Get Updates
Get notified of breaking news, exclusive insights, and must-see stories!

ಪರಿಷತ್‌ ಫೈಟ್‌: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು

ಕಲಬುರಗಿ, ಜೂನ್ 07; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕ್ಷೇತ್ರ ಕಾಂಗ್ರೆಸ್‌ ವಶವಾಗಿದ್ದು, ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಗುರುವಾರ ಈಶಾನ್ಯ ಪದವೀಧರ ಚುನಾವಣೆಯ ಮತ ಎಣಿಕೆ ಆರಂಭವಾಗಿತ್ತು. ಶುಕ್ರವಾರ ಅಂತಿಮ ಫಲಿತಾಂಶ ಪ್ರಕಟವಾಗಿದೆ. 2ನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Legislative Council Election Congress Candidate Chandrashekar Patil Wins

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಡಾ. ಚಂದ್ರಶೇಖರ ಬಸವರಾಜ (ಕಾಂಗ್ರೆಸ್), ಅಮರನಾಥ ಪಾಟೀಲ (ಬಿಜೆಪಿ-ಜೆಡಿಎಸ್) ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಎನ್. ಪ್ರತಾಪ ರೆಡ್ಡಿ ಕಣದಲ್ಲಿದ್ದರು. ಒಟ್ಟಾರೆ ಚಲಾವಣೆಯಾದ ಮತಗಳು 1,09,031. 96,519 ಮತಗಳು ಪುರಸ್ಕೃತ ಮತ್ತು 12,513 ಮತಗಳು ತಿರಸ್ಕೃತಗೊಂಡಿವೆ.

ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಒಟ್ಟಾರೆ ಡಾ. ಚಂದ್ರಶೇಖರ ಪಾಟೀಲ 43,484 ಮತಗಳು, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 38,833 ಮತಗಳನ್ನು ಪಡೆದರು.

ಈಶಾನ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಒಳಪಡುತ್ತದೆ. ಜೂನ್ 3ರಂದು ಕ್ಷೇತ್ರದಲ್ಲಿ ಮತದಾನ ನಡೆದಿತ್ತು.

ಗುರುವಾರ ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭವಾಗಿತ್ತು. ರಾತ್ರಿಯ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ 39,496 ಮತಗಳನ್ನು ಪಡೆದು, 4,446 ಮತಗಳ ಮುನ್ನಡೆ ಪಡೆದುಕೊಂಡಿದ್ದರು.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050 ಮತ ಮತ್ತು ಸ್ವತಂತ್ರ ಅಭ್ಯರ್ಥಿ ಎನ್. ಪ್ರತಾಪ ರೆಡ್ಡಿ 17,421 ಮತಗಳನ್ನು ಪಡೆದಿದ್ದರು. 48,260 ಮತಗಳ ಕೋಟಾ ನಿಗದಿ ಮಾಡಲಾಗಿತ್ತು. ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಬಳಿಕ ವಿಜೇತ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತದೆ ಎಂದು ಗುರುವಾರ ತಿಳಿಸಲಾಗಿತ್ತು.

27 ಗಂಟೆ ಎಣಿಕೆ ಕಾರ್ಯ: ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲು ತಲಾ 25 ಮತಗಳನ್ನು ಕಟ್ಟು ಕಟ್ಟುವ ಕೆಲಸ ನಡೆಯಿತು. ನಂತರ ಸಂಜೆ 4 ಗಂಟೆಯಿಂದ 14 ಟೇಬಲ್‍ನಲ್ಲಿ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಆರಂಭವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆ ವರೆಗೆ 8 ಸುತ್ತಿನಲ್ಲಿ ಕೊನೆಗೊಂಡಿತ್ತು. ತದನಂತರ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಬೆಳಗ್ಗೆ 11 ಗಂಟೆಯವರೆಗೆ ಸಾಗಿತು. ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಸುದೀರ್ಘ 27 ಗಂಟೆಗಳ ನಿರಂತರವಾಗಿ ನಡೆಯಿತು.

ಕಲಬುರಗಿ ನಗರದ ಗುಲಬರ್ಗಾ ವಿ.ವಿ.ಯ ಸಾದ್ವಿ ಶಿರೋಮಣಿ ಸಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಶುಕ್ರವಾರ ಪೂರ್ಣಗೊಂಡಿತು. ಕೊನೆಯದಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ವಿನ್ನಿಂಗ್ ಕೋಟಾ ತಲುಪದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಮತ ಪಡೆದ ಕಾರಣ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಡಾ. ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸುವ ಮೂಲಕ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಿದರು.

ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ 39,496, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050, ಸ್ವತಂತ್ರ ಅಭ್ಯರ್ಥಿ ಎನ್. ಪ್ರತಾಪ ರೆಡ್ಡಿ 17,421, ಅನಿಮೇಶ್ ಮಹಾರುದ್ರಪ್ಪ ಅಂದವಾಡೆ 111, ಅಬ್ದುಲ್ ಜಬ್ಬಾರ ಗೋಳಾ 201, ಕಾಶಿನಾಥ ಎಂ. ಗಿಲೇರಿ 276, ಬಸವರಾಜ ಮ್ಯಾಗಲಮನಿ 59, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ 57 ಮತಗಳನ್ನು ಪಡೆದರು.

ಎಂ. ಜಾವಿದ್ ಹುಸೇನ್ 194, ರಿಯಾಜ್ ಅಹ್ಮದ್ 74, ವಿಲಾಸ ಎಂ. ಕಣಮಸ್ಕರ್ 817, ಶರಣಬಸಪ್ಪ ಪಿ. ಸುಗೂರ 1,392, ಎ. ಶರಣ ಐ. ಟಿ. 73, ಎ. ಎಸ್. ನಾಗನಹಳ್ಳಿ 17, ಶಿವಕುಮಾರ ಹಿರೇಮಠ 167, ಸತೀಣಕುಮಾರ ಕೋಬಾಳಕರ್ 792, ಸಾಯಿನಾಥ ನಾಗೇಶ್ವರ ಮೇದಾ 72, ಡಾ. ಸುನೀಲ ಕುಮಾರ ಎಚ್. ವಂಟಿ 116 ಹಾಗೂ ಸುರೇಶ ದವಿದಪ್ಪ 133 ಮತಗಳನ್ನು ಪಡೆದರು.

ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಅತ್ಯಂತ ಕಡಿಮೆ ಮತ ಪಡೆದ ಸ್ವತಂತ್ರ ಅಭ್ಯರ್ಥಿಗಳಾದ ಎ. ಎಸ್. ನಾಗನಹಳ್ಳಿ ರಿಂದ ಹಿಡಿದು ಎನ್.ಪ್ರತಾಪ ರೆಡ್ಡಿ ವರೆಗೆ 17 ಅಭ್ಯರ್ಥಿಗಳನ್ನು ಹಂತ-ಹಂತವಾಗಿ ಸ್ಪರ್ಧೆಯಿಂದ ಎಲಿಮಿನೇಟ್ ಮಾಡಿ ಅವರಿಗೆ ನೀಡಲಾದ ಮತದಲ್ಲಿನ ಎರಡನೇ ಪ್ರಾಶಸ್ತ್ಯ ಮತಗಳನ್ನು ಮೇಲಿನ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು.

ಅಂತಿಮವಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ಡಾ. ಚಂದ್ರಶೇಖರ ಪಾಟೀಲ 43,484 ಮತಗಳನ್ನು ಪಡೆದು, 4,651 ಮತಗಳಿಂದ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 38,833, ಸ್ವತಂತ್ರ ಅಭ್ಯರ್ಥಿಗಳಾದ ಎನ್. ಪ್ರತಾಪ ರೆಡ್ಡಿ 17,651, ಅನಿಮೇಶ್ ಮಹಾರುದ್ರಪ್ಪ ಅಂದವಾಡೆ 113, ಅಬ್ದುಲ್ ಜಬ್ಬಾರ ಗೋಳಾ 243, ಕಾಶಿನಾಥ ಎಂ. ಗಿಲೇರಿ 295, ಬಸವರಾಜ ಮ್ಯಾಗಲಮನಿ 59 ಮತಗಳನ್ನು ಪಡೆದರು.

ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ 57, ಎಂ. ಜಾವಿದ್ ಹುಸೇನ್ 212, ರಿಯಾಜ್ ಅಹ್ಮದ 75, ವಿಲಾಸ ಎಂ. ಕಣಮಸ್ಕರ್ 914, ಶರಣಬಸಪ್ಪ ಪಿ. ಸುಗೂರ 1,796, ಎ.ಶರಣ ಐ.ಟಿ 73, ಎ. ಎಸ್. ನಾಗನಹಳ್ಳಿ 17, ಶಿವಕುಮಾರ ಹಿರೇಮಠ 177, ಸತೀಶ್‍ಕುಮಾರ ಕೋಬಾಳಕರ್ 809, ಸಾಯಿನಾಥ ನಾಗೇಶ್ವರ ಮೇದಾ 72, ಡಾ. ಸುನೀಲಕುಮಾರ ಎಚ್. ವಂಟಿ 120 ಹಾಗೂ ಸುರೇಶ ದವಿದಪ್ಪ 135 ಮತಗಳು ಪಡೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+