ಹೊಸಕೋಟೆ ವೊಲ್ವೋ ಘಟಕ ವಿಸ್ತರಣೆ, 2 ಸಾವಿರ ಉದ್ಯೋಗ ಸೃಷ್ಟಿ
ಬೆಂಗಳೂರು, ಜುಲೈ 14 : ಹೊಸಕೋಟೆಯಲ್ಲಿರುವ ವೊಲ್ವೋ ಘಟಕ ವಿಸ್ತರಣೆಯಾಗಲಿದ್ದು, ಇದರಿಂದ ಸುಮಾರು 2000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಘಟಕದಲ್ಲಿ ಉತ್ಪಾದನೆಯಾದ ಬಸ್ಸುಗಳನ್ನು ಯುರೋಪ್‌ಗೆ ಕಳುಹಿಸಲು ವೊಲ್ವೋ ಸಿದ್ಧತೆ ನಡೆಸಿದೆ.
ಮಂಗಳವಾರ ವಿಧಾನಸೌಧದಲ್ಲಿ ವೊಲ್ವೋ ಕಾರ್ಪೊರೇಷನ್ ಅಧ್ಯಕ್ಷ ಕಾಕನ್ ಅಗ್ನೇವಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸಕೋಟೆಯ ವೊಲ್ವೋ ಘಟಕ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದರು. ಸ್ವಿಡನ್‌ಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು. [ಬೆಂಗಳೂರು ರಸ್ತೆಗಿಳಿದ ಯುಡಿ ವೋಲ್ವೊ ಬಸ್ ವಿಶೇಷತೆ ಏನು?]

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರು, 'ಹೊಸಕೋಟೆಯಲ್ಲಿ 150 ಎಕರೆ ಪ್ರದೇಶದಲ್ಲಿ ವೊಲ್ವೋ ಘಟಕವಿದೆ. ಇದನ್ನು ಇನ್ನೂ 90 ಎಕರೆಗೆ ವಿಸ್ತರಣೆ ಮಾಡಲು ಕಂಪನಿ ಸಿದ್ಧತೆ ನಡೆಸಿದೆ. ಇಲ್ಲಿ ಉತ್ಪಾದನೆಯಾದ ಬಸ್ಸುಗಳನ್ನು ಯುರೋಪ್‌ಗೆ ರಫ್ತು ಮಾಡಲಾಗುತ್ತದೆ' ಎಂದು ಹೇಳಿದರು. [ಐರಾವತ ಡೈಮಂಡ್ ಕ್ಲಾಸ್ ಬಸ್ ಹೇಗಿದೆ?]
975 ಕೋಟಿ ವೆಚ್ಚದಲ್ಲಿ ಘಟಕವನ್ನು ವೊಲ್ವೋ ವಿಸ್ತರಣೆ ಮಾಡುತ್ತಿದೆ. ಘಟಕ ವಿಸ್ತರಣೆಗೊಂಡರೆ 2125 ಜನರಿಗೆ ಉದ್ಯೋಗ ದೊರೆಯಲಿದೆ. ಸರ್ಕಾರ ಘಟಕವನ್ನು ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಜುಲೈ 21ರಂದಯ ಯುರೋಪ್‌ಗೆ ವೊಲ್ವೋ ತನ್ನ ಮೊದಲ ಬಸ್‌ಅನ್ನು ಕಳುಹಿಸುತ್ತಿದೆ. ಸ್ವಿಡನ್‌ಗೆ ಬರುವಂತೆ ಅವರು ಆಹ್ವಾನ ನೀಡಿದ್ದಾರೆ. ಆಗಸ್ಟ್ ನಂತರ ಈ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ. ಸರ್ಕಾರ ನಡೆಸಲು ಉದ್ದೇಶಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬರುವಂತೆ ವೋಲ್ವೊ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications