2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ; ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾಮನಗರ,ಫೆಬ್ರವರಿ27: ರಾಜ್ಯ ರಾಜಕಾರಣದಲ್ಲಿ ಸಕ್ರಿಯಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ರಾಜ್ಯಾದ್ಯಂತ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದು, ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸುತ್ತಿದ್ದಾರೆ. ಆದರೇ ದಿಡೀರ್ ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲ್ಲ ಎಂದು ಹೇಳಿಕೆ ನೀಡಿಡರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಹೌದು, ಸೋಮವಾರ ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಮುಂದೆ 2028 ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಹ ತುಂಬಿದ್ದಾರೆ. ಆದರೆ ಯಾವ ಕಾರಣಕ್ಕಾಗಿ 2023 ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ.

2023 Assembly Elections Will Be My Last Election Says Former CM HD Kumaraswamy

ಇನ್ನೂ ವೇಳೆ ಮಾತು ಮುಂದುವರೆಸಿದ ಅವರು, ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ನಿಲ್ಲಿ, ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡ್ತಿದ್ದಾರೆ ಅಂದ್ರು.
ಆದರೆ ನಾನು ಹೆದರಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ. ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನ ರೆಡಿ ಮಾಡಿ. ರಾಮನಗರದಲ್ಲೂ ಒಬ್ಬನನ್ನು ಬೆಳೆಸಿದ್ದೆ,ಆದರೆ, ಅವರು ಚೂರಿ ಹಾಕಿದ್ರು ಎಂದು ಬೇಸರ ವ್ಯಕ್ತಪಡಿಸಿದರು.

2023 Assembly Elections Will Be My Last Election Says Former CM HD Kumaraswamy

ಇಲ್ಲೊಬ್ಬ ಮಹಾನುಭಾವ ಸುಳ್ಳು ಹೇಳ್ಕೊಂಡು ತಿರುಗ್ತಿದ್ದಾನೆ. ಪಾಪ ಈಗೇನೋ ಸಿಎಂ ಆಗ್ತಾನಂತೆ. ಚನ್ನಪಟ್ಟಣದ ಹಳ್ಳಿ ಹಳ್ಳಿಗಳಲ್ಲಿ ನಾನು ಮುಖ್ಯಮಂತ್ರಿ ಆಗ್ತಿನಿ ಅಂತ ಹೇಳ್ಕೊಂಡು ಓಡಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿ‌.ಪಿ.ಯೋಗೇಶ್ವರ್ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಚನ್ನಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತವಾಗಿರುವುದೇ ಯೋಗೇಶ್ವರ್ ಕೊಡುಗೆ. ಅದು ಅವನ ಕರ್ಮದ ಫಲದಿಂದ ಇವತ್ತೂ ಆಗಿಯೇ ಇದೆ. ಇನ್ನೂ ಆರು ತಿಂಗಳು ನನ್ನ ಸರ್ಕಾರ ಇದ್ದಿದ್ದಾರೆ ಅದು ಕ್ಲಿಯರ್ ಆಗ್ತಿತ್ತು. ನನ್ನ ಸರ್ಕಾರ ತೆಗೆದು ಅದಕ್ಕೆ ಅಡ್ಡಗಾಲು ಹಾಕಿದ್ದೆ ಅವನು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇನ್ನೂ ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನ ಮಧುಗಿರಿಯಲ್ಲಿ ನಿಲ್ಲಿಸಿದ್ದೆ. ಆಗ ಅಭ್ಯರ್ಥಿ ಕೊರತೆ ಇತ್ತು, ಅಲ್ಲಿಯ ಜನ ನನ್ನ ಹೆಂಡತಿಯನ್ನ ಗೆಲ್ಲಿಸಿದ್ರಿ ನಂತರ 2013ರಲ್ಲಿ ನೀವು ಒತ್ತಡ ಹಾಕಿದ್ರಿ. ಹಾಗಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣಕ್ಕೆ ಕಳುಹಿಸಿದ್ದೆ. ಬಳಿಕ 2018ರ ಚುನಾವಣೆಯಲ್ಲಿ ನೀವೆಲ್ಲಾ ಬಂದು ಗಲಾಟೆ ಮಾಡಿದ್ರಿ. ನಾನು ಸ್ಥಳೀಯರನ್ನ ನಿಲ್ಲಿಸಿ ಅಂದೆ. ಆದರೆ ನೀವೆಲ್ಲ ಹಠ ಹಿಡಿದು ಎರಡೂ ಕ್ಷೇತ್ರದಲ್ಲಿ ನಿಲ್ಲುವ ಹಾಗೆ ಮಾಡಿದ್ರಿ, ಬಹುಶಃ ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ. ಆ ಧೈರ್ಯ ಮಾಡಿದ್ದು ನೀವು. ರಾಮನಗರ ಕ್ಷೇತ್ರದ ಜನ ನಾನಿಲ್ಲದಿದ್ದರೂ ಗೆಲ್ಲಿಸಿಕೊಂಡು ಬರ್ತಾರೆ ಎಂದು ತಿಳಿಸಿದರು.

ನನ್ನನ್ನು ಬೆಳೆಸಿದ್ದೇ ರಾಮನಗರ ಜಿಲ್ಲೆಯ ಜನ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿರಬಹುದು. ಆದರೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ, ನನ್ನ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+