ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ವಚ್ಛತೆ ಕೇವಲ 14 ನಿಮಿಷದಲ್ಲಿ, ಉಪಕ್ರಮ ಪರಿಚಯಿಸಿದ ಮೈಸೂರು, ವಿವರ
ಬೆಂಗಳೂರು, ಅಕ್ಟೋಬರ್ 02: ಕರ್ನಾಟಕ ಸೇರಿದಂತೆ ಭಾರತದಲ್ಲಿ ಸುವ್ಯವಸ್ಥಿತ ರೈಲು ಸಾರಿಗೆ ಸೇವೆ ನೀಡುತ್ತಿರುವ 'ವಂದೇ ಭಾರತ್ ರೈಲಿ'ನ ಸ್ವಚ್ಛತೆಯಲ್ಲಿ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗವು ಪ್ರಮುಖ ಉಪಕ್ರಮ ಆರಂಭಿಸಿದೆ. ಇದು ವಂದೇ ಭಾರತ್ ರೈಲಿನ ಸ್ವಚ್ಛತೆಯ ಕಾರ್ಯಕ್ರಮ ಇದಾಗಿದೆ.
ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗವು ವಂದೇ ಭಾರತ್ ರೈಲನ್ನು 14 ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಸ್ವಚ್ಛಗೊಳಿಸುವ ''14 ನಿಮಿಷಗಳ ಮಿರಾಕಲ್'' ಉಪಕ್ರಮವನ್ನು ಅಕ್ಟೋಬರ್ 1 ರಂದು ಆರಂಭಿಸಿದೆ.

ಭಾರತೀಯ ರೈಲ್ವೆಯ ಈ ವಿನೂತನ ಶುಚಿಗೊಳಿಸುವ ಪ್ರಕ್ರಿಯೆ (ಯಂತ್ರ) ಚೆನ್ನೈ-ಮೈಸೂರು-ಚೆನ್ನೈ 16-ಕೋಚ್ ವಂದೇ ಭಾರತ್‌ಗೆ ಅಳವಡಿಸಲಾಗಿದೆ. ಕೇವಲ ಸಂಪೂರ್ಣ ರೇಕ್ ಅನ್ನು 13 ನಿಮಿಷ ಮತ್ತು 53 ಸೆಕೆಂಡುಗಳಲ್ಲಿ ಸ್ವಚ್ಛಗೊಳಿಸಲಾಯಿತು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶ್ರೀಮತಿ ಶಿಲ್ಪಿ ಅಗರ್ವಾಲ್ ಮಾಹಿತಿ ನೀಡಿದರು.
ಮೈಸೂರು ವಿಭಾಗ ಆರಂಬಿಸಿರುವ ಈ ಉಪಕ್ರಮವು ಕಡಿಮೆ ಸಮಯದಲ್ಲಿ ಗಣನೀಯವಾಗಿ ಕೆಲಸ ಮಾಡಲಿದೆ. ಈ ಸ್ವಚ್ಛತೆ ವಿಚಾರದಲ್ಲಿಯೇ ಈ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ಅವರು ಹೇಳಿದರು.
ಪ್ರತಿ ಕೋಚ್‌ಗೆ 3 ಮಂದಿ ಸಿಬ್ಬಂದಿ
ಈ ಸ್ವಚ್ಚತಾ ವ್ಯವಸ್ಥೆಯು ದೈನಂದಿನ ಪ್ರಕ್ರಿಯೆ ಆಗಿದ್ದು, ಪ್ರತಿ ತರಬೇತುದಾರ 3 ಮೀಸಲಾದ ರೈಲು ಕೋಚಿನಂತೆ ಒಟ್ಟು 48 ಸ್ವಚ್ಛತಾ ಸಿಬ್ಬಂದಿಯು ರೈಲನ್ನು ಸ್ವಚ್ಚಗೊಳಿಸಲಿದ್ದಾರೆ ಎಂದು ಅಗರ್ವಾಲ್ ಅವರು ತಿಳಿಸಿದರು.

ಮೂವರು ಸಿಬ್ಬಂದಿ ಪೈಕಿ ಒಬ್ಬರು ಕೋಚ್ ನಲ್ಲಿನ ಕಸ ಸಂಗ್ರಹಿಸಿ ಡ್ರೈ ಮಾಪಿಂಗ್ ಮತ್ತು ಕಿಟಕಿಯ ಗಾಜಿನ ಹೊರಗೆ ಸ್ವಚ್ಛಗೊಳಿಸುತ್ತಾರೆ. ಎರಡನೇ ಸಿಬ್ಬಂದಿ ಸ್ನ್ಯಾಕ್ ಟೇಬಲ್‌ಗಳು ಮತ್ತು ಆಸನಗಳನ್ನು ಸ್ವಚ್ಛಗೊಳಿಸುತ್ತಾರೆ. ಡಸ್ಟ್‌ಬಿನ್‌ಗಳನ್ನು ಖಾಲಿ ಮಾಡುವುದು, ಶೌಚಾಲಯಗಳು, ಕನ್ನಡಿಗಳು, ದ್ವಾರದ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಇನ್ನೂ ಈ ಎಲ್ಲ ಪ್ರದೇಶಗಳನ್ನು ಶುಚಿಗೊಳಿಸುವುದು ಮೂರನೇ ಸಿಬ್ಬಂದಿಯ ಕೆಲಸವಾಗಿದ್ದು, ಇದೆಲ್ಲವು ಒಂದು ರೈಲು ಬೋಗಿಯಲ್ಲಿ ನಡೆಯುವ ಸ್ವಚ್ಚತಾ ಕಾರ್ಯವಾಗಿದೆ.
ಉತ್ತಮ ಉಪಕ್ರಮ ಪರಿಚಯಿಸಿದ ಮೈಸೂರು
ಈ ಹಿಂದೆ 16 ಬೋಗಿಗಳ ಚೆನ್ನೈ-ಮೈಸೂರು-ಚೆನ್ನೈ ವಂದೇ ಭಾರತ್ ರೈಲಿನ್ನು ಸ್ವಚ್ಛಗೊಳಿಸಲು 30 ರಿಂದ 45 ನಿಮಿಷಗಳು ತೆಗೆದುಕೊಳ್ಳಲಾಗಿತ್ತು. ಇದೀಗ ನೈಋತ್ಯ ರೈಲ್ವೆ ಮೈಸೂರು ವಿಭಾಗವು ''14 ನಿಮಿಷಗಳ ಪವಾಡ''ದ ಪರಿಚಯಿಸಲಾಗಿದೆ. ಒಂದು ಕೋಚ್‌ಗೆ ಮೂರು ಸಿಬ್ಬಂದಿಯನ್ನು ಮೀಸಲಿಟ್ಟಿರುವ ಉತ್ತಮ ಸಂಘಟಿತ ಪ್ರಯತ್ನ ಆಗಿದೆ. ಮುಂದಿನ ದಿನಗಳಲ್ಲಿ ಈ ಸ್ವಚ್ಛತಾ ಪ್ರಕ್ರಿಯೆಯನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಸದ್ಯ ಚೆನ್ನೈ ನಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪು ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿದೆ.












Click it and Unblock the Notifications