ಕಲಬುರಗಿ ಬಳಿ ಹಳಿ ತಪ್ಪಿದ ರೈಲು, 2 ಸಾವು
ಕಲಬುರಗಿ, ಸೆಪ್ಟೆಂಬರ್, 12 : ಮುಂಬೈಗೆ ತೆರಳುತ್ತಿದ್ದ ರೈಲು ಹಳಿ ತಪ್ಪಿ ಉರುಳಿ ಬಿದ್ದು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ಮುರ್ತೂರು ಬಳಿ ನಡೆದಿದೆ. ಅಘಘಾತದಲ್ಲಿ 9 ಜನರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ 2.30ರ ಸುಮಾರಿಗೆ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಕಲಬುರಗಿ ಜಿಲ್ಲೆಯ ಮುರ್ತೂರು ಬಳಿ ಹಳಿ ತಪ್ಪಿದ್ದರಿಂದ ಈ ಅಪಘಾತ ನಡೆದಿದೆ. ಹಳಿ ತುಂಡಾಗಿದ್ದರಿಂದ ರೈಲು ಹಳಿ ತಪ್ಪಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. [ಶಾಸಕರನ್ನು ಬಲಿ ಪಡೆದ ರೈಲು ದುರಂತದ ಚಿತ್ರಗಳು]

ಈ ಅಪಘಾತದಿಂದ ನಾಲ್ಕು ಹಳಿಗಳ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉರುಳಿ ಬಿದ್ದಿರುವ 9 ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. [ರೈಲ್ವೆ ಟಿಕೆಟ್ ಕನ್ ಫರ್ಮ್ ಆಗಿಲ್ಲವೇ? ಚಿಂತೆ ಬಿಡಿ]
ಈ ರೈಲು ಸಿಕಂದರಾಬಾದ್‌ನಿಂದ ಮುಂಬೈಗೆ ತೆರಳುತ್ತಿತ್ತು. ಅಪಘಾತದಲ್ಲಿ ಮೃತಪಟ್ಟವರನ್ನು ಹೈದ್ರಾಬಾದ್ ಪುಷ್ಪಲತಾ (28) ಹಾಗೂ ಜ್ಯೋತಿ (40) ಎಂದು ಗುರುತಿಸಲಾಗಿದೆ.
All possible help being provided to affected families and passengers.Chairman Rail Board, GM, DRM, all orders to be on rescue job
— Suresh Prabhu (@sureshpprabhu) September 12, 2015 ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಚಿಕ್ಕ ಪುಟ್ಟ ಗಾಯಗಳಾದವರಿಗೆ 25 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆಯಲು ಇಲಾಖೆ ಸಹಾಯವಾಣಿಯನ್ನು ಆರಂಭಿಸಿದೆ. ಕಲಬುರಗಿ ಸಹಾಯವಾಣಿ ಸಂಖ್ಯೆ 0847-2255066/2255067, ಸಿಕಂದರಾಬಾದ್ 040-27700968, ಸೊಲ್ಲಾಪುರ 0217-2313331, ಛತ್ರಪತಿ ಶಿವಾಜಿ ಟರ್ಮಿನಲ್ 022-22694040.
Spoke to the DHO,most the injured people are stable, while 1 is being shifted to Hyderabad.The Dist administration is doing all it can
— Priyank Kharge (@PriyankKharge) September 12, 2015 











Click it and Unblock the Notifications