Price Hike: ಎಟಿಎಂ ವಿತ್ ಡ್ರಾ & ಹಾಲು ಸೇರಿ ಇಂದಿನಿಂದ ಹಲವು ವಸ್ತು, ಸೇವೆಗಳು ದುಬಾರಿ!
Price Hike: ಮೇ 1, 2025 ಇಂದಿನಿಂದ ಹಲವು ಸೇವೆಗಳಲ್ಲಿ ಬದಲಾವಣೆ ಆಗಲಿವೆ. ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರವು ವಿವಿಧ ಸೇವೆಗಳ ಬೆಲೆ ಏರಿಕೆ / ಸೇವೆಗಳ ಮೇಲೆ ಶುಲ್ಕವನ್ನು ವಿಧಿಸಿದೆ. ಅದರಲ್ಲಿ ಮುಖ್ಯವಾಗಿ ಎಟಿಎಂ ವಿತ್ ಡ್ರಾ ಶುಲ್ಕ ಏರಿಕೆ ಪ್ರಮುಖವಾಗಿದೆ. ಇಂದಿನಿಂದ ನೀವು ಎಟಿಎಂ ನಲ್ಲಿ ಹಣ ತೆಗೆದುಕೊಳ್ಳಬೇಕಾದರೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕು. ಇದರೊಂದಿಗೆ ಇಂದಿನಿಂದ ಕರ್ನಾಟಕ ಹಾಗೂ ದೇಶದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವ ವಿವರ ಇಲ್ಲಿದೆ.
ದುಬಾರಿ ದುನಿಯಾ ಇಂದಿನಿಂದ ಶುರುವಾಗಿದೆ. ಪ್ರತಿ ತಿಂಗಳೂ ಕೆಲವೊಂದು ಪ್ರಮುಖ ಸೇವೆಗಳ ಶುಲ್ಕದಲ್ಲಿ ಬದಲಾವಣೆಗಳು ಆಗುತ್ತವೆ. ಸಾಮಾನ್ಯವಾಗಿ ತಿಂಗಳ 1ನೇ ತಾರೀಖಿನಿಂದ ಬದಲಾವಣೆಗಳು ಶುರುವಾಗುತ್ತವೆ. ಇಂದಿನಿಂದಲೂ ಕೆಲವೊಂದು ಪ್ರಮುಖ ಸೇವೆಗಳ ಬೆಲೆ ಏರಿಕೆ ಸದ್ದಿಲ್ಲದೆ ನಡೆದಿದೆ. ಅದರಲ್ಲಿ ನೀವು ಎಟಿಎಂನಿಂದ ಹಣ ತೆಗೆದುಕೊಳ್ಳುವುದು ಹಾಗೂ ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದ್ದೂ ಸಹ ಇದೆ.

ಎಟಿಎಂಗಳಲ್ಲಿ ವಿತ್ ಡ್ರಾ ಶುಲ್ಕ ಹೆಚ್ಚಳ: ಇಂದಿನಿಂದ ಎಟಿಎಂಗಳಲ್ಲಿ ಹೆಚ್ಚುವರಿ ವಿತ್ ಡ್ರಾಗೆ ನೀವು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು. ಹೌದು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ವಿತ್ ಡ್ರಾ ಮಿತಿ ಶುಲ್ಕ ಹೆಚ್ಚಳವಾಗಿದೆ. ಮೇ 1ರಿಂದಲೇ ಇದು ಜಾರಿಗೆ ಬರಲಿದೆ. ಉಚಿತ ಮಿತಿಯನ್ನು ಮೀರಿದ ಮೇಲೆ ನಿಮ್ಮ ಎಟಿಎಂ ವಿತ್ ಡ್ರಾದ ಮೇಲೆ ಪ್ರತಿ ವಹಿವಾಟಿಗೂ 2 ರೂಪಾಯಿಯೊಂದಿಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ನಗರ ಪ್ರದೇಶದಲ್ಲಿ ಮೂರು ಉಚಿತ ವಿತ್‌ಡ್ರಾಗೆ ಅವಕಾಶ ಇರಲಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ 5 ಉಚಿತ ವಿತ್ ಡ್ರಾಗೆ ಅವಕಾಶ ನೀಡಲಾಗಿದೆ. ಈ ಮಿತಿ ಮೀರಿದರೆ ಶುಲ್ಕ ನಿಗದಿಯಾಗಲಿದೆ.
ಠೇವಣಿ & ಸಾಲದ ಬಡ್ಡಿ ಇಳಿಕೆ: ಇನ್ನು ಮತ್ತೊಂದು ಮಹತ್ವದ ಬದಲಾವಣೆ ಎಂದರೆ ಇಂದಿನಿಂದ ಬ್ಯಾಂಕ್‌ನ ಠೇವಣಿ ಹಾಗೂ ಸಾಲದ ಬಡ್ಡಿ ಇಳಿಕೆಯಾಗಲಿದೆ. ಆರ್‌ಬಿಐ ರೆಪೋದ ದರವನ್ನು ಶೇ.0.25 ಇಳಿಕೆ ಮಾಡಿರುವುದರಿಂದ ಈ ಬದಲಾವಣೆ ಆಗುತ್ತಿದೆ. ಬ್ಯಾಂಕ್‌ಗಳು ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿವೆ. ಇದು ಗ್ರಾಹಕರಿಗೆ ಗುಡ್‌ನ್ಯೂಸ್ ಅಂತಲೇ ಹೇಳಬಹುದು. ಈ ಕ್ರಮದಿಂದಾಗಿ ಪ್ರಮುಖ ಬ್ಯಾಂಕ್‌ಗಳಲ್ಲಿ ಬಡ್ಡಿ ದರವು ಕಡಿಮೆಯಾಗಲಿದೆ.
ವಾಣಿಜ್ಯ ವಾಹನಗಳ ಬೆಲೆಯಲ್ಲಿ ಶಾಕ್: ಕರ್ನಾಟಕ ಸರ್ಕಾರವು ಮತ್ತೊಂದು ಬೆಲೆ ಏರಿಕೆಯನ್ನು ಮಾಡಿದೆ. 10 ಲಕ್ಷ ರೂಪಾಯಿ ಒಳಗಿನ ವಾಣಿಜ್ಯ ವಾಹನಗಳ ಮೇಲೆ ಕರ್ನಾಟಕ ಸರ್ಕಾರವು ಶೇ 5%ರಷ್ಟು ಜೀವಿತಾವಧಿ ತೆರಿಗೆಯನ್ನು ವಿಧಿಸಿದೆ. ಅಲ್ಲದೇ 25 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮೇಳೆ ಶೇ 10% ತೆರಿಗೆ ವಿಧಿಸುವುದಕ್ಕೆ ನಿರ್ಧರಿಸಲಾಗಿದೆ.
ಇನ್ಮುಂದೆ ಒಂದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್: ಇನ್ಮುಂದೆ ರಾಜ್ಯದಲ್ಲಿ ಒಂದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಇರಲಿದೆ. ಇಲ್ಲಿಯ ವರೆಗೆ ರಾಜ್ಯದಲ್ಲಿ ಒಟ್ಟು 43 ಬ್ಯಾಂಕ್‌ಗಳಿದ್ದವು. ಇದೀಗ ಬ್ಯಾಂಕ್‌ಗಳ ಸಂಖ್ಯೆ 28ಕ್ಕೆ ಇಳಿಕೆಯಾದಂತೆ ಆಗಿದೆ.
ಅಮುಲ್ ಹಾಲಿನ ದರ ಏರಿಕೆ: ಇಂದಿನಿಂದ ಅಮುಲ್ ಹಾಲಿನ ದರ ಏರಿಕೆ ಆಗಲಿದೆ. ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಅಮುಲ್ ಮುಂಚೂಣಿಯಲ್ಲಿದೆ. ಅಮುಲ್ ಹಾಲಿನ ಬೆಲೆಯು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ. ನಂದಿನ ಉತ್ಪನ್ನಗಳಿಗೆ ಪೈಪೋಟಿ ನೀಡುತ್ತಿದ್ದ ಈ ಉತ್ಪನ್ನವು ಇದೀಗ ಬೆಲೆ ಏರಿಕೆಯ ಶಾಕ್ ನೀಡಿದೆ.












Click it and Unblock the Notifications