Get Updates
Get notified of breaking news, exclusive insights, and must-see stories!

Rail Museum: ನಂದಿ ಹಾಲ್ಟ್ ನಿಲ್ದಾಣದಲ್ಲಿ ರೈಲು ಮ್ಯೂಸಿಯಂ, ರೈಲು ಪಾರ್ಕ್ ನಿರ್ಮಾಣ ಆರಂಭ

ಬೆಂಗಳೂರು, ಏಪ್ರಿಲ್. 11: ನಂದಿ ಬೆಟ್ಟ, ಚಿಕ್ಕಬಳ್ಳಾಪುರ ಕಡೆಗೆ ಹೋಗುವ ಪ್ರವಾಸ ಪ್ರಿಯರಿಗೆ ಖುಷಿ ಸಂಗತಿಯೊಂದಿದೆ. 107 ವರ್ಷ ಹಳೆಯದಾದ ಯಲುವಹಳ್ಳಿಯ ನಂದಿ ಹಾಲ್ಟ್ ರೈಲು ನಿಲ್ದಾಣದ ಆವರಣದೊಳಗೆ 7 ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರು ರೈಲ್ವೆ ವಿಭಾಗದ ಮೊದಲ ರೈಲು ಮ್ಯೂಸಿಯಂ ಮತ್ತು ರೈಲು ಪಾರ್ಕ್ ನಿರ್ಮಾಣ ಪ್ರಾರಂಭವಾಗಿದೆ.

ನಂದಿ ಹಾಲ್ಟ್ ರೈಲು ನಿಲ್ದಾದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟ ಮತ್ತು ಇತ್ತೀಚೆಗೆ ಚಿಕ್ಕಬಲ್ಳಪುರದ ಬಳಿ ಅನಾವರಣಗೊಂಡ ಆದಿಯೋಗಿ ಶಿವನ ಪ್ರತಿಮೆ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಹೀಗಾಗಿ ಸಂಪ್ರದಾಯ ಮತ್ತು ಆಧುನಿಕತೆಯೊಂದಿಗೆ ಹೆಣೆದುಕೊಂಡಿರುವ ಇಲ್ಲಿನ ಸ್ಥಳ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

107 year old Nandi Halt railway station gets Rail Museum cum Rail Park

ಬೆಂಗಳೂರು ರೈಲ್ವೆ ವಿಭಾಗದ ಆಡಳಿತದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರು ಅವರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, "ಮೊದಲ ಹಂತವನ್ನು 2.38 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ವರ್ಷಾಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ. ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರು ಔಟ್ ಆಫ್ ಟರ್ನ್ ಪಾವತಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

"ಈಗಾಗಲೇ ಮೈಸೂರು ಮತ್ತು ಹುಬ್ಬಳ್ಳಿ ತಮ್ಮದೇ ಆದ ರೈಲು ವಸ್ತು ಸಂಗ್ರಹಾಲಯಗಳನ್ನು ಹೊಂದಿವೆ. ಆದರೆ, ಇದು ಬೆಂಗಳೂರಿಗೆ ಮೊದಲನೆಯದು. ನಗರ ಮೂಲದ ಬಿಂದು ಏಜೆನ್ಸಿ ಮ್ಯೂಸಿಯಂ ಗುತ್ತಿಗೆಯನ್ನು ಪಡೆದುಕೊಂಡಿದೆ. ಹಳೆಯ ಕೋಚ್‌ಗಳಿಂದ ರಚಿಸಲಾದ ಮಿನಿ ರೆಸ್ಟೋರೆಂಟ್, ಕಬ್ಬನ್ ಪಾರ್ಕ್‌ನಲ್ಲಿರುವಂತಹ ಆಟಿಕೆ ರೈಲು, 3D ಆರ್ಟ್ ಗ್ಯಾಲರಿ ಮತ್ತು QR ಸಕ್ರಿಯಗೊಳಿಸಿದ ಚಿತ್ರಗಳ ಪೋಸ್ಟ್‌ಕಾರ್ಡ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ" ಎಂದು ಕುಸುಮಾ ಹರಿಪ್ರಸಾದ್ ವಿವರಣೆ ನೀಡಿದ್ದಾರೆ.

ಇವುಗಳೆಲ್ಲವನ್ನು ಹಳೆಯ ಬೆಂಚುಗಳು, ಹಳಿಗಳು, ಕೋಚ್‌ಗಳು ಮತ್ತು ವಿವಿಧ ನಿಲ್ದಾಣಗಳಿಂದ ಸಂಗ್ರಹಿಸಲಾದ ವಸಾಹತುಶಾಹಿ ಕಾಲದ ಪೀಠೋಪಕರಣಗಳೊಂದಿಗೆ ಜೋಡಿಸಲಾಗಿದೆ. ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಮೂಲಕ ಹರಿಯುವ ಶುಷ್ಕವಾಗಿರು ದಕ್ಷಿಣ ಪಿನ್ನಾಕಿನಿ ನದಿಯನ್ನು ಪುನರುಜ್ಜೀವನಗೊಳಿಸುವುದು ಈ ಕಾರ್ಯಾಚರಣೆಯ ಪ್ರಮುಖ ಅಂಶವಾಗಿದೆ ಎಂದು ಎಡಿಆರ್‌ಎಂ ತಿಳಿಸಿದೆ.

107 year old Nandi Halt railway station gets Rail Museum cum Rail Park

ಮುಮದುವರೆದು, "ನಾವು ಈ ಮೊದಲು ಈ ವಸ್ತು ಸಂಗ್ರಹಾಲಯವನ್ನು ಕೆಎಸ್ಆರ್ ( ಕಾಂತ್ರಿವೀರ ಸಂಗೋಳ್ಳಿ ರಾಯಣ್ಣ) ರೈಲು ನಿಲ್ದಾಣದ ಒಳಗೆ ಮಾಡಬೇಕು ಎಂದು ಯೋಜಿಸಿದ್ದೇವು. ಆದರೆ ಸೀಮಿತ ಜಾಗದ ಲಭ್ಯತೆ ಮತ್ತು ದೊಡ್ಡ ವೆಚ್ಚ ಇದಕ್ಕೆ ಕಡಿವಾಣ ಹಾಕಿತು. ಹೀಗಾಗಿ 15 ಎಕರೆ ಭೂಮಿಯನ್ನು ಹೊಂದಿರುವ ನಂದಿ ಹಾಲ್ಟ್ ಸ್ಟೇಷನ್ ಕ್ಯಾಂಪಸ್ ಅನ್ನು ಆಯ್ಕೆ ಮಾಡಲಾಯಿತು. 15 ಎಕರೆಯಲ್ಲಿ ಕೇವಲ ಅರ್ಧದಷ್ಟು ಜಾಗವು ವಸ್ತುಸಂಗ್ರಹಾಲಯಕ್ಕೆ ಬೇಕಾಗುತ್ತದೆ" ಎಂದು ಕುಸುಮಾ ಹರಿಪ್ರಸಾದ್ ಹೇಳಿದ್ದಾರೆ.

ಉಪಯೋಗವಿಲ್ಲ ಎಂದು ಇಡಲಾಗಿದ್ದ ವಸ್ತುಗಳು ರೈಲ್ವೆಗೆ ಹೆಚ್ಚಿನ ಐತಿಹಾಸಿಕ ಮಹತ್ವವನ್ನು ಹೊಂದಿವೆ ಎಂದು ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ. ಚನ್ನಪಟ್ಟಣ, ಮದ್ದೂರು ಮತ್ತು ಹೆಜ್ಜಾಲದಿಂದ ಹಳೆಯ ಡ್ರೆಸ್ಸಿಂಗ್ ಟೇಬಲ್ ಮತ್ತು ಡೈನಿಂಗ್ ಟೇಬಲ್ ಜೊತೆಗೆ ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಇತರ ಹಳೆಯ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, 108 ವರ್ಷಗಳಷ್ಟು ಹಳೆಯದಾದ ಬೆಂಗಳೂರು-ದೇವನಹಳ್ಳಿ-ಚಿಕ್ಕಬಳ್ಳಾಪುರ ಪಾರಂಪರಿಕ ರೈಲು ಮಾರ್ಗದಲ್ಲಿ ಮೊದಲ ಬಾರಿಗೆ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಒಂದು ದಿನದ ಪ್ರವಾಸ ಪ್ಯಾಕೇಜ್ ಪರಿಚಯಿಸಲು ಯೋಜನೆ ನಡೆಸಿದೆ. ಯೋಜನೆಯ ಭಾಗವಾಗಿ, ಈ ರೈಲು ಮಾರ್ಗದ ಉದ್ದಕ್ಕೂ ಶಿಥಿಲಗೊಂಡ ಪಾರಂಪರಿಕ ನಿಲ್ದಾಣಗಳನ್ನು ಪುನಃಸ್ಥಾಪಿಸಲಾಗುತ್ತಿದೆ. ಈ ಒಂದು ದಿನದ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+