ತುಳಜಾಭವಾನಿ ಜಾತ್ರೆಗೆ ಕೆಎಸ್ಆರ್‌ಟಿಸಿಯಿದ ವಿಶೇಷ ಬಸ್ ಸೇವೆ

ಕಲಬುರಗಿ, ಸೆಪ್ಟೆಂಬರ್ 22 : ಮಹಾರಾಷ್ಟ್ರದ ತುಳಜಾಪುರದಲ್ಲಿ ನಡೆಯುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಕ್ಟೋಬರ್ 8ರ ತನಕ ವಿಶೇಷ ಬಸ್ಸುಗಳು ಸಂಚಾರ ನಡೆಸಲಿವೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗದಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ-ತುಳಜಾಪುರ ಚಿಂಚೋಳಿ-ತುಳಜಾಪುರ, ಕಾಳಗಿ-ತುಳಜಾಪುರ, ಚಿತ್ತಾಪೂರ-ತುಳಜಾಪುರ ಹಾಗೂ ಸೇಡಂ-ತುಳಜಾಪುರ ಮಾರ್ಗಗಳಲ್ಲಿ ವಿಶೇಷ ಬಸ್ಸುಗಳು ಸಂಚರಿಸಲಿವೆ.

Tuljapur Amba Bhavani festival NEKRTC announcess special bus service

ವಿಶೇಷ ಬಸ್ಸುಗಳ ವ್ಯವಸ್ಥೆ ಮಾತ್ರವಲ್ಲದೇ ಘಟಕಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ 54 ಜನ ಪ್ರಯಾಣಿಕರು ತುಳಜಾಪುರಕ್ಕೆ ಪ್ರಯಾಣಿಸಿದಲ್ಲಿ ಅದೇ ಗ್ರಾಮದಿಂದಲೇ ನೇರವಾಗಿ ತುಳಜಾಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ತೆರಳುವ ಭಕ್ತಾದಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನರು ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ.

ಕಲಬುರಗಿ ಘಟಕ-1 7760992113, ಚಿಂಚೋಳಿ 7760992117, ಚಿತ್ತಾಪೂರ 7760992119, ಕಾಳಗಿ 7760992120, ಸೇಡಂ 7760992466 ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕರು 7760992108.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+