ಹಾವೇರಿ: ಕಿಸ್ ಕೊಟ್ಟಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ
ಹಾವೇರಿ, ಆಗಸ್ಟ್ 29 : ಯುವಕನೊಬ್ಬ ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣೇಬೆನ್ನೂರು ತಾಲೂಕಿನ ಹನಮಾಪುರ ತಾಂಡಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರೇಷ್ಮಾ ಲಮಾಣಿ(19) ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ್ದಾಳೆ. ಆಗಸ್ಟ್ 26ರಂದು ಹನಮಾಪುರ ತಾಂಡಾದಲ್ಲಿ ಗಣೆಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ತೆರಳಿದ್ದ ರೇಷ್ಮಾಗೆ ಎಲ್ಲರ ಮುಂದೆ ಸಂತೋಷ್ ಎಂಬ ಯುವಕ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ.

Recommended Video

ಇದರಿಂದ ಮನನೊಂದಿದ್ದ ರೇಷ್ಮಾ ಸೋಮವಾರ ಮಧ್ಯಾಹ್ನ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೇಷ್ಮಾ ಸಾವಿಗೆ ಸಂತೋಷ್ ಲಮಾಣಿ (25) ಕಾರಣ ಎಂದು ಆರೋಪಿಸಿ ಮೃತಳ ಪೋಷಕರು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೇಷ್ಮಾ ಆತ್ಮಹತ್ಯೆ ಶರಣಾದ ವಿಚಾರ ತಿಳಿದು ಸಂತೋಷ್ ಗ್ರಾಮದಿಂದ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಆಗ್ರಹಿಸಿ ಮೃತಳ ಸಂಬಂಧಿಕರು ಮಂಗಳವಾರ ರಾಣೇಬೆನ್ನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.












Click it and Unblock the Notifications