JDS Candidates List : ಮಾರ್ಚ್ ಎರಡನೇ ವಾರ ಜೆಡಿಎಸ್ 2 ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಹಾಸನ ಟಿಕೆಟ್ ಯಾರಿಗೆ?
ಹಾಸನ ಟಕೆಟ್ ವಿಚಾಎ ದಳಪತಿಗಳಲ್ಲಿ ಸಾಕಷ್ಟು ಗೊಂದಲವನ್ನ ಸೃಷ್ಟಿಸಿದ್ದು, ಮಾರ್ಚ್ 14 ರ ಒಳಗೆ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ.
ಬೆಂಗಳೂರು,ಮಾರ್ಚ್ 4: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ದಳಪತಿಗಳು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಇತ್ತ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿದ್ದು, ಈ ತಿಂಗಳ ಕೊನೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್, ಎರಡನೇ ಪಟ್ಟಿ ತಯಾರಿ ನಡೆಸಿದೆ. ಮಾರ್ಚ್ 12 ರಿಂದ 14 ತಾರೀಖಿನ ಒಳಗೆ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆ ಸಾಕಷ್ಟು ಕುತೂಹಲವನ್ನ ಹುಟ್ಟಿಸಿದೆ ಏಕೆಂದರೆ, ಹಾಸನ ಟಿಕೆಟ್ ವಿಚಾರವಾಗಿ ಪಕ್ಷ ಹಾಗೂ ದೇವೇಗೌಡ ಕುಟುಂಬದಲ್ಲಿ ಸಾಕಷ್ಟು ಮಾತುಕತೆ ನಡೆದಿದೆ. ಇನ್ನೂ ಹಾಸನ ಜಿಲ್ಲೆ ರಾಜಕಾರಣ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸಲ್ಲ ಹಾಸನ ಜಿಲ್ಲೆಯನ್ನ ಹೆಚ್.ಡಿ ರೇವಣ್ಣ ಅವರಿಗೆ ಬಿಟ್ಟಿದ್ದೇನೆ. ಪಕ್ಷಕ್ಕಾಗಿ ದುಡಿದವರನ್ನ ನಾನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈಗಾಗಲೇ ಹಾಸನ ಟಿಕೆಟ್ ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಫೈಟ್ ನಡೆಸಿದ್ದದು, ಟಿಕೆಟ್ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಪ್ರಚಾರವನ್ನ ಮಾಡುತ್ತಿದ್ದಾರೆ. ಒಂದು ಕಡೆ ಜೆಡಿಎಸ್ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಭವಾನಿ ರೇವಣ್ಣ ಅವರು ಶಾಸಕರಾಗುವ ಆಸೆಗೆ ತಣ್ಣೀರು ಎರಚಿದರು. ಇದಾದ ಬಳಿಕ ದೇವೇಗೌಡ ಕುಟುಂಬದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡ್ಬೇಕಾ ಅಥವಾ ಸ್ವರೂಪ್ ಗೆ ಟಿಕೆಟ್ ಕೊಡ್ಬೇಕಾ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ವು.

ಹಾಸನ ಟಿಕೆಟ್ ವಿಚಾರವೇ ದಳಪತಿಗಳಿಗೆ ದೊಡ್ಡ ಕಗ್ಗಂಟಾಗಿದ್ದು, ಹಾಸನ ಟಿಕೆಟ್ ವಿಚಾರದಲ್ಲಿ ದೊಡ್ಡ ಗೌಡರು ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಸ್ವರೂಪ್ ಅವರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿರ್ಧರಿಸಿದರು. ಆದರೇ ಈ ಬಾರಿ ನಾನು ಹಾಸಕ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಭವಾನಿ ರೇವಣ್ಣ ಹೇಳಿಕೆ ಕೊಟ್ಟ ಬಳಿಕ ಯಾರಿಗೆ ಟಿಕೆಟ್ ಕೊಡ್ಬೇಕು ಎಂಬ ಲೆಕ್ಕಾಚಾರ ದಳಪತಿಗಳಲ್ಲಿ ನಡೆದಿದೆ.
ಈಗಾಗಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಎಂದು ಹೇಳಿದ್ದಾರೆ. ಅಂದ್ರೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಯಾರು? ಪಕ್ಷದ ಸಾಮಾನ್ಯ ಕಾರ್ಯಕರ್ತ ಭವಾನಿ ರೇವಣ್ಣ ಅವರ ಅಥವಾ ಸ್ವರೂಪ್ ರೇವಣ್ಣ ಅವರ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಈ ಬಾರಿ ಟಿಕೆಟ್ ಪಡೆಯಲೇ ಬೇಕು ಎಂದು ಪಣತೊಟ್ಟಿರುವ ರೇವಣ್ಣ ದಂಪತಿಗಳ ಪ್ಲಾನ್ ವರ್ಕೌಟ್ ಆಗುತ್ತಾ ಅಥವಾ ಕುಮಾರಸ್ವಾಮಿ ಅವರು ಹೇಳಿದಂತೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಸಿಗುತ್ತಾ. ಆ ಸಾಮಾನ್ಯ ಕಾರ್ಯಕರ್ತ ಯಾರು ಎಂಬುದು ಎರಡನೇ ಪಟ್ಟಿ ಬಿಡುಗಡೆ ನಂತ ತಿಳಿಯಲಿದೆ.












Click it and Unblock the Notifications