ರಾಮನಗರಕ್ಕೆ ಹಿರಿಮೆ: 21 ಕುಗ್ರಾಮಗಳಿಗೆ 'ತಂಬಾಕು ಮುಕ್ತ ಗ್ರಾಮಗಳು' ಎಂಬ ಬಿರುದು
ಇದು ಒಮ್ಮೆಲೆ ಆದ ಸಾಧನೆಯಲ್ಲ. ಹಲವು ವರ್ಷಗಳಿಂದ ತಂಬಾಕು ಬಳಸುತ್ತಿದ್ದ ಹಿರಿಯರು ಇದಕ್ಕೆ ಒಪ್ಪಲಿಲ್ಲ. ತಂಬಾಕು ಮಾರಾಟಗಾರರು ಒಪ್ಪಲಿಲ್ಲ. ವ್ಯಾಪಾರದಲ್ಲಿ ನಷ್ಟವಾಗುತ್ತದೆ ಎಂದರು.
ರಾಮನಗರ, ಮಾರ್ಚ್ 22: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರದ ತಾಲೂಕಿನ 21 ಕುಗ್ರಾಮಗಳು "ತಂಬಾಕು ಮುಕ್ತ ಗ್ರಾಮಗಳು" ಎಂದು ಘೋಷಿಸಲಾಗಿದೆ. 8,514 ಜನರ ಒಟ್ಟು ಜನಸಂಖ್ಯೆಯಿರುವ ಈ ಗ್ರಾಮಗಳು ಈಗ ಸಂಪೂರ್ಣ ತಂಬಾಕು ಮುಕ್ತವಾಗಿವೆ.
ರಾಮನಗರ ಜಿಲ್ಲಾ ತಂಬಾಕು ವಿರೋಧಿ ಘಟಕವು ಮಾರ್ಚ್ 16 ರಂದು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಎನ್‌ಟಿಸಿಪಿ) ಮಂಥನ 2023ದ ರಾಜ್ಯ ಮಟ್ಟದ ವಿಮರ್ಶೆಯಲ್ಲಿ ರಾಮನಗರ ತಾಲ್ಲೂಕು ಮತ್ತು ಜಿಲ್ಲೆಯ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಯ 21 ಹಳ್ಳಿಗಳು ತಂಬಾಕು ಮುಕ್ತವಾಗಿರುವುದನ್ನು ಘೋಷಿಸಿದೆ. ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯ ತಂಬಾಕು ವಿರೋಧಿ ಘಟಕದಿಂದ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ 21 ಕುಗ್ರಾಮಗಳಲ್ಲಿ ಗುಡ್ಡದಹಳ್ಳಿ, ದೊಮ್ಮಚನಹಳ್ಳಿ, ಕಗ್ಗಲಹಳ್ಳಿ, ಚೆನ್ನಾಪುರದೊಡ್ಡಿ, ಮತ್ತು ಲಕ್ಕಸಂದ್ರ ಸೇರಿವೆ. "ನಮ್ಮ ಹಳ್ಳಿಯಲ್ಲಿ ತಂಬಾಕು ಖರೀದಿಸುವುದಿಲ್ಲ ಅಥವಾ ಧೂಮಪಾನ ಮಾಡುವುದಿಲ್ಲ. ಇದು ಸುಲಭವಲ್ಲ, ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ. ತಂಬಾಕು ಮುಕ್ತ ಗ್ರಾಮ ಎಂದು ಕರೆಸಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿದೆ" ಎಂದು ರಾಂಪುರ ಗ್ರಾಮದವರು ಹೇಳುತ್ತಾರೆ.
ಸೌತ್ ಫಸ್ಟ್‌ನೊಂದಿಗೆ ಮಾತನಾಡಿರುವ ಸುಗ್ಗನಹಳ್ಳಿ ಗ್ರಾಮದ 32 ವರ್ಷದ ಸಂದೀಪ್, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳ ತಂಡವು 2019 ರಲ್ಲಿ ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು. ಆಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೆಚ್ಚಿನ ಆಸಕ್ತಿ ವಹಿಸಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಿ ಜಾಗೃತಿ ಮೂಡಿಸಲು ತಿಳಿಸಿದರು ಎಂದಿದ್ದಾರೆ.

ನಮ್ಮ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಅವರು ಆಸಕ್ತಿ ವ್ಯಕ್ತಪಡಿಸಿದರು. ನಾವು ಆರಂಭದಲ್ಲಿ ಹಿಂಜರಿಯುತ್ತಿದ್ದೆವು. ಹಲವಾರು ವರ್ಷಗಳಿಂದ ಅನೇಕ ವೃದ್ಧರಲ್ಲಿ ಬೀಡಿ ಸೇದುವ ಅಭ್ಯಾಸವಿದ್ದವರು, ಬೆಂಗಳೂರಿನಂತಹ ನಗರಗಳಲ್ಲಿ ನೆಲೆಸಿರುವ ಯುವಕರಿದ್ದರು. ಇವರಿಗೆಲ್ಲ ಜಾಗೃತಿ ಮೂಡಿಸುವುದು ಕಷ್ವಾಗಿತ್ತು. ಆದರೆ, ಜಿಲ್ಲಾ ತಂಬಾಕು ನಿಯಂತ್ರಣ (ಡಿಟಿಸಿ) ಘಟಕದ ಅಧಿಕಾರಿಗಳು ತಮ್ಮ ಗ್ರಾಮವನ್ನು ತಂಬಾಕು ಮುಕ್ತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿ ಗ್ರಾಮಸ್ಥರ ಉತ್ಸಾಹ ಹೆಚ್ಚಾಯಿತು ಎಂದಿದ್ದಾರೆ.
ಇದು ಒಮ್ಮೆಲೆ ಆದ ಸಾಧನೆಯಲ್ಲ. . ಹಲವು ವರ್ಷಗಳಿಂದ ತಂಬಾಕು ಬಳಸುತ್ತಿದ್ದ ಹಿರಿಯರು ಇದಕ್ಕೆ ಒಪ್ಪಲಿಲ್ಲ. ತಂಬಾಕು ಮಾರಾಟಗಾರರು ಒಪ್ಪಲಿಲ್ಲ. ವ್ಯಾಪಾರದಲ್ಲಿ ನಷ್ಟವಾಗುತ್ತದೆ ಎಂದರು. ತಂಬಾಕು ಬಿಡಲು ಪ್ರಯತ್ನಿಸಿದಾಗ ಹಲವಾರು ಜನರು ಮನಸ್ಥಿತಿ ಬದಲಾವಣೆಗಳು, ಕಿರಿಕಿರಿ ಆಗಿ ಮತ್ತೆ ಅದಕ್ಕೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಆದರೆ, ಅಧಿಕಾರಿಗಳು, ಗ್ರಾಮಗಳಲ್ಲಿ ಪೂರ್ವಭಾವಿ ಸಭೆಗಳ ನಂತರ, ಜನರಿಗೆ ಸಮಾಲೋಚನೆಗಳನ್ನು ನೀಡಿದರು ಮತ್ತು ಸ್ಥಳೀಯ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಅವರನ್ನು ಕಳುಹಿಸಿ, ಹಲವಾರು ಶ್ವಾಸಕೋಶದ ಸಂಬಂಧಿತ ಪರೀಕ್ಷೆಗಳು ಮತ್ತು ಮಾನಸಿಕ ಸಮಾಲೋಚನೆಗಳನ್ನು ನಡೆಸಲಾಯಿತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ತಂಭಾಕು ಮುಕ್ತಗೊಳಿಸಲು ಮೊದಲ ಗುರಿ ಮಾರಾಟಗಾರರು. ಹೆಚ್ಚಿನ ಮಾರಾಟಗಾರರು ತಮ್ಮ ಅಂಗಡಿಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಕೈಬರಹದ ಪತ್ರಗಳಿಗೆ ಸಹಿ ಹಾಕಿದರು. ಅವರಲ್ಲಿ ಸುಮಾರು 40 % ಪ್ರತಿಶತದಷ್ಟು ಜನರು ಸಹಿ ಮಾಡಲಿಲ್ಲ. ಅವರಿಗೆ ತಂಬಾಕು ಬದಲಿಗೆ ಪರ್ಯಾಯ ಉತ್ಪನ್ನಗಳನ್ನು ಮಾರಾಟ ಮಾಡಲು ಯೋಚಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಳಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಲುವಾಗಿ, ತಂಡವು ಅಕ್ಷರಶಃ ಮನೆ-ಮನೆಗೆ ಪ್ರಚಾರವನ್ನು ಮಾಡಿದೆ. ಮಾರಾಟಗಾರರ ನಂತರ, ಅಧಿಕಾರಿಗಳು ತಂಬಾಕು ಸೇವಿಸುವ ಪ್ರತಿ ಮನೆಯ ಪ್ರತಿಯೊಬ್ಬ ಸದಸ್ಯರ ಪಟ್ಟಿಯನ್ನು ಮಾಡಿದರು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಹೆಸರುಗಳೂ ಸೇರಿದ್ದವು.
"ಈ ಜನರಿಗೆ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಸಹಾಯದಿಂದ ಸಲಹೆ ನೀಡಲಾಯಿತು. ಆದರೆ, ಅವರಲ್ಲಿ ಕೆಲವರು ಇನ್ನೂ ಒಟ್ಟಿಗೆ ಕುಳಿತು ಧೂಮಪಾನ ಮಾಡುವುದು ಮುಂದುವರೆಸಿದರು. ನಾವು ಪೊಲೀಸರ ಸಹಾಯವನ್ನು ಪಡೆದುಕೊಂಡು ದಾಳಿ ನಡೆಸಿದ್ದೇವೆ ಮತ್ತು ಅಂತಹವರಿಗೆ ದಂಡವನ್ನೂ ವಿಧಿಸಿದ್ದೇವೆ. ದಂಡ ವಿಧಿಸುವ ಭಯವು ಅವರಲ್ಲಿ ಅನೇಕರು ಸಾರ್ವಜನಿಕವಾಗಿ ಧೂಮಪಾನವನ್ನು ನಿಲ್ಲಿಸಲು ಕಾರಣವಾಯಿತು" ಎಂದು ರಾಮನಗರದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಚಂದ್ರಶೇಖರ್ ಹೇಳಿದ್ದಾರೆ.
ತಂಬಾಕು ಮುಕ್ತ ಗ್ರಾಮ ಮಾಡುವಲ್ಲಿ ಮಹಿಳೆಯರು ಮತ್ತು ಮಕ್ಕಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ತಮ್ಮ ಕುಟುಂಬಗಳಲ್ಲಿನ ವ್ಯಕ್ತಿಗಳಿಗೆ ತಂಬಾಕು ಬಿಡಲು ಸಲಹೆ ನೀಡಿದರು. ಯಾವುದೇ ಕುಟುಂಬದ ಸದಸ್ಯರು ತಂಬಾಕು ಉತ್ಪನ್ನಗಳನ್ನು ರಹಸ್ಯವಾಗಿ ಬಳಸುತ್ತಿದ್ದರೆ ಅವರ ಶಾಲೆಗಳಿಗೆ ವರದಿ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ಮಕ್ಕಳು ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ಸತತ ಪ್ರಯತ್ನ, ಸಮಾಲೋಚನೆ ಮತ್ತು ಆರೋಗ್ಯ ಶಿಬಿರಗಳು ಎಲ್ಲಾ 21 ಹಳ್ಳಿಗಳ ಜನರಿಗೆ ತಂಬಾಕು ಉತ್ಪನ್ನಗಳನ್ನು ತ್ಯಜಿಸುವಂತೆ ಮನವರಿಕೆ ಮಾಡಿಕೊಟ್ಟರೆ, ಕೆಲವು ಹಳ್ಳಿಗಳು ಕೋವಿಡ್ ಸಾಂಕ್ರಾಮಿಕ ರೋಗವು ಬಂದಾಗ ಮತ್ತೆ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಬಳಸಲಾರಂಭಿಸಿದವು. ಸಾಂಕ್ರಾಮಿಕ ಸಮಯದಲ್ಲಿ ಜನರು ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಭಯಪಡುತ್ತಿದ್ದರೂ, ಒತ್ತಡದಿಂದಾಗಿ ಮತ್ತು ವ್ಯಾಪಾರ ನಷ್ಟದಿಂದಾಗಿ - ಉತ್ಪನ್ನಗಳನ್ನು ಮತ್ತೆ ಮಾರಾಟ ಮಾಡಲು ಪ್ರಾರಂಭಿಸಿದ್ದರು.
ಆದರೆ ಅಧಿಕಾರಿಗಳು ಪಟ್ಟು ಬಿಡದೆ 2021 ರಲ್ಲಿ ಮತ್ತೆ ಹಳ್ಳಿಗಳಿಗೆ ಭೇಟಿ ನೀಡಿ,, ಅಧಿಕಾರಿಗಳು ಮತ್ತೆ ಪ್ರಚಾರ ಆರಂಭಿಸಿದ್ದರು. "ತಂಬಾಕು ಮುಕ್ತ ಮನೆ", "ತಂಬಾಕು ಮುಕ್ತ ಶಾಲೆ", "ತಂಬಾಕು ಮುಕ್ತ ಕಚೇರಿ", "ತಂಬಾಕು ಮುಕ್ತ ಪಂಚಾಯತ್" - ಬೋರ್ಡ್‌ಗಳನ್ನು ಹಾಕುವ ಆಲೋಚನೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಈ ಯೋಜನೆ ಹಳ್ಳಿಗಳಲ್ಲಿ ಇನ್ನಷ್ಟು ಜನರನ್ನು ತಂಬಾಕು ಬಿಡಲು ಪ್ರೇರೇಪಿಸಿದೆ.
ಮೇ 2022 ರ ವೇಳೆಗೆ, ಹಳ್ಳಿಗಳು ತಂಬಾಕು ತ್ಯಜಿಸಿ, ತಮ್ಮ ಗ್ರಾಮಗಳನ್ನು "ತಂಬಾಕು ಮುಕ್ತ ಗ್ರಾಮ" ಎಂದು ಘೋಷಿಸಲು ಘಟಕಗಳು ನಿರ್ಧರಿಸಿದವು. ಈ ಸಾಧನೆಯನ್ನು ಸಂಭ್ರಮಿಸಲು ಅದ್ಧೂರಿ ಆಚರಣೆ ಏರ್ಪಡಿಸಲಾಗಿತ್ತು. ಈಗಲೂ ಈ ಗ್ರಾಮಸ್ಥರು ಹೊರಗಿನವರಿಗೆ ಅಥವಾ ಗ್ರಾಮಸ್ಥರಿಗೆ ತಂಬಾಕು ಉತ್ಪನ್ನಗಳನ್ನು ಗ್ರಾಮಕ್ಕೆ ತರಲು ಬಿಡುತ್ತಿಲ್ಲ. ಎಲ್ಲಾ 21 ಹಳ್ಳಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ, ಖರೀದಿಸುವ ಅಥವಾ ಬಳಸುವುದನ್ನು ಯಾರೂ ಕಾಣುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಅಧಿಕಾರಿಗಳು ಸಂಭ್ರಮ ಪಡುತ್ತಾರೆ.
(ಮಾಹಿತಿ ಕೃಪೆ: ಸೌತ್ ಫಸ್ಟ್)
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications