ಕರ್ನಾಟಕದಲ್ಲಿ ಕೊವಿಡ್-19 ಮಹಾಸ್ಫೋಟ, 1267 ಮಂದಿಗೆ ಸೋಂಕು
ಬೆಂಗಳೂರು, ಜೂನ್.28: ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸಿದೆ. ಒಂದೇ ಒಂದು ದಿನ ಸರ್ಕಾರವು ಘೋಷಿಸಿದ ಸೋಂಕಿತರ ಅಂಕಿ-ಸಂಖ್ಯೆಯು ಪ್ರತಿಯೊಬ್ಬ ಕನ್ನಡಿಗರ ಎದೆಯನ್ನು ಝಲ್ ಎನಿಸುತ್ತದೆ.
ರಾಜ್ಯದಲ್ಲಿ 200, 300, 500ರ ಆಸುಪಾಸಿನಲ್ಲಿದ್ದ ದಿನದ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಭಾನುವಾರ ಬರೋಬ್ಬರಿ 1,000ದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1267 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದೆ.
ಕರ್ನಾಟಕದಲ್ಲಿ ಕೊವಿಡ್-19 ಮಹಾಮಾರಿಯು ಮರಣ ಮೃದಂಗವನ್ನು ಬಾರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 16 ಮಂದಿ ಕೊರೊನಾವೈರಸ್ ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ 4 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಒಂದೇ ದಿನ 16 ಜನರು ಕೊವಿಡ್-19ನಿಂದ ಪ್ರಾಣ ಬಿಟ್ಟಿದ್ದಾರೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಬಲಿ
ಕೊರೊನಾವೈರಸ್ ಸೋಂಕಿಗೆ ರಾಜ್ಯದಲ್ಲಿ ಒಂದೇ ದಿನ 16 ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 207 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 88 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಬೀದರ್- 19, ಕಲಬುರಗಿ - 18, ದಕ್ಷಿಣ ಕನ್ನಡ -11, ಬಳ್ಳಾರಿ -11, ವಿಜಯಪುರ -7, ದಾವಣಗೆರೆ - 7, ಧಾರವಾಡ - 6, ತುಮಕೂರು - 5, ಬೆಂಗಳೂರು ಗ್ರಾಮಾಂತರ - 4, ಬಾಗಲಕೋಟೆ - 4, ರಾಮನಗರ - 4, ಗದಗ - 3, ಇತರೆ -3, ಚಿಕ್ಕಬಳ್ಳಾಪುರ - 2, ಉಡುಪಿ - 2, ಹಾಸನ - 2, ಮೈಸೂರು - 2, ರಾಯಚೂರು -2, ಶಿವಮೊಗ್ಗ -2, ಕೊಪ್ಪಳ - 1, ಯಾದಗಿರಿ - 1, ಚಿಕ್ಕಮಗಳೂರು -1, ಬೆಳಗಾವಿ -1, ಕೋಲಾರ -1 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ಒಂದೇ ದಿನ 1267 ಮಂದಿಗೆ ಸೋಂಕು
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1267 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಯಾವ ಜಿಲ್ಲೆಗಳಲ್ಲಿ ಎಷ್ಟು ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ನಗರ - 783, ದಕ್ಷಿಣ ಕನ್ನಡ - 97, ಬಳ್ಳಾರಿ - 71, ಉಡುಪಿ - 40, ಕಲಬುರಗಿ - 34, ಹಾಸನ -31, ಗದಗ - 30, ಬೆಂಗಳೂರು ಗ್ರಾಮಾಂತರ -37, ಧಾರವಾಡ -18, ಮೈಸೂರು - 18, ಬಾಗಲಕೋಟೆ - 17, ಉತ್ತರ ಕನ್ನಡ - 14, ಹಾವೇರಿ - 12, ಕೋಲಾರ -11, ಬೆಳಗಾವಿ - 8, ಬೀದರ್ -7, ಚಿತ್ರದುರ್ಗ -7, ರಾಯಚೂರು -6, ಮಂಡ್ಯ - 6, ದಾವಣಗೆರೆ - 6, ವಿಜಯಪುರ -5, ಶಿವಮೊಗ್ಗ -4, ಚಿಕ್ಕಬಳ್ಳಾಪುರ - 3, ಕೊಪ್ಪಳ - 3, ಚಿಕ್ಕಮಗಳೂರು - 3, ಕೊಡಗು -3, ತುಮಕೂರು -2, ಯಾದಗಿರಿ -1 ಮಂದಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ 243 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡ 243 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು - 155, ಧಾರವಾಡ - 12, ಕಲಬುರಗಿ -10, ಬಳ್ಳಾರಿ - 10, ಬೀದರ್ - 8, ವಿಜಯಪುರ -5, ದಕ್ಷಿಣ ಕನ್ನಡ -5, ಉಡುಪಿ - 4, ಗದಗ -4, ಚಾಮರಾಜನಗರ - 3, ತುಮಕೂರು- 3, ಕೋಲಾರ - 3, ರಾಯಚೂರು - 3, ಹಾಸನ - 3, ಕೊಪ್ಪಳ -2, ದಾವಣಗೆರೆ - 2, ಬೆಳಗಾವಿ -2, ಮೈಸೂರು -2, ಕೊಡಗು -2, ಉತ್ತರ ಕನ್ನಡ -1, ಚಿಕ್ಕಮಗಳೂರು -1, ಹಾವೇರಿ -1, ರಾಮನಗರ -1, ಬಾಗಲಕೋಟೆ -1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ 7507 ಕೊರೊನಾವೈರಸ್ ಸೋಂಕಿತರು ಗುಣಮುಖ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗುವ ಸಂಖ್ಯೆಯು ಎಂದಿನಂತೆ ಸಾಗಿದೆ. ಭಾನುವಾರ 220 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಬಿಡುಗಡೆಯಾದವರ ಸಂಖ್ಯೆ 7507ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಗುಣಮುಖರಾದವರ ಸಂಖ್ಯೆಯ ಪಟ್ಟಿ ಇಲ್ಲಿದೆ. ವಿಜಯಪುರ - 54, ಕಲಬುರಗಿ -50, ಮೈಸೂರು - 32, ಬಳ್ಳಾರಿ- 21, ಯಾದಗಿರಿ - 12, ಉತ್ತರ ಕನ್ನಡ - 11, ಧಾರವಾಡ - 7, ಕೋಲಾರ - 6, ದಾವಣಗೆರೆ - 6, ಗದಗ - 6, ದಕ್ಷಿಣ ಕನ್ನಡ -6, ಉಡುಪಿ - 4, ಬೆಳಗಾವಿ -4, ರಾಯಚೂರು - 1 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications