Kalaburagi Rape: ಬಾಲಕಿ ಮೇಲೆ ನಾಲ್ವರು ಬಾಲಕರಿಂದ ಅತ್ಯಾಚಾರ!

ಕಲಬುರಗಿ ಜುಲೈ 7: ಒಂಬತ್ತು ವರ್ಷದ ಬಾಲಕಿ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ನಗರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಈ ಘಟನೆ ಜುಲೈ 5ರಂದು ಮಧ್ಯಾಹ್ನ ಬಾಲಕಿಯ ಮನೆ ಮೇಲಿನ ಮಹಡಿಯಲ್ಲಿ ನಡೆದಿದೆ. ಅತ್ಯಾಚಾರವೆಸಗಿದವರನ್ನು ನಾಲ್ವರ ಅಪ್ರಾಪ್ತ ವಯಸ್ಸಿನ ಹುಡುಗರು ಎಂದು ಗುರುತಿಸಲಾಗಿದೆ. ಬಾಲಕಿ ಪೋಷಕರು ಕಲಬುರಗಿ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Kalaburagi: Girl raped by four boys

ಬಾಲಕಿ ಅಸ್ವಸ್ಥಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ದಾಖಲಾದ ಬಳಿಕ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗುಜರಾತ್‌ನಲ್ಲಿ ಮತ್ತೊಂದು ಘಟನೆ

ಗುಜರಾತ್‌ನಲ್ಲಿ ಅತ್ಯಾಚಾರ ಪ್ರಕರಣವೊಂದರ ಆರೋಪಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. 'ಯಾರೂ ಕಾನೂನಿಗಿಂತ ದೊಡ್ಡವರಲ್ಲ' ಎಂಬ ಸಂದೇಶ ರವಾನಿಸಲು ಬುಧವಾರ ಪೊಲೀಸರು 22 ವರ್ಷದ ಮಹಿಳೆಯ ಅತ್ಯಾಚಾರವೆಸಗಿದ ಆರೋಪ ಹೊಂದಿರುವ ವ್ಯಕ್ತಿಯನ್ನು ಗುಜರಾತ್‌ನ ನವಸಾರಿ ಜಿಲ್ಲೆಯ ಖೇರ್ಗಮ್ ಗ್ರಾಮದಲ್ಲಿ ಪರೇಡ್ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅತ್ಯಾಚಾರ ಸಂತ್ರಸ್ತೆಯು ಖೇರ್ಗಮ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು (ಜೂನ್ 24) ದಾಖಲಿಸಿದ ನಂತರ ಸೋಮವಾರದಂದು ಖೇರ್ಗಮ್ ಗ್ರಾಮದ ನಿವಾಸಿಯಾದ ಅಸೀಮ್ ಶೇಖ್(35) ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಸ್ಥಳೀಯ ನ್ಯಾಯಾಲಯವೊಂದು ಜುಲೈ 13ರವರೆಗೆ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿದೆ. ಬುಧವಾರ ಮಧ್ಯಾಹ್ನ ಅತ್ಯಾಚಾರ ಆರೋಪಿಯನ್ನು ಎರಡು ಕಿಮೀ ದೂರ ಪರೇಡ್ ಮಾಡಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಎಸ್.ಕೋರಟ್ ಅವರು, "ಈ ವ್ಯಕ್ತಿಯು ಇಡೀ ಗ್ರಾಮದಲ್ಲಿ ಭೀತಿ ಸೃಷ್ಟಿಸಿದ್ದ ಮತ್ತು ಎಲ್ಲರೂ ಈತನಿಗೆ ಹೆದರುತ್ತಿದ್ದರು. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಲು ಗ್ರಾಮದ ಮಾರುಕಟ್ಟೆ ಪ್ರದೇಶದಲ್ಲಿ ಆತನನ್ನು ಪರೇಡ್ ನಡೆಸಲಾಯಿತು. ಆತನ ವಿರುದ್ಧ ಜಗಳ, ಕಳ್ಳಭಟ್ಟಿ ಮದ್ಯ ವ್ಯವಹಾರ ಸೇರಿದಂತೆ 18 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ" ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+