ವಿಜಯಪುರ ಬಾಲಕಿ ಅತ್ಯಾಚಾರ ವಿರೋಧಿಸಿ ಕಲಬುರಗಿ ಬಂದ್

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಡಿಸೆಂಬರ್ 28 : ವಿಜಯಪುರದಲ್ಲಿ ನಡೆದ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಗುರುವಾರ ಕರೆ ನೀಡಲಾದ ಕಲಬುರಗಿ ಬಂದ್ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಸ್ತಬ್ಧವಾಗಿದೆ.

ಬೆಳಗಾವಿ : ಮಹಿಳೆ ಮೇಲೆ ಗ್ಯಾಂಗ್ ರೇಪ್, ಇಬ್ಬರ ಬಂಧನ

ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆ ಖಂಡಿಸಿ ದಲಿತ ಸಮನ್ವಯ ಸಮಿತಿ ಮತ್ತು ನಾನಾ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕಲಬುರಗಿ ಬಂದ್‌ಗೆ ಉತ್ತಮ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 500ಕ್ಕೂ ಅಧಿಕ ಬೈಕ್ ಗಳಲ್ಲಿ ಯುವಕರಿಂದ ಜಾಥಾ ನಡೆಯಿತು.

Vijayapura girl rape and murder: Kalaburagi bandh

ನಗರದಾದ್ಯಂತ ಪ್ರತಿಭಟನೆ ಜೋರಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೂ ಹೊಸ ಹಾಗೂ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಓವರ್ ಮತ್ತು ಅಂಡರ್ ಬ್ರಿಡ್ಜ್ ಸಂಚಾರವನ್ನು ಪ್ರತಿಭಟನಾಕಾರರು ತಡೆ ಕಾರಣ ವಾಹನ ಸವಾರರು ಪರದಾಡಿದರು.

ಕಾಂಗ್ರೆಸ್ ಕಾರ್ಯಕರ್ತರು ಸಹ ಬಂದ್‌ ಗೆ ಬೆಂಬಲ ಸೂಚಿಸಿದರು. ಈ ವೇಳೆ ಸಚಿವ ಅನಂತಕುಮಾರ ರಾಜೀನಾಮೆಗೆ ಆಗ್ರಹಿಸಿ ಟೌನ್ ಹಾಲ ಬಳಿ ಪ್ರತಿಭಟಿಸಿದರು. ಅಂಗಡಿ ಮುಂಗಟ್ಟು ವಹಿವಾಟು ಬಂದ್‌ ಮಾಡಿ ವ್ಯಾಪಾರಸ್ಥರು ಬೆಂಬಲ ಸೂಚಿಸಿದರು.

ರೈತ ಪರ ಸಂಘಟನೆಗಳು ಮತ್ತು ಎಪಿಎಂಸಿಯಲ್ಲಿ ವರ್ತಕರು ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಿ ಬೆಂಬಲ ನೀಡಿದರು. ನಗರದ ಹೊರವಲಯದಲ್ಲಿ ಪ್ರತಿಭಟನೆ ಕಾವು ಜೋರಾಗಿರುವುದರಿಂದ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಬೇರೆ ಊರಿನಿಂದ ಬಂದ ಪ್ರಯಾಣಿಕರು ನಡು ರಸ್ತೆಯಲ್ಲೇ ಪರದಾಡುತ್ತಿದ್ದಾರೆ.

ದಲಿತ ಮತ್ತು ಕನ್ನಡಪರ ಸಂಘಟನೆಗಳಿಂದ ಪರಿಸ್ಥಿತಿ ಕೈ ಮೀರದಂತೆ ನಾನಾ ಮುಖಂಡರ ನೇತೃತ್ವದಲ್ಲಿ 10ಕ್ಕೂ ಅಧಿಕ ಮೇಲುಸ್ತುವಾರಿ ಸಮಿತಿ ರಚನೆಗೊಂಡಿದೆ. ದಲಿತ ಮುಖಂಡರಾದ ವಿಠ್ಠಲ್ ದೊಡ್ಮನಿ, ಸೂಯ೯ಕಾಂತ ನಿಂಬಾಳ್ಕರ್, ನ್ಯಾಯವಾದಿ ಹಾಗೂ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಹಣಮಂತ ಯಳಸಂಗಿ, ಸುರೇಶ್ ಹಾದಿಮನಿ, ಸಂತೋಷ್ ಮೇಲ್ಮನಿ, ವಿಠ್ಠಲ್ ವಗ್ಗನ್, ಮಲ್ಲಪ್ಪ ಎಂ.ಹೊಸ್ಮನಿ, ಜಿಲ್ಲಾ ನ್ಯಾಯವಾದಿಗಳ ಸಂಘದ ವೀರಶೈವ, ಲಿಂಗಾಯತ.

ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಘಟಕಗಳ ಮುಖಂಡರು, ಕನ್ಡಡಪರ ಸಂಘಟನೆಗಳ ಮುಖಂಡರಾದ ಶಿವಕುಮಾರ ನಾಟಿಕಾರ್, ಅರುಣಕುಮಾರ್ ಪಾಟೀಲ್, ಸಚಿನ್ ಫರಹತಾಬಾದ್, ಮಂಜುನಾಥ ನಾಲವಾರಕರ್ , ಮಾದಿಗ ದಂಡೋರ ಸಮಿತಿಯ ದಶರಥ ಕಲಗುತಿ೯ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯ ಎಲ್ಲ 11 ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದು, ಅಹಿತಕರ ಘಟನೆಗೆ ಮುಂದಾಗದಂತೆ ಪ್ರತಿಭಟನಾಕಾರರಿಗೆ ಬಂದ್ ಸಂಚಾಲಕರು ಹಾಗೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೇಂದ್ರ ಬಸ್ ನಿಲ್ದಾಣದ ಬಳಿ ಟೈರ್ ಗೆ ಬೆಂಕಿ ಹಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಟೈರಿಗೆ ಬೆಂಕಿ ಹಚ್ಚುವುದಾಗಿ ಹಠ ಹಿಡಿದ ಪ್ರತಿಭಟನಾಕಾರರು ಪೊಲಿಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ಬಂದ್ ಬಿಸಿ ಶವಕ್ಕೂ ತಟ್ಟಿದೆ. ನಗರದ ಆರ್ ಟಿ ಓ ಕಚೇರಿ ಬಳೀ ಶವ ಸಾಗಿಸುತ್ತಿದ್ದ ಟಂಟಂನ್ನು ಪ್ರತಿಭಟನಾಕಾರರು ತಡೆಹಿಡಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಟಂಟಂ ತಡೆ ಹಿಡಿದಿದ್ದರು. ನಂತರ ಮೃತನ ಸಂಬಂಧಿಕರಿಂದ ಮನವೊಲಿಸಿ ಶವವನ್ನು ಸಾಗಿಸಲಾಯಿತು.

ನಗರದಲ್ಲಿ ಆಟೋ, ಬಸ್‌ಗಳು ರಸ್ತೆಗೆ ಇಳಿದಿಲ್ಲ. ಒಳರಸ್ತೆಗಳಿಗೂ ಬಂದ್ ಬಿಸಿ ತಟ್ಟಿದ್ದರಿಂದ ಜನರು ಮನೆಯಿಂದ ಹೊರಬರುತ್ತಿಲ್ಲ. ಒಟ್ಟಾರೆ ಕಲಬುರಗಿ ಬಂದ್ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎನ್ನಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dalit samanvaya samiti and other pro kannada Activists shows thier condolences and called Kalaburagi bandh Thursday. Most of Shoppes and market are shut down unanimously.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ