ನೀರಾವರಿ ಹೋರಾಟ : ಮಹಾರಾಷ್ಟ್ರ ತಲುಪಿದ ಸೈಕಲ್ ಜಾಥ
ಕೋಲಾರ, ಜನವರಿ 27 : ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಕೋಲಾರದಿಂದ ನವದೆಹಲಿಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕೋಲಾರದಿಂದ ಆರಂಭವಾಗಿರುವ ಜಾಥಾ ಮಹಾರಾಷ್ಟ್ರ ತಲುಪಿದೆ.
10ಕೆ ಕೋಲಾರ ಕ್ಲಬ್ ಮತ್ತು ಕೃಷಿಕ ಸಮಾಜ ತಂಡ ಕರ್ನಾಟಕದ ಸದಸ್ಯರು ಜಂಟಿಯಾಗಿ ಈ ಜಾಥಾವನ್ನು ನಡೆಸುತ್ತಿದ್ದಾರೆ. ಸುಮಾರು 3000 ಕಿ.ಮೀ.ಗಳ 30 ದಿನಗಳ ಸೈಕಲ್ ಜಾಥಾ, ದೆಹಲಿ ತಲುಪಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶಾಶ್ವತ ನೀರಾವರಿ ಯೋಜನೆಗಾಗಿ ಮನವಿ ಸಲ್ಲಿಸಲಾಗುತ್ತದೆ. [ಚಿತ್ರಗಳು : ಕುಡಿಯುವ ನೀರಿಗಾಗಿ ಕೋಲಾರ, ಚಿಕ್ಕಬಳ್ಳಾಪುರ ಬಂದ್]

ಕೋಲಾರದಲ್ಲಿ ಆರಂಭವಾದ ಜಾಥಾ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಯಶಸ್ವಿಯಾಗಿ ಕ್ರಮಿಸಿ ಮಹಾರಾಷ್ಟ್ರ ತಲುಪಿದೆ. ಮತ್ತೊಂದು ಕಡೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರದಲ್ಲಿ ಸುಮಾರು 100 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. [ನೀರಾವರಿ ಜಾಗೃತಿಗಾಗಿ ಯುವಶಕ್ತಿಯ ಹೊಸ ಪ್ರಯೋಗ]
ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಈ ಜಾಥಾವನ್ನು ನಡೆಸಲಾಗುತ್ತಿದೆ. [ಕೋಲಾರದಲ್ಲಿ ಹಸಿರು ಕ್ರಾಂತಿಗೆ ಕೈ ಜೋಡಿಸಿದ ಯುವಕರು]

ಜಾಥಾದಲ್ಲಿ ಪಾಲ್ಗೊಂಡಿರುವವರು : ಕೋಲಾರ ಜಿಲ್ಲೆಯ ಬೀರನಹಳ್ಳಿ ಶ್ರೀನಿವಾಸ್, ಕೂಟೇರಿ ನಾಗರಾಜ್, ಲಕ್ಷ್ಮೀಸಾಗರ ವೆಂಕಟ ರಾವ್, ಕೂಟೇರಿ ದೇವರಾಜ್, ಗಜೇಂದ್ರ, ವೇಣುಗೋಪಾಲ್, ದಿಂಬ ವೆಂಕಟೇಶ್ ಗೌಡ, ಅಗ್ನಿಹಳ್ಳಿ ನವೀನ್, ಮುಕುಂದಗೌಡ, ಬಂಗಾರಪೇಟೆ ಚಂದ್ರಪ್ಪ ಮುಂತಾದವರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications