KSRTC News: ಕರುನಾಡ ರಥ ಕೆಎಸ್‌ಆರ್‌ಟಿಸಿಗೆ 16 ಪ್ರಶಸ್ತಿಗಳ ಗರಿ-ಯಾವ್ಯಾವ ವಿಭಾಗಗಳಲ್ಲಿ.?, ಮಾಹಿತಿ ಇಲ್ಲಿದೆ
KSRTC News: ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಕರುನಾಡ ರಥ ಅಂತಲೇ ಪ್ರಸಿದ್ಧಿಪಡೆದಿದ್ದು, ಇದು ದೇಶದಲ್ಲೇ ಅತ್ಯುತ್ತಮ ಸಾರಿಗೆ ವಿಭಾಗದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಇದೀಗ 16 ಪ್ರಶಸ್ತಿಗಳು ಲಭಿಸಿವೆ. ಹಾಗಾದರೆ ಇವುಗಳನ್ನು ಯಾವಾಗ ನೀಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾರಿಗೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ 16 ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ. ದೇಶದಲ್ಲಿ ಉತ್ತಮ ಸಾರಿಗೆ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ಕೆಎಸ್‌ಆರ್‌ಟಿಸಿಗೆ ರಾಷ್ಟ್ರ ಮಟ್ಟದ 8 ವೀಡಿಯಾ, 5 ಎಮ್‌ಕ್ಯೂಬ್, 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಹಾಗೂ 1 ಸ್ಕೋಚ್ ಪ್ರಶಸ್ತಿಗಳು ಲಭಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ನೂತನ ತಂತ್ರಜ್ಞಾನ ಉತ್ತಮ ಸೇವೆ ನೀಡುತ್ತಾ ಬಂದಿದ್ದು, ದೇಶದೆಲ್ಲೆಡೆ ಮನೆ ಮಾತಾಗಿದೆ. ಈ ಮೂಲಕ ಮೊದಲಿನಿಂದಲೂ ಒಂದಲ್ಲೊಂದು ಸಾಧನೆಯ ಮೂಲಕ ಪ್ರಶಸ್ತಿಗಳನ್ನು ಪಡೆಯುತ್ತಲ ಬಂದಿದೆ. ಅದರಂತೆಯೇ ಇದೀಗ ರಾಷ್ಟ್ರಮಟ್ಟದ 16 ಪ್ರಶಸ್ತಿಗಳು ಲಭಿಸಿರುವುದು ಹೆಮೆಯ ವಿಷಯವಾಗಿದೆ.
ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್ ಪ್ಲೇಸೆಂಟ್‌ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್ ಪ್ರಶಸ್ತಿ. ಅಶ್ವಮೇಧ ಬ್ರಾಂಡಿಂಗ್‌ಗಾಗಿ ಕಡಿಮೆ ಬಜೆಟ್ ಮಾರ್ಕೆಂಟಿಂಗ್. ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಂಬಾರಿ ಉತ್ಸವದ ಬ್ರಾಂಡಿಂಗ್‌ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್‌ಗಾಗಿ ಮೊಬೈಲ್ ಮಾರ್ಕೆಂಟಿಂಗ್ ಕ್ಯಾಂಪೇನ್ ಸೇರಿ ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್. ಶ್ರೇಷ್ಠ ವೀಡಿಯೊ ಕಂಟೆಂಟ್ ಬ್ರಾಂಡ್ಸ್ ಎಂಟರ್‌ಪ್ರೈಸಸ್ ಪ್ರಶಸ್ತಿಗಳು ಲಭಿಸಿವೆ.
ನಿಗಮವು ಸಾರಿಗೆ ಸಂಜೀವಿನಿ-ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳು ಮತ್ತು ಒಂದು ಸ್ಕೋಚ್ ಪ್ರಶಸ್ತಿಯನ್ನು ಪಡೆದಿದೆ. ವೀಡಿಯೊ ಪ್ರಶಸ್ತಿ ಮತ್ತು ಎಮ್ಕ್ಯೂಬ್ ಪ್ರಶಸ್ತಿಗಳನ್ನು ಗುರುಗಾಂವ್‌ನಲ್ಲಿ ಪ್ರಧಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್‌ಲೈನ್‌ನಲ್ಲಿ ನೀಡಲಾಯಿತು. ಇನ್ನು ಸ್ಕೋಚ್ ಪ್ರಶಸ್ತಿ ಸಮಾರಂಭವು ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications