ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬ್ಯುಲೆನ್ಸ್ ಓವರ್ ಟೇಕ್ ಮಾಡಿದರೆ ಲೈಸೆನ್ಸ್ ರದ್ದು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07 : 'ಆಂಬ್ಯುಲೆನ್ಸ್‌ ಅನ್ನು ಓವರ್ ಟೇಕ್ ಮಾಡುವ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಪೊಲೀಸರಿಗೆ ಸೂಚನೆ ನೀಡುವುದಾಗಿ' ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ 150 ನೂತನ ಆಂಬ್ಯುಲೆನ್ಸ್ ಸಂಚಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. [ಮಂಗಳೂರು : ಕೆಎಂಸಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಸೇವೆ]

siddaramaiah

ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಎಲ್ಲರಿಗೂ ಆರೋಗ್ಯ ಕೊಡಬೇಕು, ಎಲ್ಲೆಡೆಯೂ ಆರೋಗ್ಯ ಇರಬೇಕು ಎನ್ನುವುದು ಸರ್ಕಾರ ಧ್ಯೇಯವಾಗಿದೆ. ಆರೋಗ್ಯ ಕ್ಷೇತ್ರ ನಮ್ಮ ಆದ್ಯತಾ ವಲಯವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು. [ಬೈಕ್ ಆಂಬುಲೆನ್ಸ್: ಏನಿದು, ಬಳಸುವುದು ಹೇಗೆ?]

ambulance

ಮ್ಯಾಗಿ ನಿಷೇಧ ವಾಪಸ್ : 'ರಾಜ್ಯದಲ್ಲಿ ಮ್ಯಾಗಿ ನಿಷೇಧ ವಾಪಸ್ ಪಡೆಯುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ' ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ರಾಜ್ಯ ಸರ್ಕಾರ ನಡೆಸಿದ ಎರಡು ಪರೀಕ್ಷೆಗಳಲ್ಲೂ ಅಗತ್ಯಕ್ಕಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿಲ್ಲ' ಎಂದು ತಿಳಿಸಿದರು.

ut khader

'ಕೋಲ್ಕತ್ತಾದಲ್ಲಿ ಮ್ಯಾಗಿ ಪರೀಕ್ಷೆ ನಡೆಸಿದಾಗ ಶೇ.1ರಷ್ಟು ಸೀಸದ ಪ್ರಮಾಣ ಹೆಚ್ಚಿದೆ ಎಂಬ ವರದಿ ಬಂದಿದೆ. ಈಗ ಇರುವ ವರದಿ ಕುರಿತು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಹೇಳಿದರು.

English summary
Karnataka Chief Minister Siddaramaiah on Wednesday flagged off for new 150 ambulances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X