ಕರುನಾಡ ಕಥೆ: 2ನೇ ದಿನವೂ 2,000 ಗಡಿ ದಾಟಿದ ಕೊರೊನೊವೈರಸ್ ಪ್ರಕರಣ!
ಬೆಂಗಳೂರು, ಜುಲೈ.09: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಜನರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆಯು 2,000ದ ಗಡಿ ದಾಟುತ್ತಿದೆ.
Recommended Video
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಆಘಾತವನ್ನು ಉಂಟು ಮಾಡಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ 2228 ಮಂದಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 31105ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮಹಾಮಾರಿಯ ಅಟ್ಟಹಾಸ ಯಥಾರೀತಿಯಲ್ಲಿ ಮುಂದುವರಿದಿದೆ. ಒಂದೇ ದಿನ 1373 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 13,882ಕ್ಕೆ ಏರಿಕೆಯಾಗಿದೆ.

ಕೊರೊನಾವೈರಸ್ ಸೋಂಕಿತರ ಸಾವಿನ ಸಂಖ್ಯೆ ಏರಿಕೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬುಧವಾರ ಒಂದೇ ದಿನ ಮಹಾಮಾರಿಗೆ 54 ಮಂದಿ ಉಸಿರು ಚೆಲ್ಲಿದ್ದರು. ಗುರುವಾರ ರಾಜ್ಯದಲ್ಲಿ 17 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 486ಕ್ಕೆ ಏರಿಕೆಯಾಗಿದೆ.

ಒಂದೇ ದಿನ ರಾಜ್ಯದ 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ ಮತ್ತು ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಮೊದಲ ಬಾರಿಗೆ ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 1373 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ 167, ಕಲಬುರಗಿ 85, ಧಾರವಾಡ 75, ಮೈಸೂರು 52, ಬಳ್ಳಾರಿ 41, ದಾವಣಗೆರೆ 40, ಶಿವಮೊಗ್ಗ 37, ಬಾಗಲಕೋಟೆ 36, ಕೋಲಾರ 34, ಚಿಕ್ಕಬಳ್ಳಾಪುರ 32, ತುಮಕೂರು 27, ಮಂಡ್ಯ 24, ಉತ್ತರ ಕನ್ನಡ 23, ಉಡುಪಿ 22, ಹಾಸನ 21, ಹಾವೇರಿ 18, ರಾಮನಗರ 17, ಯಾದಗಿರಿ 16, ರಾಯಚೂರು 16, ಬೆಂಗಳೂರು 16, ಬೀದರ್ 15, ಚಾಮರಾಜನಗರ 12, ಬೆಳಗಾವಿ 9, ಗದಗ 6, ಚಿಕ್ಕಮಗಳೂರು 5, ಕೊಡಗು 4, ಕೊಪ್ಪಳ 2, ಚಿತ್ರದುರ್ಗ 2, ವಿಜಯಪುರ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ತುರ್ತುನಿಗಾ ಘಟಕದಲ್ಲಿ 457 ಮಂದಿ ಕೊವಿಡ್-19 ಸೋಂಕಿತರು
ಕರ್ನಾಟಕದಲ್ಲಿ ಒಟ್ಟು 457 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು 292, ಧಾರವಾಡ 19, ರಾಯಚೂರು 18, ಕಲಬುರಗಿ 15, ಬಳ್ಳಾರಿ 11, ಬೀದರ್ 11, ಮಂಡ್ಯ 11, ಮೈಸೂರು 10, ಬೆಳಗಾವಿ 9, ಗದಗ 7, ತುಮಕೂರು 7, ದಕ್ಷಿಣ ಕನ್ನಡ 7, ದಾವಣಗೆರೆ 6, ಶಿವಮೊಗ್ಗ 5, ಕೊಪ್ಪಳ 5, ಹಾಸನ 4, ಚಿಕ್ಕಬಳ್ಳಾಪುರ 4, ಬಾಗಲಕೋಟೆ 3, ಉಡುಪಿ 3, ಚಾಮರಾಜನಗರ 2, ಕೊಡಗು 2, ಹಾವೇರಿ 2, ಚಿಕ್ಕಮಗಳೂರು 1, ವಿಜಯಪುರ 1, ರಾಮನಗರ 1, ಉತ್ತರ ಕನ್ನಡ 1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

957 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಗುರುವಾರ ಬರೋಬ್ಬರಿ 957 ಮಂದಿಗೆ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 606 ಮಂದಿ ಗುಣಮುಖರಾಗಿದ್ದಾರೆ. ಹಾವೇರಿ 48, ಕಲಬುರಗಿ 41, ಬಳ್ಳಾರಿ 38, ಉತ್ತರ ಕನ್ನಡ 38, ದಕ್ಷಿಣ ಕನ್ನಡ 36, ಉಡುಪಿ 28, ರಾಮನಗರ 27, ಧಾರವಾಡ 17, ತುಮಕೂರು 17, ಹಾಸನ 16, ಮಂಡ್ಯ 15, ಮೈಸೂರು 14, ಚಿಕ್ಕಬಳ್ಳಾಪುರ 6, ವಿಜಯಪುರ 6 ಮತ್ತು ದಾವಣಗೆರೆ 4 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 12833 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications