ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ, ಸಾವಿನ ಪ್ರಮಾಣ ಏರಿಕೆ

ಬೆಂಗಳೂರು, ಮೇ 20: ರಾಜ್ಯದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 28869 ಮಂದಿಗೆ ಕೊರೊನಾ ಸೋಂಕು ತಗುಲಿದೆ, 548 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 14845 ರಾಪಿಡ್ ಆಂಟಿಜನ್ ಟೆಸ್ಟ್ ಹಾಗೂ 105866 ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಗಳನ್ನು ನಡೆಸಲಾಗಿದೆ. ಒಟ್ಟಾರೆ 120711 ಕೊರೋನಾ ಟೆಸ್ಟ್ ನಡೆದಿದೆ.

ಇಂದು 52257 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 1776695 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸಧ್ಯ ರಾಜ್ಯದಲ್ಲಿ 534954 ಕೊರೊನಾ ಸಕ್ರಿಯ ಪ್ರಕರಣಗಳಿದೆ.

28869 New Cases In Karnataka In 24 Hours

ಬೆಂಗಳೂರು ನಗರದಲ್ಲಿ ಇಂದು 9409 ಮಂದಿಗೆ ಹೊಸದಾಗಿ ಕೊರೋನಾ ಕಾಣಿಸಿಕೊಂಡಿದೆ. ಒಂದೇ ದಿನ 289 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 2335524 ಕ್ಕೆ ತಲುಪಿದ್ದು ಒಟ್ಟೂ 23854 ಮಂದಿ ಸಾವನ್ನಪ್ಪಿದ್ದಾರೆ.

ಬಾಗಲಕೋಟೆ 451, ಬಳ್ಳಾರಿ 1109, ಬೆಳಗಾವಿ 948, ಬೆಂಗಳೂರು ಗ್ರಾಮಾಂತರ 678, ಬೆಂಗಳೂರು ನಗರ 9409, ಬೀದರ್ 94, ಚಾಮರಾಜನಗರ 541, ಚಿಕ್ಕಬಳ್ಳಾಪುರ 487, ಚಿಕ್ಕಮಗಳೂರು 945, ಚಿತ್ರದುರ್ಗ 568, ದಕ್ಷಿಣ ಕನ್ನಡ 926, ದಾವಣಗೆರೆ 538, ಗದಗ 469, ಹಾಸನ 273, ಹಾವೇರಿ 321, ಕಲಬುರಗಿ 399, ಕೊಡಗು 439, ಕೋಲಾರ 357, ಕೊಪ್ಪಳ 725, ಮಂಡ್ಯ 734, ಮೈಸೂರು 1879, ರಾಯಚೂರು 633, ರಾಮನಗರ 480, ಶಿವಮೊಗ್ಗ 719, ತುಮಕೂರು 1796, ಉಡುಪಿ 809, ಉತ್ತರ ಕನ್ನಡ 582, ವಿಜಯಪುರ 310, ಯಾದಗಿರಿಯಲ್ಲಿ 295 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+