ಯಲ್ಲಾಪುರ: ಜಲಪಾತಕ್ಕೆ ತೆರಳಿದವರು ಶವವಾಗಿ ಮರಳಿದರು!

Posted By: ಕಾರವಾರ ಪ್ರತಿನಿಧಿ
Subscribe to Oneindia Kannada

ಯಲ್ಲಾಪುರ, ಅಕ್ಟೋಬರ್ 11: ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ಬಾಸಲ್ ಸಮೀಪದ ಕಾನೂರು ಜಲಪಾತದಲ್ಲಿ ಅಕ್ಟೋಬರ್ 10 ರಂದು ನಡೆದಿದೆ.

ನಾಗರಮಡಿ ಜಲಪಾತದಲ್ಲಿ ಕೊಚ್ಚಿಹೋಗಿದ್ದ 6 ಜನರಲ್ಲಿ ಐವರ ಶವ ಪತ್ತೆ

ಯಲ್ಲಾಪುರದ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ ಯಲ್ಲಾಪುರದ ಕಾಳಮ್ಮನಗರ ನಿವಾಸಿ ಕಿಗನ್ ವಿನೋದ ಪರ್ನಾಂಡಿಸ್ (21), ಗಣಪತಿಗಲ್ಲಿ ನಿವಾಸಿ ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ (17) ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

2 tourists die after drown into water in Kanoor falls Yellapur

ಕಳೆದೆರಡು ದಿನದಿಂದ ಯಲ್ಲಾಪುರ ಪೊಲೀಸರು ಕಾಣೆಯಾಗಿದ್ದ ಈ ಯುವಕರ ಶೋಧ ಕಾರ್ಯದಲ್ಲಿ ನಿರತರಾಗಿದ್ದರು, ಮೃತರ ಶವಗಳ ಮರಣೋತ್ತರ ಪರೀಕ್ಷೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2 tourists died after drown into water in Kanoor waterfalls in Yellapur taluk, Uttara Kannada district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ