
ಮಹಾರಾಷ್ಟ್ರದ 10 ಗ್ರಾಮ ಪಂಚಾಯಿತಿಗಳಿಂದ ಕರ್ನಾಟಕ ಸೇರ್ಪಡೆಗೆ ನಿರ್ಣಯ
ಬೆಂಗಳೂರು, ಡಿಸೆಂಬರ್ 6: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಹಸಿಲ್‌ನ ಹತ್ತು ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮಸಭೆಗಳಲ್ಲಿ ಕರ್ನಾಟಕಕ್ಕೆ ಸೇರಲು ನಿರ್ಣಯಗಳನ್ನು ಅಂಗೀಕರಿಸಿವೆ.
ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಸಾಮಾನ್ಯ ಮನವಿಯ ಮೂಲಕ ಮಹಾರಾಷ್ಟ್ರ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸಹ ಸಾರ್ವಜನಿಕರು ಕೋರಿದ್ದಾರೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳು ಮಾತನಾಡಿ, ನಿರ್ಣಯಗಳು ಮತ್ತು ಮನವಿಯ ಪ್ರತಿಯನ್ನು ಸ್ವೀಕರಿಸಿದ್ದು, ಇವುಗಳನ್ನು ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.
'ಮಹಾ' ಪುಂಡರಿಗೆ ಎಚ್ಚರಿಕೆ ಕೊಟ್ಟ ಆರಗ ಜ್ಞಾನೇಂದ್ರ!
ನಿರ್ಣಯ ಅಂಗೀಕರಿಸಿದ ಅಕ್ಕಲಕೋಟ ಗ್ರಾಮಗಳು ಧರ್ಸಂಗ್, ಮಂಗ್ರುಲ್, ಅಲಗೆ, ಶಾವಲ್, ಕೆಗಾಂವ್, ಹಿಲ್ಲಿ, ಕೊರ್ಸೆಗಾಂವ್, ಕಲ್ಲಕರ್ಜಾಲ್, ದೇವಿಕಾವತೆ ಮತ್ತು ಅಂಡೆವಾಡಿ ಇವೇ ಆಗಿದೆ. ಕೆಲವು ವರ್ಷಗಳ ಹಿಂದೆ ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿದ್ದ ಸಾಂಗ್ಲಿಯ ಜಾಟ್ ತೆಹಸಿಲ್‌ನ ಗಡಿ ಗ್ರಾಮಗಳಿಗೆ ಈಗಷ್ಟೇ ತನ್ನ ಜನಸಂಪರ್ಕ ಕಾರ್ಯಕ್ರಮವನ್ನು ಆರಂಭಿಸಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಗ್ರಾಮಗಳ ನಿರ್ಧಾರ ಹಿನ್ನಡೆಯಾಗಿದೆ.
ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹುಪಾಲು ಕನ್ನಡ ಮಾತನಾಡುವ ನಿವಾಸಿಗಳ ಆಧಾರದ ಮೇಲೆ ಜಟ್, ಸೊಲ್ಲಾಪುರ ಮತ್ತು ಅಕ್ಕಲಕೋಟದ 42 ಮಹಾರಾಷ್ಟ್ರ ಗ್ರಾಮಗಳ ಮೇಲೆ ತಮ್ಮ ರಾಜ್ಯದ ಹಕ್ಕನ್ನು ಪಡೆದಿದ್ದಾರೆ.
ಗುಜರಾತ್ ಚುನಾವಣೆ ಕರ್ನಾಟಕದ ಚುನಾವಣೆ ಮೇಲೂ ಪ್ರಭಾವ ಬೀರುತ್ತದೆ: ಅರವಿಂದ ಬೆಲ್ಲದ
ಧರ್ಸಂಗದ ಸರಪಂಚ್ ತಮ್ಮಣ್ಣ ಪಾಟೀಲ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮದಲ್ಲಿದ್ದರೂ ಗಡಿಗ್ರಾಮಗಳನ್ನು ನಿರ್ಲಕ್ಷಿಸಲಾಗುತ್ತಿದೆ. ನಮ್ಮ ಗ್ರಾಮಗಳಲ್ಲಿ ರಸ್ತೆಗಳೇ ಇಲ್ಲ, ಆದರೆ ಕೆಲವೇ ಕಿ.ಮೀ. ಕರ್ನಾಟಕ ಭಾಗದ ಹಳ್ಳಿಗಳು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಅವುಗಳು ಉತ್ತಮ ಗುಣಮಟ್ಟವನ್ನು ಹೊಂದಿವೆ. ನಮಗೆ ಭೀಮಾ ನದಿಯಿಂದ ನೀರಾವರಿಗಾಗಿ ಕಾಲುವೆಗಳ ಮೂಲಕ ಸಾಕಷ್ಟು ನೀರು ಸಿಗುವುದಿಲ್ಲ. ಹಾಗೆಯೇ ನಮ್ಮ ರೈತರಿಗೆ ಹಗಲಿನಲ್ಲಿ ವಿದ್ಯುತ್ ಸಿಗುವುದಿಲ್ಲ. ಕರ್ನಾಟಕದಲ್ಲಿ ಹಾಗಲ್ಲ ಅಭಿವೃದ್ಧಿ ಇದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಮಹಾರಾಷ್ಟ್ರ ಸರ್ಕಾರವು ಸಾಧ್ಯವಾದಷ್ಟು ಬೇಗ ತಮ್ಮ ಕಳವಳಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡರೆ ತಮ್ಮ ನಿರ್ಣಯವನ್ನು ಹಿಂಪಡೆಯಲು ಸಿದ್ಧರಿದ್ದೇವೆ ಎಂದು ಧರಸಂಗ್ ಸರಪಂಚ್ ಹೇಳಿದರು.