• search

82ನೇ ವಯಸ್ಸಿನಲ್ಲಿ ತಂದೆಯಾದ ಕಲಬುರಗಿಯ ಶರಣಬಸಪ್ಪ ಅಪ್ಪಾ

By Ramesh B
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    82ನೇ ವಯಸ್ಸಿನಲ್ಲಿ ತಂದೆಯಾದ ಕಲಬುರಗಿಯ ಶರಣಬಸಪ್ಪ ಅಪ್ಪಾ | Oneindia Kannada

    ಕಲಬುರಗಿ, ನವೆಂಬರ್ 02: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರು 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಶ್ರೀ ಶರಣಬಸಪ್ಪ ಅಪ್ಪಾ ಅವರ ಎರಡನೇ ಪತ್ನಿ ದಾಕ್ಷಾಯಿಣಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸಂಸ್ಥಾನಕ್ಕೆ ನೂತನ ವಾರಸುದಾರ ಬಂದಂತಾಗಿದೆ. ಇದರಿಂದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    Kalaburagi pontiff Sharanabasappa Appa becomes father at age of 82

    ಡಾ. ಶರಣಬಸವಪ್ಪ ಅಪ್ಪಾ ಅವರಿಗೆ ಎರಡು ಮದುವೆಯಾಗಿದ್ದು, ಮೊದಲನೆ ಪತ್ನಿ ಕೋಮಲಾತಾಯಿ ಐದು ಮಂದಿ ಪುತ್ರಿಯರಿಗೆ ಜನನ ನೀಡಿದ್ದರು. ಆದರೆ ಮೊದಲ ಪತ್ನಿ ಕೋಮಲಾತಾಯಿ ಹಲವು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮೊದಲ ಪತ್ನಿಯ ಮೃತಪಟ್ಟ ಬಳಿಕ ದಾಕ್ಷಾಯಿಣಿ ಅವರನ್ನು ಶರಣಬಸಪ್ಪ ಅಪ್ಪಾ ಅವರು ಮದುವೆಯಾಗಿದ್ದರು. ಎರಡನೇ ಪತ್ನಿ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಇದೀಗ ಗಂಡು ಮಗುವಿಗೆ ಜನನ ನೀಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Kalaburagi Sharana Basaveshwara Samsthana peetadhipathi Sri Dr. Sharanabasappa Appa becomes a father at age of 82. His second wife Dakshayani baby boy in Mumbai private hospital.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more