ಕೇಂದ್ರೀಯ ವಿವಿಯಿಂದ ಐವರಿಗೆ ಗೌರವ ಡಾಕ್ಟರೇಟ್
ಕಲಬುರಗಿ ಮಾರ್ಚ್ 20: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ, ಕವಿ ಡಾ.ಚನ್ನವೀರ ಕಣವಿ, ಸಾಲುಮರದ ತಿಮ್ಮಕ್ಕ, ಇಸ್ರೊ ಅಧ್ಯಕ್ಷ ಕೆ.ಶಿವನ್ ಹಾಗೂ ಕಲಬುರ್ಗಿಯ ಸಾಹಿತಿ ಡಾ.ಮ.ಗು.ಬಿರಾದಾರ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಪಟ್ಟಿಗೆ ಅನುಮೋದನೆ ನೀಡಿದ್ದು, ಮುಂಬರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಾರೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ತಿಳಿಸಿದ್ದಾರೆ.
ಮಾರ್ಚ್ 14ರಂದೇ ಘಟಿಕೋತ್ಸವ ನಡೆಯಬೇಕಿತ್ತು. ಅದರೆ, ಕೊರೊನಾ ಸೋಂಕಿನ ಭೀತಿಯಿಂದಾಗಿ ಘಟಿಕೋತ್ಸವ ಮಂದೂ ಡಲಾಗಿದೆ.

ವಿಶ್ವವಿದ್ಯಾಲಯದ ಎಲ್ಲ ತರಗತಿಗಳನ್ನೂ ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications