ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನವೀಯತೆ ಮರೆದ ಜೇವರ್ಗಿ ಶಾಸಕ ಡಾ.ಅಜಯ್‌ಸಿಂಗ್

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಜೇವರ್ಗಿ, ಜನವರಿ 23: ಶಾಸಕ ಡಾ.ಅಜಯ್‌ಸಿಂಗ್ ಅವರ ಮಾನವೀಯತೆ ಮತ್ತು ಸಮಯ ಸ್ಪೂರ್ಥಿಯಿಂದ ಅಪಘಾತಕ್ಕೊಳಗಿ ತೀರ್ವ ರಕ್ತಸ್ರಾವದಿಂದ ಅರೆಜೀವವಾಗಿದ್ದ ಮಹಿಳೆಯೊಬ್ಬಳ ಜೀವ ಉಳಿದಿದೆ.

ತಾಲ್ಲೂಕಿನ ಇಜೇರಿ ಬಳಿ ಬೈಕ್ ಅಪಘಾತವೊಂದರಲ್ಲಿ ಗಾಯಗೊಂಡ ನರಿಬೋಳ ಗ್ರಾಮದ ಚನ್ನಮ್ಮ ಹಡಪದ ಎಂಬುವರು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದರು. ಆಗ ಇದೇ ರಸ್ತೆಯಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನೆಗೆಂದು ತೆರಳುತ್ತಿದ್ದ ಶಾಸಕ ಅಜಯ್‌ ಸಿಂಗ್, ಮಹಿಳೆಯ ಸ್ಥಿತಿ ಕಂಡಿದ್ದಾರೆ. ತಕ್ಷಣ ತಮ್ಮ ಕಾರಿನಲ್ಲಿದ್ದ ಮುಖಂಡರನ್ನು ಕೆಳಗಿಳಿಸಿ ಮಹಿಳೆಯನ್ನು ಜೇವರ್ಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಜೇವರ್ಗಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಜೇವರ್ಗಿಯಿಂದ ಆಂಬುಲೆನ್ಸ್‌ನಲ್ಲಿ ಕಲಬುರಗಿಗೆ ಕಳಿಸಿಲಾಗಿದೆ.

Jewargi MLA Ajay Singh helps a accident victim

ಆಕೆಯನ್ನು ಆಂಬುಲೆನ್ಸ್ ಹತ್ತಿಸಿ ಕಳಿಸುವವರೆಗೂ ಗಾಯಾಳುವಿನ ಜೊತೆಗಿದ್ದ ಶಾಸಕರು ಆಕೆಗೆ ಸೂಕ್ತ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ ದೊರಕಿಸುವಲ್ಲಿ ನೆರವಾದರೂ. ಆಕೆಯ ಜೀವಕ್ಕೆ ಇದೀಗ ಯಾವುದೇ ಹಾನಿ ಇಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಆಂಬುಲೆನ್ಸ್ ಹೋದ ಬಳಿಕವಷ್ಟೇ ಶಾಸಕ ಅಜಯ್‌ಸಿಂಗ್ ತಮ್ಮ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ಹಿಂದೆ ಕೂಡಾ ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಜನರ ಮೆಚ್ಚುಗೆಗೆ ಅವರು ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಶಾಸಕರ ಮಾನವೀಯತೆಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

English summary
Jewargi MLA Ajay Singh helps a woman who is bleeding severely by meting with an accident. Ajay singh took woman in her car to Jewargi hopital and helped her to get first aid, and then the woman sent to Kalaburagi for more treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X