ಲೋಕಾಯುಕ್ತ ಕಚೇರಿಗೆ ಪಾರ್ಲಿಮೆಂಟ್ ಮಾದರಿ ಭದ್ರತೆ: ರಾಮಲಿಂಗಾ ರೆಡ್ಡಿ

Posted By:
Subscribe to Oneindia Kannada

ಕಲಬುರಗಿ, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕೊಲೆ ಯತ್ನದ ಘಟನೆಯ ನೈತಿಕ ಜವಾಬ್ದಾರಿ ಹೊತ್ತು ಗೃಹಸಚಿವರು ರಾಜಿನಾಮೆ ನೀಡಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಳ್ಳಿ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೆಟಲ್ ಡಿಟೆಕ್ಟರ್ ತಾಂತ್ರಿಕ ದೊಷದಿಂದ ಚಾಕು ಪತ್ತೆಯಾಗದೆ ಈ ಅನುಚಿತ ಘಟನೆ ನಡೆದಿದ್ದು, ಆರೋಪಿಯನ್ನು ಕೂಡಲೇ ಬಂಧಿಸಲಾಗಿದೆ, ಭದ್ರತಾ ಲೋಪದ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ, ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ

ಲೋಕಾಯುಕ್ತ ಕಚೇರಿಗೆ ಪಾರ್ಲಿಮೆಂಟ್ ರೀತಿಯ ಭದ್ರತೆ ಒದಗಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು, ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

judge stubbed: Ramalinga reddy refuses to give resign

ಲೋಕಾಯುಕ್ತರಿಗೆ ಚಾಕು ಇರಿದಿರುವ ಆರೋಪಿ ತೇಜರಾಜ್ ಶರ್ಮಾ ಈ ಮೊದಲೂ ಕೆಲವು ದೂರುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತರೊಂದಿಗೆ ಜಗಳ ಮಾಡಿಕೊಂಡಿದ್ದ. ಲೋಕಾಯುಕ್ತ ವಿಶ್ವನಾಥ ಶರ್ಮಾ ಅವರ ಒಳ್ಳೆಯತನವನ್ನೇ ದುರುಪಯೋಗ ಮಾಡಿಕೊಂಡು ಅವರಿಗೆ ಚಾಕು ಇರಿದಿದ್ದಾನೆ. ಲೋಕಾಯುಕ್ತರು ಮೊದಲೇ ಹೆಚ್ಚಿನ ಭದ್ರತೆ ಕೇಳಿದ್ದರೆ ಕಲ್ಪಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ಲೋಕಾಯುಕ್ತರಿಗೆ ಚೂರಿ ಇರಿತ: ಆರೋಪಿ ತೇಜ್ ರಾಜ್ ವಿರುದ್ಧ FIR

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Home minister Ramalinga Reddy lambasted on opposition party who demand for resignation over the judge stubbed issue. Ramalinga reddy said government planing to provide high security to Lokayukta office like Parliament.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ