ಉಡುಪಿ ಕಾಲೇಜು ಪ್ರಕರಣ: ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ: 14 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್
ಬೆಂಗಳೂರು, ಜುಲೈ 28: ಉಡುಪಿ ಕಾಲೇಜು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ಆರೋಪದ ಅಡಿಯಲ್ಲಿ 14 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗುರುವಾರ ಸದಾಶಿವನಗರದಲ್ಲಿ ಇರುವ ಗೃಹ ಸಚಿವರ ನಿವಾಸಕ್ಕೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಅಕ್ರಮವಾಗಿ ಗುಂಪುಗೂಡಿ ಕಾನೂನು & ಸುವ್ಯವಸ್ಥೆಗೆ ಭಂಗವುಂಟಾಗುವ ರೀತಿಯಲ್ಲಿ ಪ್ರತಿಭಟನೆ ಮಾಡಿರುವ 14 ಜನ ಬಿ.ಜೆ.ಪಿ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಘಟನೆಯ ಮರುದಿನವೇ 14 ಕಾರ್ಯಕರ್ತರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಉಡುಪಿಯಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋ ಚಿತ್ರೀಕರಣ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಬಿಜೆಪಿ ಮಹಿಳಾ ಘಟಕವೂ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುಲು ಯತ್ನಿಸಿದ್ದ ಬಿ.ಜೆ.ಪಿ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಾದ ಪ್ರಶಾಂತ್, ನವೀನ್, ಪ್ರಶಾಂತ್, ಅಭಿಲಾಷ್, ವಸಂತ್, ಯತೀಶ್ ಕುಮಾರ್, ಪ್ರಥ್ವಿ,, ವಿಜಯ್, ಭುವನ್ ಕುಮಾರ್, ರಮೇಶ್, ಯಶಸ್ವಿ,, ಯತೀನ್, ಸತೀಶ್ ಹಾಗೂ ಶಿವಪ್ರಸಾದ್ ರವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಇನ್ನೂ ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ನಾನು, ನೀವು ಕಾಲೇಜು ಹೋಗಿದ್ದವರು. ಸ್ನೇಹಿತರ ನಡುವೆ ಕೆಲ ಘಟನೆ ನಡೆಯುತ್ತೆ. ಅದನ್ನು ಎಲ್ಲಿಗೋ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇಂತಹ ಘಟನೆ ನಡೆದರೆ ಅದರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದುನ್ನು ಕಾಲೇಜಿನ ಪ್ರಾಂಶುಪಾಲರಿಗೆ ಬಿಡಬೇಕು. ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಈಗಾಗಲೇ ಅಮಾನತು ಮಾಡಿದ್ದಾರೆ. ಅದನ್ನು ಮೀರಿದ ಘಟನೆಯಾದ್ರೆ ನಾವು ಮಧ್ಯಪ್ರದೇಶ ಮಾಡಬಹುದು ಎಂದು ಹೇಳಿದ್ದರು.












Click it and Unblock the Notifications