ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳಪೆ ರಸ್ತೆ ಕಾಮಗಾರಿ, ಕೈಯಲ್ಲಿ ಕಿತ್ತು ಬರುವ ಟಾರು

|
Google Oneindia Kannada News

ಕಲಬುರಗಿ , ನ.30: ಕಲಬುರಗಿ ಜಿಲ್ಲೆಯ ಕಮಲಾಪುರದ ಗ್ರಾಮವೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಿದ ಸರ್ಕಾರಿ ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಡಳಿತ ಪಕ್ಷ ಬಿಜೆಪಿಯ ಕಾರ್ಯಕರ್ತ ಎಂದಿರುವ ವ್ಯಕ್ತಿ ತನ್ನದ ಪಕ್ಷದ ಶಾಸಕರ ವಿರುದ್ಧ ದನಿ ಎತ್ತಿದ್ದಾರೆ. ರಸ್ತೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ತಾವೇ ಬಗ್ಗೆ ಟಾರು ಕಿತ್ತು ಹಾಕುವುದನ್ನು ನೋಡಬಹುದು.

ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ 2 ಅಪಾಯಕಾರಿ ಪಿಲ್ಲರ್‌ಗಳುಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ 2 ಅಪಾಯಕಾರಿ ಪಿಲ್ಲರ್‌ಗಳು

ವಿಡಿಯೋದಲ್ಲಿ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು, ಸರ್. ಇದು ಕಮಲಾಪುರ ತಾಲೂಕಿನ ಚೆಂಗ್ಟಾ ಗ್ರಾಮದ ರಸ್ತೆ" ಎಂದು ಹೇಳುವುದನ್ನು ಕೇಳಬಹುದು.

Newly Concreted Road peel off in Kamalapur

ಈ ವಿಡಡಿಯೋವನ್ನು ಹಲವು ಮಂದಿ ಹಂಚಿಕೊಂಡಿದ್ದಾರೆ. ಅದರಲ್ಲಿ 'ಹೇಟ್ ಡಿಟೆಕ್ಟರ್' ಎಂಬ ಟ್ವಿಟ್ಟರ್ ಹ್ಯಾಂಡಲ್, "ಈ ಕಾಮಗಾರಿಯನ್ನು ಗುಲ್ಬರ್ಗ (ಗ್ರಾಮೀಣ) ಬಿಜೆಪಿ ಶಾಸಕ ಬಸವರಾಜ್ ಮಟ್ಟಿಮಡ್ ಅವರ ಮುಂದಾಳತ್ವದಲ್ಲಿ ಮಾಡಲಾಗಿದೆ. ನೀವು ಕಮಲಾಪುರ ಬಿಜೆಪಿ ಕಾರ್ಯಕರ್ತ ಸುಭಾಷ್ ಬಿರಾದಾರ್ ಅವರನ್ನು ವಿಡಿಯೋದಲ್ಲಿ ನೋಡಬಹುದು. ಇದು ರಸ್ತೆಯು ಹೇಗಿದೆ ಎಂಬುದನ್ನು ತೋರಿಸುತ್ತದೆ " ಎಂದು ಬರೆದಿದೆ.

ನಗರದಲ್ಲಿನ ಮೂಲಸೌಕರ್ಯಗಳ ಕಳಪೆ ಗುಣಮಟ್ಟದ ಬಗ್ಗೆ ರಾಜ್ಯ ಸರ್ಕಾರ ಟೀಕೆಗಳನ್ನು ಎದುರಿಸುತ್ತಲೇ ಇದೆ. ಗುತ್ತಿಗೆದಾರರು ವೆಚ್ಚವನ್ನು ಕಡಿತಗೊಳಿಸಲು ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Newly Concreted Road peel off in Kamalapur

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ರಸ್ತೆಯು ಕಿತ್ತು ಹೋಗಿದ್ದು, ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿತ್ತು. ಬಳಿಕೆ ಇಂತಹ ಘಟನೆಗಳು ಹಲವೆಡೆ ವರದಿಯಾಗಿವೆ.

ಇನ್ನು, ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ ಇರುವ ಗಂಭಿರ ಆರೋಪ 40% ಕಮಿಷನ್ ಸರ್ಕಾರ ಎಂಬುದು. ಹೀಗಾಗಿ ಇಂತಹ ಘಟನೆಗಳನ್ನು ಮುಂದಿರಿಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡಡೆಸುತ್ತಿದೆ.

English summary
A person has alleged that the government contractor who built the road connecting a village in Kamalpura in Kalaburagi district has done shoddy work. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X