Karnataka Assembly Elections: ಸಾರಾ ಈ ಬಾರಿಯೂ ಹಾಕುವರೇ ಗೆಲುವಿನ ಹಾರ?
ಕೆಆರ್ ನಗರ, ಮಾರ್ಚ್ 23: ಮೈಸೂರು ಜಿಲ್ಲೆಯ ಭತ್ತದ ಕಣದ ಎಂದೇ ಖ್ಯಾತವಾದ ವಿಧಾನಸಭಾ ಕ್ಷೇತ್ರ ಕೆಆರ್ ನಗರ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಸ್ಥಿತಿಗತಿ ಹೇಗಿದೆ ನೋಡೋಣ.
ಕೆಆರ್‌ನಗರದ ಪೂರ್ಣ ಹೆಸರು ಕೃಷ್ಣರಾಜನಗರ. ಕೃಷ್ಣರಾಜನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಎಡತೊರೆ ಎಂದು ಕರೆಯಲ್ಪಡುತ್ತಿತ್ತು. ಇದು ಸರಿಸುಮಾರು 1925-1930ರ ಮಧ್ಯಂತರ ಇಸವಿಯಲ್ಲಿ ನಗರವಾಗಿ ಸ್ಥಾಪಿತಗೊಂಡಿದ್ದು, ಕಾವೇರಿ ನದಿ ಪ್ರವಾಹದ ಹಾನಿಯ ಪರಿಣಾಮ ಎಡತೊರೆಯು ಹುಟ್ಟಿ ನಂತರ ಕೃಷ್ಣರಾಜನಗರ ಎಂದಾಯಿತು ಎಂದು ದಾಖಲೆಗಳು ಹೇಳುತ್ತವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಾಮಾಂಕಿತವಾಗಿ ಇದನ್ನು ಕೃಷ್ಣರಾಜನಗರ ಎಂದು ನಾಮಕರಣ ಮಾಡಲಾಗಿದೆ. ಇವರ ಕಾಲಘಟ್ಟದಲ್ಲಿ ಕಾವೇರಿ ನದಿಗೆ ಅಚ್ಚಕಟ್ಟಾದ ಸೇತುವೆ ನಿರ್ಮಾಣ ಮಾಡಲಾಗಿದೆ. ಕೆ.ಆರ್.ನಗರಕ್ಕೆ ಉತ್ತಮ ರೈಲು ಸಂಪರ್ಕವಿದ್ದು ಹಾಸನವನ್ನು ಮೈಸೂರಿಗೆ ಸಂಪರ್ಕಿಸುತ್ತದೆ. ಕೆ.ಆರ್.ನಗರದಿಂದ 22ಕಿ.ಮೀ ದೂರದಲ್ಲಿ ಪ್ರಸಿದ್ದ ಚುಂಚನಕಟ್ಟೆ ಸ್ಥಳದಲ್ಲಿ ಕಾವೇರಿ ನದಿಯ ಜಲಪಾತವಿದ್ದು ನೋಡುಗರನ್ನು ಆಕರ್ಷಿಸುತ್ತದೆ.
ಈ ತಾಲೂಕಿನಾದ್ಯಂತ ಕಾವೇರಿ ನದಿಯ ಪಾತ್ರವಿದ್ದು ನೀರಾವರಿ ಯೊಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚುಂಚನಕಟ್ಟೆ, ಕಟ್ಟೆಪುರ ಮೊದಲಾದ ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಹಲವಾರು ಏತ ನೀರಾವರಿ ಯೊಜನೆಗಳನ್ನೂ ಕೂಡ ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್. ನಗರವು ರಾಜ್ಯ ಹೆದಾರಿ ೫೭ ರಲ್ಲಿ ಬರುವುದರಿಂದ ವ್ಯವಸ್ತಿತ ರಸ್ತೆಗಳ ನಿರ್ಮಾಣವಾಗಿದೆ. ಶೈಕ್ಷಣಿಕವಾಗಿ. ಸಾಂಸ್ಕೃತಿಕವಾಗಿ ತನ್ನದೇ ಆದ ಛಾಪನ್ನು ಹೊಂದಿರುವ ಕೆ.ಆರ್.ನಗರ ತಾಲೂಕು ಪ್ರಭಾವಿ ವ್ಯಕ್ತಿಗಳನ್ನು ಈ ನಾಡಿಗೆ ಕೊಟ್ಟಿದೆ. ರಾಜಕಾರಣಿಗಳಾದ ಶ್ರೀ ಹೆಚ್.ವಿಶ್ವನಾಥ. ಶ್ರೀ ಸಾ.ರಾ.ಮಹೇಶ್ . ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಬೆ.ಗೊ.ರಮೇಶ್, ರಾಮಸ್ವಾಮಿಗೌಡ ಎನ್ ಮುಂತಾದವರು ಇದೇ ತಾಲ್ಲೂಕಿನವರು. ಇಲ್ಲಿನ ಪ್ರಮುಖ ಬೆಳೆಗಳು ಹೊಗೆಸೊಪ್ಪು(ತಂಬಾಕು) ಭತ್ತ ರಾಗಿ ಅಡಿಕೆ ತೆಂಗು ತೊಗರಿ ಅಲಸಂದೆ ಹುರುಳಿಕಾಳು.

ರಾಜಕೀಯವಾಗಿ ಇದು ಜೆಡಿಎಸ್‌ನ ಭದ್ರಕೋಟೆ. ಹಲವಾರು ಬಾರಿಯಿಂದ ಇಲ್ಲಿ ಸಾರಾ ಮಹೇಶ್ ಅವರದ್ದೇ ಆಧಿಪತ್ಯ. ಆದರೆ ಈ ಬಾರಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ನಡುವೆ ನೇರ ಪೈಪೋಟಿ ಇದೆ. ಈ ಚುನಾವಣೆ ರವಿಶಂಕರ್ ಅವರಿಗೆ ಅಳಿವು ಉಳಿವಿನ ಸ್ಪರ್ಧೆಯಾಗಿದೆ. ಸತತವಾಗಿ ಗೆಲ್ಲುವ ಅಭ್ಯರ್ಥಿಯಾಗಿರುವುದರಿಂದ ಸಾರಾ ಮಹೇಶ್ ಅವರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ಆಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಷ್ಟಾಗಿ ಚಾಲ್ತಿಯಲ್ಲಿಲ್ಲದ ಪಕ್ಷವಾಗಿದೆ, ಹಾಗಾಗಿ ಇಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ನೇರ ಸ್ಫರ್ಧೆ ಇದೆ. ಇಲ್ಲಿ ಜಾತಿ ಆಧಾರದ ಮೇಲೆ ಮತಗಳು ಬೀಳುತ್ತವೆ, ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಅಧಿಕವಾಗಿದ್ದು, ಅವೇ ಇಲ್ಲಿ ನಿರ್ಣಯಕ. ಇಲ್ಲಿ 58,000 ಒಕ್ಕಲಿಗ ಸಮುದಾಯದ ಮತಗಳು ಹಾಗೂ 52,000 ಕುರುಬ ಸಮುದಾಯದ ಮತಗಳು ಇವೆ. ಈ ಕಾರಣದಿಂದ ಜಿಲ್ಲೆಯಲ್ಲಿ ಜಾತಿ ರಾಜಕಾರಣವು ಮತದಾರರಿಂದ ಹೆಚ್ಚು ಪ್ರಭಾವಿತವಾಗಿದೆ. ಇದಲ್ಲದೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಸಿಎಚ್ ವಿಶ್ವನಾಥ್ ಅವರ ಪ್ರಭಾವವೂ ಇಲ್ಲಿದೆ.
ಈ ಎರಡು ಸಮುದಾಯಗಳಲ್ಲದೆ 20,000 ಎಸ್‌ಸಿ, 15,000 ಎಸ್‌ಟಿ, 15,000 ಲಿಂಗಾಯತ, 12,000 ಮುಸ್ಲಿಂ, 35,000 ಇತರ ಹಿಂದುಳಿದ ಸಮುದಾಯಗಳಿವೆ. ಕಳೆದ 15 ಚುನಾವಣೆಗಳಲ್ಲಿ ಇಲ್ಲಿ 7 ಬಾರಿ ಜೆಡಿಎಸ್, 5 ಬಾರಿ ಕಾಂಗ್ರೆಸ್, 3 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ರಾಜ್ಯಕ್ಕೆ 3 ಸಚಿವರನ್ನು ನೀಡಿದ ಕ್ಷೇತ್ರ ಕೆಆರ್ ನಗರವಾಗಿದೆ. ಈಗಾಗಲೇ ಹ್ಯಾಟ್ರಿಕ್ ಬಾರಿಸಿರುವ ಶಾಸಕ ಸಾರಾ ಮಹೇಶ್ ಈ ಬಾರಿಯೂ ಗೆದ್ದು ಮಂತ್ರಿಯಾಗುತ್ತೇನೆ ಎಂದು ಭಾವಿಸಿದ್ದಾರೆ.
ಕಾಂಗ್ರೆಸ್‌ನಿಂದ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಅವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ ರವಿಶಂಕರ್ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇಲ್ಲಿ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯ ಮಹದೇವ್ ಹಾಗೂ ಮುಖಂಡ ಬಾಬು ಹನುಮಾನ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಆಪ್ತ ಬಾಬು ಹನುಮಾನ್ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಬಿಜೆಪಿ ಬಲೆ ಬೀಸಿದ್ದರೆ, ಸಾರಾ ಬೆಂಬಲಿಗರು ಅವರನ್ನು ಪಕ್ಷಕ್ಕೆ ಸೆಳೆಯಲು ಕಾರ್ಯತಂತ್ರವನ್ನು ಪ್ರಾರಂಭಿಸಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಹಣಾಹಣಿಯಿದ್ದು ಸ್ಥಳೀಯ ನಾಯಕರು ಪಕ್ಷದ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಬಿಜೆಪಿ ಜಿಲ್ಲಾ ವಕ್ತಾರೆ ಎಚ್.ಜಿ.ಶ್ವೇತಾ ಗೋಪಾಲ್ ಅವರ ಪತ್ನಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಂತಿಮ ಹಣಾಹಣಿ ನಡೆಯಲಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications