ಕಾಮೆಡ್-ಕೆ ಪರೀಕ್ಷೆ ಬರೆದ ರಾಜ್ಯದ 22 ಸಾವಿರ ವಿದ್ಯಾರ್ಥಿಗಳು
ಬೆಂಗಳೂರು, ಮೇ 14: ಕಾನೂನು ಕೋರ್ಸ್‌ಗಳು ಮತ್ತು ಖಾಸಗಿ ಕಾಲೇಜಿನಲ್ಲಿರುವ ಎಂಜಿನಿಯರಿಂಗ್ ಗಳ ಪ್ರವೇಶಕ್ಕೆ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ ಲೀಗಲ್ ಸ್ಟಡೀಸ್ ಆಯೋಜಿಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಭಾನುವಾರ ನಡೆದಿದೆ.
ರಾಜ್ಯದ 24 ನಗರಗಳು ಸೇರಿ ದೇಶದಲ್ಲಿ 137 ನಗರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಯಿತು. ದೇಶದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ, 76,414 ವಿದ್ಯಾರ್ಥಿಗಳ ಪೈಕಿ 62,306 ವಿದ್ಯಾರ್ಥಿಗಳು ಮತ್ತು ರಾಜ್ಯದಲ್ಲಿ 108 ಕೇಂದ್ರದಲ್ಲಿ 21,889 ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷೆ ಬರೆದಿದ್ದಾರೆ.
ನಗರದ 48 ಪರೀಕ್ಷಾ ಕೇಂದ್ರಗಳ ಪೈಕಿ 5 ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳು ಲಾಗ್‌ಇನ್ ಮಾಡುವುದು ತಡವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷಾ ಸಮಯವನ್ನು ವಿಸ್ತರಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಒಬ್ಬ ವಿದ್ಯಾರ್ಥಿ ಮೊಬೈಲ್ ಫೋನ್ ಬಳಕೆ ಮಾಡುವ ಮೂಲಕ ನಕಲು ಮಾಡಲು ಪ್ರಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಡಿಬಾರ್ ಮಾಡಲಾಗಿದೆ.

ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 17ರಂದು ಕಾಮೆಡ್-ಕೆ https://www.comedk.org/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಅಂತಿಮ ಸರಿ ಉತ್ತರವನ್ನು 25ರಂದು ಪ್ರಕಟಿಸಲಿದೆ. 28ರಂದು ಸ್ಕೋರ್ ಕಾರ್ಡ್ ದೊರೆಯಲಿದೆ. ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ. ಎನ್. ಕುಮಾರ್ ತಿಳಿಸಿದ್ದಾರೆ.












Click it and Unblock the Notifications