ಕರ್ನಾಟಕದಲ್ಲಿ Covid-19 ಸ್ಭೋಟ: 16514 ಮಂದಿಗೆ ಮಹಾಮಾರಿ ಅಂಟು!
ಬೆಂಗಳೂರು, ಜುಲೈ.01: ಕರ್ನಾಟಕದಲ್ಲಿ ಮತ್ತೊಮ್ಮೆ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ ದಾಖಲಾಗಿರುವ ಒಟ್ಟು ಸೋಂಕಿತರ ಸಂಖ್ಯೆಯು ಕನ್ನಡಿಗರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದೆ.
Recommended Video
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊರೊನಾವೈರಸ್ ಸೋಂಕಿತರಿಗೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಒಂದೇ ದಿನ 1272 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 16514ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ ಮಹಾಮಾರಿಗೆ ಏಳು ಮಂದಿ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನಲ್ಲೇ ಇಬ್ಬರು ಬಲಿಯಾಗಿದ್ದು, ಬೀದರ್ ಎರಡು, ಬೆಳಗಾವಿ ಒಬ್ಬರು, ದಕ್ಷಿಣ ಕನ್ನಡ ಒಬ್ಬರು ಕೊರೊನಾವೈರಸ್ ನಿಂದ ಅಸುನೀಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 253 ಮಂದಿಗೆ ಕೊರೊನಾವೈರಸ್ ನಿಂದ ಉಸಿರು ಚೆಲ್ಲಿದ್ದಾರೆ.

ಸಿಲಿಕಾನ್ ಸಿಟಿಯಲ್ಲೇ 735 ಮಂದಿಗೆ ಕೊರೊನಾವೈರಸ್
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಪ್ರತಿನಿತ್ಯ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 735 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ರಾಜ್ಯ ರಾಜಧಾನಿವೊಂದರಲ್ಲೇ ಬರೋಬ್ಬರಿ 5290 ಮಂದಿಗೆ ಸೋಂಕು ಅಂಟಿಕೊಂಡಿದೆ. ಇಂದು ಇಬ್ಬರು ನಗರದಲ್ಲಿ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾವೈರಸ್?
ರಾಜ್ಯದಲ್ಲಿ ಒಂದೇ ದಿನ 1272 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಜಿಲ್ಲಾವಾರು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ಒಂದರಲ್ಲೇ 735 ಜನರಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿ - 85, ದಕ್ಷಿಣ ಕನ್ನಡ - 84, ಧಾರವಾಡ - 35, ಬೆಂಗಳೂರು ಗ್ರಾಮಾಂತರ -29, ಹಾಸನ - 28, ವಿಜಯಪುರ - 28, ಉತ್ತರ ಕನ್ನಡ -23, ಉಡುಪಿ - 22, ಚಾಮರಾಜನಗರ -21, ಬಾಗಲಕೋಟೆ - 20, ತುಮಕೂರು - 19, ದಾವಣಗೆರೆ - 16, ಚಿಕ್ಕಬಳ್ಳಾಪುರ -15, ಕಲಬುರಗಿ -14, ರಾಮನಗರ -14, ಕೊಪ್ಪಳ - 13, ರಾಯಚೂರು - 12, ಚಿತ್ರದುರ್ಗ -12, ಬೀದರ್ -8, ಯಾದಗಿರಿ - 8, ಬೆಳಗಾವಿ -8, ಕೊಡಗು -7, ಮಂಡ್ಯ -5, ಕೋಲಾರ - 5, ಶಿವಮೊಗ್ಗ -3, ಗದಗ -2, ಚಿಕ್ಕಮಗಳೂರು -1, ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ 292 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡ 292 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು - 191, ಧಾರವಾಡ -16, ಕಲಬುರಗಿ -13, ಬಳ್ಳಾರಿ -11, ಬೀದರ್ - 8, ಹಾಸನ - 7, ದಕ್ಷಿಣ ಕನ್ನಡ -6, ಮೈಸೂರು -5, ಗದಗ -5, ರಾಯಚೂರು - 4, ಬಾಗಲಕೋಟೆ - 4, ಉಡುಪಿ -3, ವಿಜಯಪುರ -3, ಕೋಲಾರ - 3, ಕೊಪ್ಪಳ -3, ದಾವಣಗೆರೆ - 2, ಚಾಮರಾಜನಗರ - 2, ತುಮಕೂರು - 1, ಕೊಡಗು -1, ಉತ್ತರ ಕನ್ನಡ -1, ಮಂಡ್ಯ -1, ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ 8063 ಕೊವಿಡ್-19 ಸೋಂಕಿತರು ಆರಾಮ
ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಇನ್ನೊಂದು ಮಗ್ಗಲಲ್ಲಿ ಕೊರೊನಾವೈರಸ್ ಸೋಂಕಿತರ ಗುಣಮುಖರಾಗುತ್ತಿರುವವರ ಸಂಖ್ಯೆ ಇಳಿಮುಖ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 145 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಬೀದರ್ -23, ದಕ್ಷಿಣ ಕನ್ನಡ - 17, ಯಾದಗಿರಿ -14, ಕೊಪ್ಪಳ - 14, ಮೈಸೂರು - 13, ತುಮಕೂರು - 10, ಕಲಬುರಗಿ - 8, ಗದಗ - 7, ಬಾಗಲಕೋಟೆ - 6, ರಾಯಚೂರು - 6, ಚಿಕ್ಕಬಳ್ಳಾಪುರ - 6, ಚಿಕ್ಕಮಗಳೂರು - 5, ಕೋಲಾರ - 4, ರಾಮನಗರ - 4, ವಿಜಯಪುರ - 3, ಉಡುಪಿ - 2, ಮಂಡ್ಯ -2, ದಾವಣಗೆರೆ - 1 ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications