ಆಪರೇಷನ್ ಕಮಲ ವಿಚಾರಣೆ ಅಕ್ಟೋಬರ್ 25ಕ್ಕೆ ಮುಂದೂಡಿಕೆ
ಕಲಬುರಗಿ, ಸೆಪ್ಟೆಂಬರ್ 26: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನಡೆದಿದೆ ಎನ್ನಲಾದ ಆಪರೇಷನ್ ಕಮಲ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಪುತ್ರ ಶಿವನಗೌಡ ಅವರಿಗೆ ಆಪರೇಷನ್ ಕಮಲಕ್ಕೆ ಯತ್ನಿಸಿರುವ ಆರೋಪದ ಹಿನ್ನೆಲೆ ದೇವದುರ್ಗ ಠಾಣೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ದೇವದುರ್ಗ ಶಾಸಕ ಶಿವನಗೌಡ ನಾಯಕ್, ಪ್ರೀತಂಗೌಡ, ಎಮ್.ಬಿ.ಮರಮಕಲ್ ವಿರುದ್ಧ ಶರಣಗೌಡ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವಿಗೆ ಶರಣಗೌಡ ಅರ್ಜಿ ಸಲ್ಲಿಸಿದ ಕಾರಣ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರಬೇಕಿತ್ತು. ರಜೆಯ ಕಾರಣದಿಂದ ಪ್ರಕರಣದ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ಪೀಠ ಅಕ್ಟೋಬರ್ 25ಕ್ಕೆ ಮುಂದೂಡಿ ಆದೇಶಿಸಿದೆ.












Click it and Unblock the Notifications