• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಆರೋಪದಿಂದ ನನ್ನ ಕುಟುಂಬ ಮಾನಸಿಕವಾಗಿ ಕುಗ್ಗಿದೆ : ಉಮೇಶ್

|

ಚಿಂಚೋಳಿ ಮೇ 8: 'ಹಣಕ್ಕಾಗಿ ಚಿಂಚೋಳಿ ಕ್ಷೇತ್ರದ ಮತದಾರರ ಆಶೀರ್ವಾದವನ್ನು ಮಾರಿಕೊಂಡಿದ್ದಾರೆ' ಎನ್ನುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಲಬುರ್ಗಿ ಲೋಕಸಭಾ ಅಭ್ಯರ್ಥಿ ಉಮೇಶಾ ಜಾಧವ್ ಯಾವುದೆ ಸಂಸ್ಥೆಯಿಂದ ತನಿಖೆ ನಡೆಸಿ ಎಂದು ಸವಾಲ್ ಹಾಕಿದ್ದಾರೆ.

ಚಿಂಚೋಳಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಪ್ರಿಯಾಂಕಾ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.

ನನ್ನ ಮಗಳು ಫೇಲ್ ಆಗಲು ರಾಜಕೀಯ ಆರೋಪಗಳೇ ಕಾರಣ: ಉಮೇಶ್ ಜಾಧವ್

'ನಾನು ಎರಡನೇ ಬಾರಿ ಶಾಸಕನಾದಾಗ ನಮ್ಮ ಕ್ಷೇತ್ರಕ್ಕೆ ಕರೆದರೂ ಯಾವೊಬ್ಬ ಮಂತ್ರಿಯೂ ಭೇಟಿ ನೀಡಲಿಲ್ಲಾ. ನನ್ನ ಕ್ಷೇತ್ರದಲ್ಲಿ ನಕ್ಷಲೈಟ್ ಇದ್ದಾರೆ ಎಂಬ ಕಾರಣ ನೀಡಿ ಅಧಿಕಾರಿಗಳೂ ಬರಲಿಲ್ಲಾ. ಆಗ ಬರದಿದ್ದ ಕಾಂಗ್ರೆಸ್ ನಾಯಕರು ಈಗ ನನ್ನ ಕ್ಷೇತ್ರಕ್ಕೆ ಬಂದು ಅವರ ರಾಜಕೀಯ ಸಂಸ್ಕಾರ ತೋರಿಸುತ್ತಿದ್ದಾರೆ' ಎಂದು ಹರಿಹಾಯ್ದರು.

ಚಿಂಚೋಳಿ ಉಪ ಚುನಾವಣೆ : ಪ್ರಿಯಾಂಕ್‌ ಖರ್ಗೆ v/s ಡಾ.ಉಮೇಶ್ ಜಾಧವ್

ಕಾಂಗ್ರೆಸ್ ಪಕ್ಷದ ನಾಯಕರು ನಾನು ಹಣ ತಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ದ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರಿಂದ ನನ್ನ ಮಗಳಿಗೆ ಅವಮಾನ ಆಗಿದೆ. ಉತ್ತಮವಾಗಿ ಓದುತ್ತಿದ್ದ ಆಕೆ ಮಾನಸಿಕವಾಗಿ ಕುಗ್ಗಿದ್ದು ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರು ಆರೋಪವೇ ಕಾರಣ ಎಂದರು ಆರೋಪಿಸಿದರು.

ಡಾ ಪರಮೇಶ್ವರ್ ರಿಂದ ವೈದ್ಯ ವೃತ್ತಿಗೆ ಅಪಮಾನ

ಡಾ ಪರಮೇಶ್ವರ್ ರಿಂದ ವೈದ್ಯ ವೃತ್ತಿಗೆ ಅಪಮಾನ

ಇಂಜೆಕ್ಷೆನ್ ನಲ್ಲಿ ನೀರು ಹಾಕುತ್ತಿದ್ದರೋ, ಔಷಧ ಹಾಕುತ್ತಿದ್ದರೋ ಎಂದು ಲೇವಡಿ ಮಾಡಿದ ಡಾ ಪರಮೇಶ್ವರ್ ನಮ್ಮ ವೈದ್ಯ ವೃತ್ತಿಗೆ ಅಪಮಾನ ಮಾಡಿದ್ದಾರೆ. ನನ್ನ ಜೀವನದಲ್ಲಿ ಒಂದು ಕಳಂಕ ಇಲ್ಲ. ನಾನು ನನ್ನ ಡಾಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ಬುರವಾಗ 200 ಜನ ನನ್ನ ಸಹದ್ಯೋಗಿಗಳು ಕಣ್ಣಿರು ಇಟ್ಟರು. ಕೀಳು ಮಟ್ಟದ ಹೇಳಿಕೆಯನ್ನು ನೀಡುವ ಮೂಲಕ ಡಾ ಪರಮೇಶ್ವರ್ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಹಣಕ್ಕಾಗಿ ಚಿಂಚೋಳಿ ಮತದಾರರ ಆಶೀರ್ವಾದವನ್ನು ಮಾರಾಟ

ಹಣಕ್ಕಾಗಿ ಚಿಂಚೋಳಿ ಮತದಾರರ ಆಶೀರ್ವಾದವನ್ನು ಮಾರಾಟ

ಹಣಕ್ಕಾಗಿ ಚಿಂಚೋಳಿ ಮತದಾರರ ಆಶೀರ್ವಾದವನ್ನು ಮಾರಾಟ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಈ ಬಗ್ಗೆ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಅದಕ್ಕೆ ಸಿದ್ದನಿದ್ದೇನೆ ಎಂದು ಸವಾಲ್ ಹಾಕಿದರು. 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಕಡಿಮೆ ಕ್ಷೇತ್ರ ಗೆದ್ದ ಜೆಡಿಎಸ್ ಗೆ ಕಾಂಗ್ರೆಸ್ ಪಕ್ಷ ಮಾರಾಟವಾಗಿದೆ. ಈ ರೀತಿ ಕೀಳು ಮಟ್ಟದ ಹೇಳಿಕೆಯನ್ನು ನೀಡುವ ಮೂಲಕ ಮತದಾರರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದು, ಇದರಲ್ಲಿ ಕಾಂಗ್ರೆಸ್ ನಾಯಕರು ಸಫಲರಾಗುವುದಿಲ್ಲ.

ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯಲು 3 ಕಾರಣಗಳು

ಬಂಜಾರ ಸಮುದಾಯ ಒಡೆಯುವ ಪ್ರಯತ್ನ

ಬಂಜಾರ ಸಮುದಾಯ ಒಡೆಯುವ ಪ್ರಯತ್ನ

ಕುಂಚಾವರಂನಲ್ಲಿ ಯಾವುದೇ ಮಕ್ಕಳ ಮಾರಾಟವಾಗುತ್ತಿಲ್ಲ. ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು. ಚಿಂಚೋಳಿ ಕ್ಷೇತ್ರದಲ್ಲಿ ಒಗ್ಗಟ್ಟಾಗಿದ್ದ ಬಂಜಾರ ಸಮುದಾಯವನ್ನು ಒಡೆಯುವಂತಹ ಕಾರ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಜಾತಿ ಒಡೆಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಬಂಜಾರ ಸಮುದಾಯವನ್ನು ಒಡೆಯುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದನ್ನು ಬಿಟ್ಟು ನನ್ನ ವಿರುದ್ದ ಎಲೆಕ್ಷನ್ ಮಾಡಿ. ಕುತಂತ್ರ ಮಾಡುವ ಬದಲು ನನ್ನ ಸವಾಲನ್ನು ಎದುರಿಸಿ ಎಂದರು.

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಸಕ್ಕರೆ ಕಾರ್ಖಾನೆಯನ್ನು ನನ್ನ ಕ್ಷೇತ್ರದಲ್ಲಿ ಪ್ರಾರಂಭಿಸಿದ್ದರೆ ನಾನು ಸಾಯುವ ತನಕ ಗುಲಾಮನಾಗಿರುತ್ತಿದ್ದೆ. ಆದರೆ ಕೀಳು ರಾಜಕೀಯದಿಂದ ನನ್ನ ಕ್ಷೇತ್ರಕ್ಕೆ ಬರಬೇಕಾಗಿದ್ದ ಸಕ್ಕರೆ ಕಾರ್ಖಾನೆ ಬೆರೆ ಕಡೆಗೆ ವರ್ಗಾವಣೆಯಾಯಿತು ಎಂದು ಹೇಳಿದರು.

ನಮ್ಮ ದೇಶದ ಶ್ರೀಮಂತ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ. 50 ಸಾವಿರ ಕೋಟಿ ಒಡೆಯ. ಅವರ ಮೇಲೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಆದರೆ ಈ ವಿಷಯವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದೆ ಎಂದು ಹೇಳಿದರು

English summary
Kalaburagi Lok Sabha election BJP candidate Umesh Jadhav challenged Congress to bribe allegation against him and his family, he was campaigning for Avinash Jadhav, Chincholi by poll candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more