ಕುಮುಟಾದ ಸ್ವಸ್ತಿ ಪ್ರಕಾಶನದ ಪ್ರಶಸ್ತಿ ಘೋಷಣೆ

ಉತ್ತರ ಕನ್ನಡ, ಜೂ.7 : ಸ್ವಸ್ತಿ ಪ್ರಕಾಶನ ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಪ್ರಶಸ್ತಿಗಳಿಸಿದ್ದಾರೆ. ಕರ್ಕಿ ಕೃಷ್ಣಮೂರ್ತಿಯವರ ಮಳೆ ಮಾರುವ ಹುಡುಗ ಕಥಾಸಂಕಲನವನ್ನು ಸ್ವಸ್ತಿ ಪ್ರಕಾಶನ ಪ್ರಕಟಿಸಲಿದೆ.

ಮಾರ್ಚ್ ತಿಂಗಳಿನಲ್ಲಿ "ಸ್ವಸ್ತಿ ಪ್ರಕಾಶನ 2014 ನೇ ಸಾಲಿನ "ಕಥಾಸಂಕಲನ" ಪ್ರಶಸ್ತಿಗಾಗಿ ಅರ್ಹರಿಂದ ಕಥಾ ಸಂಕಲನಗಳನ್ನು ಆಹ್ವಾನಿಸುತ್ತು. ರಾಜ್ಯಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು, ಅವುಗಳಲ್ಲಿ 6 ಕಥಾಸಂಕಲನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.

Karki Krishnamurthy

ಖ್ಯಾತ ಕಥೆಗಾರ, ಸಂವೇದನಾಶೀಲ ಬರಹಗಾರರೂ ಆದ ಡಾ. ಶ್ರೀಧರ್ ಬಳಗಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದು, 2014ನೇ ಸಾಲಿಗೆ ಪ್ರಶಸ್ತಿಗಾಗಿ ಕರ್ಕಿ ಕೃಷ್ಣಮೂರ್ತಿಯವರ ಮಳೆ ಮಾರುವ ಹುಡುಗ ಕಥಾಸಂಕಲವನ್ನು ಆಯ್ಕೆ ಮಾಡಿದರು.

ಮಳೆ ಮಾರುವ ಹುಡುಗ ಕಥಾಸಂಕಲನವನ್ನು ಸ್ವಸ್ತಿ ಪ್ರಕಾಶನ ಪ್ರಕಟಿಸಲಿದ್ದು ತೀರ್ಪುಗಾರರಾದ ಶ್ರೀಧರ್ ಬಳಗಾರ್ ಮತ್ತು ಪ್ರಶಸ್ತಿ ಪಡೆದ ಕರ್ಕಿ ಕೃಷ್ಣಮೂರ್ತಿಯವರಿಗೆ ಪ್ರಕಾಶನ ಅಭಿನಂದನೆಗಳನ್ನು ಸಲ್ಲಿಸಿದೆ.

ಪ್ರಶಸ್ತಿ ವಿಜೇತ ಕರ್ಕಿ ಕೃಷ್ಣಮೂರ್ತಿ ಅವರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುತ್ತದೆ ಮತ್ತು ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆ 25 ಪುಸ್ತಕಗಳನ್ನು ಅವರು ಪಡೆಯಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸ್ವಸ್ತಿ ಪ್ರಕಾಶನ ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಿತ್ತು. ಹೊಸ ಕತೆಗಾರರನ್ನುಬೆಳಕಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+