೆ. ಈ ಮಧ್ಯೆ ಹಾಸನದಲ್ಲಿ ರೇವಣ್ಣ ಹೊಸ ತಂತ್ರ ಹಣೆದಿದ್ದಾರೆ ಎನ್ನಲಾಗಿದೆ. ಹೊಳೆನರಸೀಪುರ ಜೊತೆ ಹಾಸನದಲ್ಲೂ ರೇವಣ್ಣ ಅವರೇ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಶುರುವಾಗಿದೆ. 2018ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದ ಬಳಿಕ ರಾಮನಗರವನ್ನು ಪತ್ನಿಗೆ ಎಚ್​ಡಿಕೆ ಬಿಟ್ಟುಕೊಟ್ಟಿದ್ದರು. ಅದೇ ರೀತಿ ಎಚ್.ಡಿ. ರೇವಣ್ಣ ಕೂಡ ಸದ್ಯ ಎರಡು ದೋಣಿಗಳ ಮೇಲೆ ಕಾಲಿಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಸದ್ಯ ಈ ಎಲ್ಲಾ ಚರ್ಚೆಗಳಿಗೂ ಇಂದಿನ 2ನೇ ಪಟ್ಟಿಯಲ್ಲಿ ಉತ್ತರ ಸಿಗಲಿದೆ.

2nd list of JDS candidates released on Saturday except Hassan

ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನುಈಗಾಗಲೇ ಕಾಂಗ್ರೆಸ್​ ಸೆಳೆದಿದ್ದು, ಶಿವಲಿಂಗೇಗೌಡ ಕಾಂಗ್ರೆಸ್​ ಸೇರೋದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಕೆ ಪೈಪೋಟಿ ನೀಡಲು ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಅಲ್ಲದೇ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ ಕ್ಷೇತ್ರದಲ್ಲೂ ಅಭ್ಯರ್ಥಿ ಹುಡುಕಾಟ ನಡೆದಿದೆ. ಇಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಹಾಲಿ ಸಚಿವ ಕೆ. ಗೋಪಾಲಯ್ಯ ವಿರುದ್ದ ಕಣಕ್ಕಿಳಿಯಲು ಸಮರ್ಥ ಅಭ್ಯರ್ಥಿ ಯಾರು ಎಂಬುದು ಶನಿವಾರ ಗೊತ್ತಾಗಲಿದೆ.

ಚೆನ್ನಪಟ್ಟಣದಲ್ಲಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ನಟಿ ರಮ್ಯಾ ಸ್ಪರ್ಧೆ ಮಾಡುತ್ತಾರೆ ಎಭುವುದರ ಬಗ್ಗೆ ಇಲ್ಲಿ ಯಾರೇ ಸ್ಪರ್ಧೆ ಮಾಡಿದರೂ ನನ್ನ ನಿಲುವು ಬದಲಾಗಲ್ಲ, ನಾನು ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡೋದು ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

ಶನಿವಾರದಿಂದ ಚಾಮರಾಜನಗರ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಏ.12ರವರೆಗೂ ಪ್ರಚಾರ ಮಾಡುತ್ತೇನೆ. ಏ.13ರಿಂದ 20ರವರೆಗೂ ನಾಮಪತ್ರ ಸಲ್ಲಿಕೆಗೆ ಹಲವು ಕ್ಷೇತ್ರಗಳಿಗೆ ಹೋಗುತ್ತೇನೆ.‌ ಇನ್ನು ಏಪ್ರಿಲ್‌ 21 ರಿಂದ 24ರವರೆಗೂ ರಾಮನಗರ, ಚನ್ನಪಟ್ಟಣ ಕನಕಪುರದಲ್ಲಿ ಪ್ರಚಾರ ಮಾಡುತ್ತೇನೆ.‌ ಸಮಯ ವ್ಯಯ ಮಾಡದೇ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+