ಮದುವೆ: ಹೊರಾಂಗಣ 200, ಒಳಾಂಗಣ 100 ಜನರಿಗೆ ಅವಕಾಶ
ಬೆಂಗಳೂರು, ಜ.4: ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿರುವ ಸಂದರ್ಭದಲ್ಲಿ ಮದುವೆಗಳಿಗೆ ಸಮಾರಂಭಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಹೊರಾಂಗಣದಲ್ಲಿ ಆಗುವ ಮದುವೆಗಳಿಗೆ 200 ಜನರ ಮಿತಿಯನ್ನು ವಿಧಿಸಲಾಗಿದೆ. ಒಳಾಂಗಣದಲ್ಲಿ ನಡೆಯುವಂತಹ ಮದುವೆಗಳಿಗೆ 100 ಜನರ ಮಿತಿ ವಿಧಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಮದುವೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಹ ಎರಡು ಡೋಸ್ ಲಸಿಕೆ ಪೂರ್ಣಗೊಂಡಿರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

ರಾಜ್ಯದಲ್ಲಿ ಸದ್ಯ ಮದುವೆ ಸೀಜನ್ ಆರಂಭವಾಗುತ್ತಿದ್ದು, ಹೆಚ್ಚಿನ ಜನ ಸೇರುವುದರಿಂದ ಹೆಚ್ಚಿನ ಜನ ಸೇರುತ್ತಾರೆ. ಈ ನಿಟ್ಟಿನಲ್ಲಿ ಮದುವೆಗಳ ಮೇಲೆ ಸರ್ಕಾರ ವಿಶೇಷ ನಿಗಾ ವಹಿಸಿ ನಿಯಂತ್ರಣಕ್ಕೆ ಸೂಚಿಸಿದೆ.
ದೇವಸ್ಥಾನಗಳಿಗೂ ನಿರ್ಬಂಧ:
ಇನ್ನು ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ದೇವಸ್ಥಾನಗಳು, ಮಂದಿರ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಪೂಜೆ ಪುನಸ್ಕಾರ, ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಅಲ್ಲಿನ ಸೇವೆಗಳು ಎಂದಿನಂತೆ ನಡೆಯುತ್ತವೆ. ಆದರೆ, ಭಕ್ತರ ಪ್ರವೇಶಕ್ಕೆ ಮಾತ್ರ ಮಿತಿ ಇರಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಜಾತ್ರೆಗಳನ್ನು ನಡೆಸುವಂತಿಲ್ಲ:
ಜಾತ್ರೆ ಮತ್ತು ಉತ್ಸವಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಜನಜಂಗುಳಿ ಸೇರುವಂತಹ ಜಾತ್ರೆ ಮತ್ತುಉತ್ಸವಗಳನ್ನು ಈ ಕೂಡಲೇ ರದ್ದು ಮಾಡುವಂತೆ ಎಲ್ಲ ಜಿಲ್ಲೆಗಳಿಗೂ ಸೂಚಿಸಲಾಗಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳು ಮಾತ್ರ ನಡೆಯಬಹುದು. ಆದರೆ, ಜನ ಗುಂಪಾಗಿ ಉತ್ಸವಗಳನ್ನು ನಡೆಸುವುದು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications