ಹಿಂದೂ ಪರ ಸಂಘಟನೆ ಪ್ರತಿಭಟನೆ: ಕಲಬುರಗಿ ರೈಲು ನಿಲ್ದಾಣದ ಗೋಡೆಗೆ ಬಿಳಿ ಬಣ್ಣ
ಕಲಬುರಗಿ, ಡಿ. 13: ಹಸಿರು ಬಣ್ಣವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ಹಿಂದೂ ಗುಂಪುಗಳ ಪ್ರತಿಭಟನೆ ಬೆನ್ನಲ್ಲೆ ರೈಲ್ವೆ ಇಲಾಖೆಯು ರೈಲು ನಿಲ್ದಾಣದ ಗೋಡೆಗೆ ಪುನಃ ಬಣ್ಣ ಬಳಿಯಲು ನಿರ್ಧರಿಸಿದ್ದು, ಬಣ್ಣ ಬಳಿಯಲಾಗುತ್ತಿದೆ.
ಕಲಬುರಗಿ ರೈಲು ನಿಲ್ದಾಣಕ್ಕೆ ಈ ಹಿಂದೆ ಹಸಿರು ಬಣ್ಣವನ್ನು ಬಳಿಯಲಾಗಿತ್ತು. ಇದಕ್ಕೆ ಹಿಂದೂ ಪರ ಸಂಗಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬಣ್ಣದಿಂದ ರೈಲು ನಿಲ್ದಾಣ ಮಸೀದಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಆರೋಪಿಸಿದ್ದರು.
Due to pressure from #Hindu groups. Railway department in #Kalaburgi has decided to repaint the railway station wall. They are repainting the green colour with white. #Karnataka https://t.co/yio4ZeC5RW pic.twitter.com/DAVXUlp4HN
— Imran Khan (@KeypadGuerilla) December 13, 2022
ಮಂಗಳವಾರ ಬೆಳಗ್ಗೆ ಹಿಂದೂ ಪರ ಸಂಘಟನೆಗಳು ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಇಲಾಖೆಯು ಹಸಿರು ಬಣ್ಣದ ಮೇಲೆ ಬಿಳಿ ಬಣ್ಣವನ್ನು ಬಳಿಸುತ್ತಿದ್ದಾರೆ.

ರೈಲು ನಿಲ್ದಾಣದ ಗೋಡೆಗಳ ಮೇಲೆ ಹಸಿರು ಬಣ್ಣ ಬಳಿದಿರುವುದು ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಹಸಿರು ಬಣ್ಣವನ್ನು ತೆಗೆಯಬೇಕು ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ರೈಲ್ವೆ ಅಧಿಕಾರಿಗಳು ಇತ್ತೀಚೆಗೆ ರೈಲು ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣ ಬಳಿದಿದ್ದರು. ನಿಲ್ದಾಣದ ಮುಖ್ಯ ರಚನೆಯು ಗುಮ್ಮಟದ ಆಕಾರವನ್ನು ಹೊಂದಿದೆ. ಇದರ ಜೊತೆಗೆ ಈಗ ಗೋಡೆಗಳಿಗೆ ಹಸಿರು ಬಣ್ಣ ಬಳಿದಿರುವ ಕಾರಣ ಇದು ಮಸೀದಿಯಂತೆ ಕಾಣುತ್ತದೆ ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದವು.
ಕೂಡಲೇ ಹಸಿರು ಬಣ್ಣವನ್ನು ತೆಗೆಯುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ರಾಜ್ಯದಲ್ಲಿ ಇತ್ತೀಚೆಗಷ್ಟೇ ಬಣ್ಣಗಳಲ್ಲಿಯೂ ವಿವಾದ ಶುರುವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಎಲ್ಲಾ ವಿಷಯಗಳಲ್ಲಿಯೂ ಕೇಸರಿ ಬಣ್ಣವನ್ನು ತರಲು ಪ್ರಯತ್ನಿಸಲಾಗುತ್ತಿದೆ. ಉದಾಹರಣೆಗೆ ವಿವೇಕ ತರಗತಿಗಳಿಗೆ ಕೇಸರಿ ಬಣ್ಣ ಬಳಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ಸೇರಿದಂತೆ ಹಲವು ಚಿಂತಕರು ವಿರೋಧಿಸಿದ್ದರು.












Click it and Unblock the Notifications