₹ 200 ಕೋಟಿ ವೆಚ್ಚದ ಕಾಮಗಾರಿ: ಕರ್ನಾಟಕದ ಈ ಭಾಗಕ್ಕೆ ಬಂಪರ್, ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ!
ಕರ್ನಾಟಕವು ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ದಿನದಿಂದ ದಿನಕ್ಕೆ ಪೈಪೋಟಿ ನೀಡುತ್ತಿದೆ. ಇದೀಗ ಕರ್ನಾಟಕದಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಯೊಂದು ಜಾರಿಗೆ ಬರುತ್ತಿದೆ. ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಕಾಮಗಾರಿಗಳಲ್ಲೇ ಪ್ರಮುಖ ಹಾಗೂ ಬಹು ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ಈ ಕಾಮಗಾರಿಯೂ ಒಂದಾಗಿದೆ. ಇನ್ನೂ ಈ ಕಾಮಗಾರಿಯನ್ನು / ಫ್ಲೈಓವರ್ ಯೋಜನೆ ಜಾರಿ ಮಾಡುವಂತೆ 2013ರಿಂದಲೂ ಚರ್ಚೆ ನಡೆದಿತ್ತಾದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಈ ಯೋಜನೆಗೆ ನೀಲ ನಕ್ಷೆ ಸಿದ್ಧವಾಗಿದೆ. ಇದರಿಂದ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆಯೂ ಮೂಡಿದೆ.
ಬೆಂಗಳೂರು ಕರ್ನಾಟಕದಲ್ಲೇ ಅಭಿವೃದ್ಧಿಯಲ್ಲಿ ವೇಗದಲ್ಲಿದೆ. ಅಲ್ಲದೇ ಬೆಂಗಳೂರು ಮಾತ್ರವಲ್ಲದೇ 2ನೇ ಮತ್ತು 3ನೇ ಹಂತದ ನಗರಗಳ ಅಭಿವೃದ್ಧಿ ಪರ್ವವೂ ಜೋರಾಗಿದೆ. ಬೆಂಗಳೂರಿನ ಆಚೆ ಅಥವಾ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿವಿಧ ನಗರಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಇದೇ ರೀತಿ ಬಹುಕೋಟಿಯ ಯೋಜನೆಯನ್ನು ಕರ್ನಾಟಕದ ಪ್ರಮುಖ ಭಾಗದಲ್ಲಿ ಜಾರಿ ಮಾಡುವುದಕ್ಕೆ ಮುಂದಾಗಿದ್ದು. ಇದರಿಂದ ರಿಯಲ್ ಎಸ್ಟೇಟ್‌ಗೂ ಬೂಸ್ಟ್ ಸಿಗುವ ನಿರೀಕ್ಷೆ ಮೂಡಿದೆ.

ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಬೆಳಗಾವಿಯಲ್ಲಿ ಕರ್ನಾಟಕ ಅತ್ಯಂತ ದೊಡ್ಡ ಯೋಜನೆ ಜಾರಿ ಆಗುತ್ತಿದೆ. ಬೆಳಗಾವಿಯು ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿದ್ದು ಈ ಭಾಗದಲ್ಲಿ ಮೇಲ್ಸೇತುವೆ (ಫ್ಲೈ ಓವರ್) ನಿರ್ಮಾಣ ಮಾಡಬೇಕು ಎನ್ನುವುದು ಬಹು ವರ್ಷಗಳ ಕನಸಾಗಿದೆ. ಈ ಭಾಗದಲ್ಲಿ
ಸಂಚಾರ ಸಮಸ್ಯೆ ತಗ್ಗಿಸುವುದು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಫೈಓವರ್ ನಿರ್ಮಾಣ ಯೋಜನೆ ಪ್ರಸ್ತಾಪಿಸಲಾಗಿತ್ತು. ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಫ್ಲೈಓವರ್ ನಿರ್ಮಾಣವಾಗಲಿದೆ. ಫೈ ಓವರ್ ನೀಲನಕ್ಷೆ ಅಂತಿಮವಾಗಿದ್ದು, ಇಷ್ಟರಲ್ಲೇ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ.
ಇನ್ನು ಈ ಫೈಓವರ್ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ ಜಾರಕಿಹೊಳಿ ಅವರು 2013ರಿಂದಲೂ ಪ್ರಯತ್ನಿಸಿದ್ದರಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ಈ ನಡುವೆ ವರ್ಷದಿಂದ ವರ್ಷಕ್ಕೆ ಯೋಜನೆಯ ಮೊತ್ತ ಭಾರೀ ಹೆಚ್ಚಳವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಮೊದಲ ಹಂತದಲ್ಲಿ 200 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಇನ್ನು ಎರಡನೇ ಹಂತದಲ್ಲಿ ಕೇಂದ್ರ ಸಾರಿಗೆ ಸಚಿವಾಲಯದ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.
ಇನ್ನು ಈ ಫ್ಲೈಓವರ್ ರಾಷ್ಟ್ರೀಯ ಹೆದ್ದಾರಿ-48ರ ಗಾಂಧಿ ನಗರದ ಸಂಕಮ್ ಹೋಟೆಲ್‌ನಿಂದ ಬೊಗಾರವೇಸ್ ವರೆಗಿನ ಸುಮಾರು 6.5 ಕಿಮೀ ಮಾರ್ಗದಲ್ಲಿ ಈ ಬೃಹತ್ ಮೇಲ್ಸೇತುವೆ ನಿರ್ಮಾಣವಾಗಲಿದೆ.
ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ: ಇನ್ನು ಕರ್ನಾಟಕದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಬೆಳಗಾವಿ ಫ್ಲೈಓವರ್ ಯೋಜನೆಗೆ ಸಂಬಂಧಿಸಿದಂತೆ ನೀಲ ನಕ್ಷೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿ ರಿಯಲ್ ಎಸ್ಟೇಟ್ ಬೂಸ್ಟ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications