ಚಿಂಚೋಳಿಯಲ್ಲಿ ಬೃಹತ್ ಬಲೂನ್ ಪತ್ತೆ!

Posted By: Gururaj
Subscribe to Oneindia Kannada

ಕಲಬುರಗಿ, ಆಗಸ್ಟ್. 24 : ಎಲ್ಲಿಂದಲೋ ಹಾರಿಬಂದ ಬೃಹತ್ ಪ್ಲಾಸ್ಟಿಕ್ ಬಲೂನ್ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಚಿಂಚೋಳಿಯಲ್ಲಿ ನಡೆಸಿದೆ. ಬಲೂನ್ ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಗಣೇಶ ಚತುರ್ಥಿ ದಿನದಂದು ಕಲಬುರಗಿಯಲ್ಲಿ ಮಾಂಸ ಮಾರಾಟ ನಿಷೇಧ

ಗುರುವಾರ ಚಿಂಚೋಳಿ ತಾಲೂಕಿನ ಹೊಸಳ್ಳಿ ಹೆಚ್ ಗ್ರಾಮದಲ್ಲಿ ಬಲೂನ್ ಪತ್ತೆಯಾಗಿದೆ. ಎಲ್ಲಿಂದಲೋ ಹಾರಿಬಂದ ಬಲೂನ್ ರೈತರ ಜಮೀನಿನಲ್ಲಿ ಬಿದ್ದಿದೆ. ದೊಡ್ಡ ಬಲೂನ್ ಕಂಡು ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಅದನ್ನು ಮುಟ್ಟಲೂ ಹೋಗಿರಲಿಲ್ಲ.

Huge plastic balloon found in Chincholi, Kalaburagi

ಬಲೂನ್ ಸುಮಾರು ಒಂದು ಎಕರೆ ಪ್ರದೇಶಕ್ಕೆ ಹರಡಿಕೊಂಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬಲೂನ್ ನೋಡಲು ಸ್ಥಳಕ್ಕೆ ಆಗಮಿಸಿದರು. ಚಿಂಚೋಳಿ ತಹಸೀಲ್ದಾರ್ ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
White colour huge plastic balloon found in Chincholi taluk Hosahalli village, Kalaburagi on August 24, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ