Get Updates
Get notified of breaking news, exclusive insights, and must-see stories!

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತ ಕಾರಣ ಬಿಚ್ಚಿಟ್ಟ ಈಶ್ವರಪ್ಪ

Recommended Video

      ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಕುರುಬ, ದಲಿತರಿಂದ | Oneindia Kannada

      ಚಿಂಚೋಳಿ ಮೇ 14: ಕುರುಬರು ದಡ್ಡರು ಅಂತ ಬಹಳ ಜನ ತಿಳಿದುಕೊಂಡಿದ್ದಾರೆ. ಅದೇ ಕುರುಬರು, ದಲಿತರು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಜಾಣರು ಎಂದು ತೋರಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ ವಾಗ್ದಾಳಿ ನಡೆಸಿದರು.

      ಚಿಂಚೋಳಿಯಲ್ಲಿಂದು ಆಯೋಜಿಸಲಾಗಿದ್ದ ಓಬಿಸಿ ಸಮಾವೇಶದಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

      ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ : ಕೆ.ಎಸ್.ಈಶ್ವರಪ್ಪ
      ಸಿದ್ದರಾಮಯ್ಯ ಅವರಿಗೆ ನಾನೇ ಸಿಎಂ ಅಂತಾ ಹುಚ್ಚು ಹಿಡಿದಿದೆ. ಆ ಹುಚ್ಚಿಗೆ ಭೈರತಿ ಬಸವರಾಜು, ಸೋಮಶೇಖರ್ ಮೊದಲಾದವರು ಗಾಳಿ ಹಾಕ್ತಾರೆ. ಸಿದ್ದರಾಮಯ್ಯ ನಾನೇ ಸಿಎಂ ಅಂದಾಗ ಬಾಯಿ ಮುಚ್ಕೊಂಡು ಕುತ್ಕೋ ಎಂದು ಖರ್ಗೆ ಹೇಳುತ್ತಾರೆ ಅಂತಾ ಅಂದುಕೊಂಡಿದ್ದೆ.

      'ಈಶ್ವರ ನೀನು ಪರಮೇಶ್ವರ ಆಗಲು ಸಾಧ್ಯವಿಲ್ಲ' ಎಂದು ಡಾ ಪರಮೇಶ್ವರ್ ನನಗೆ ಹೇಳಿದ್ದಾರೆ. ನೀವು ಪರಮೇಶ್ವರ ಆಗಿದ್ದರೆ ಮೂರನೇ ಕಣ್ಣು ತರೆದು ಸಿದ್ದರಾಮಯ್ಯ ಅವರನ್ನು ಭಸ್ಮ ಮಾಡಿಬಿಡುತ್ತಿದ್ರಿ. ಆದರೆ, ಅಧಿಕಾರದ ಆಸೆಯಿಂದ ಅದನ್ನು ನೀವು ಮಾಡಲಿಲ್ಲ ಹಾಗೂ ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಲಿಲ್ಲ' ಎಂದು ಲೇವಡಿ ಮಾಡಿದರು.

      ಸಾಮಾಜಿಕ ನ್ಯಾಯ ಕಾಪಾಡೋದು ನೀವೊಬ್ಬರೇನಾ?

      ಸಾಮಾಜಿಕ ನ್ಯಾಯ ಕಾಪಾಡೋದು ನೀವೊಬ್ಬರೇನಾ?

      ಸಾಮಾಜಿಕ ನ್ಯಾಯ ಕಾಪಾಡೋದು ನೀವೊಬ್ಬರೇನಾ? ಅಂದು ವಾಜಪೇಯಿ ಪ್ರಧಾನಮಂತ್ರಿ ಇದ್ದಾಗ ಮುಸ್ಲಿಂ ಆಗಿದ್ದ ಕಲಾಂ ರಾಷ್ಟ್ರಪತಿ ಇದ್ದರು. ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಕ್ರಿಶ್ಚಿಯನ್ ಆಗಿದ್ರು, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಗೆ ಅವಕಾಶ ಮಾಡಿಕೊಟ್ಟ ಪಾರ್ಟಿ ಬಿಜೆಪಿ. ಲಿಂಗಾಯತ ಧರ್ಮ ಒಡೆದು. ಈ ಇಬ್ಬರೂ ತಪ್ಪು ಮಾಡಿಬೆಟ್ಟೆವು ಎಂದು ಕಣ್ಣೀರು ಹಾಕ್ತಿದ್ದಾರೆ ಎಂದು ಹೇಳಿದರು.

      ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ

      ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ

      ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ ಮೋದಿ ವಿರುದ್ದ ಮಾತನಾಡಿದ ಪ್ರಿಯಾಂಕ ಖರ್ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅವಿನಾಶ್ ಜಾಧವ್ ಗೆಲ್ಲಿಸೋ ಮೂಲಕ ಖರ್ಗೆ ಕುಟುಂಬಕ್ಕೆ ಬುದ್ದಿ ಕಲಿಸಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ರಘುನಾಥ್ ಮಲ್ಯಾಪುರೆ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್, ಹಲವು ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಈಶ್ವರಪ್ಪನವರಿಗೆ ಕುರಿಕೊಟ್ಟು ಕಂಬಳಿ ಹಾಕಿ, ಬೃಹತ್ ಹಾರ ಹಾಕುವ ಮೂಲಕ ಸನ್ಮಾನ ಮಾಡಲಾಯಿತು.

      ಸಿದ್ದರಾಮಯ್ಯ ಅವರದು ತಿರುಕನ ಕನಸು

      ಸಿದ್ದರಾಮಯ್ಯ ಅವರದು ತಿರುಕನ ಕನಸು

      ಸಿದ್ದರಾಮಯ್ಯ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ನ ಕೆಲವು ಚೇಲಾ ಶಾಸಕರಿಂದ ಹೇಳಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರದು ತಿರುಕನ ಕನಸು. ಸಿಎಂ ಆಗುವ ಹುಚ್ಚಿನಿಂದ ಅವರು ಹೊರ ಬರಬೇಕು. ಕಾಂಗ್ರೆಸ್‌ನ ಕಾಟದಿಂದ ಕುಮಾರಸ್ವಾಮಿ ವರ್ಷವಿಡೀ ಕಣ್ಣೀರು ಹಾಕಿದರು ಎಂದರು.

      ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ

      ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ

      ಮೇ 23ರ ನಂತರ ಸಿದ್ದರಾಮಯ್ಯ ಎಲ್ಲಿರುತ್ತಾರೆ ಎಂಬುದನ್ನು ನೋಡುತ್ತಿರಿ. ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ. ಆದರೂ ಮುದುಕಿಯಂತೆ ತುರುಬು ಕಟ್ಟಿಕೊಳ್ಳೋಕೆ ಹೋಗ್ತಿದ್ದಾರೆ. ಅವರ ನಾಲಿಗೆ ಮೇಲೆ ಏನಿದೆಯೋ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಮೋದಿ ಅವರಿಗೆ ಅವನು ಇವನು ಎನ್ನುತ್ತಾರೆ. ಶೋಭಾ ಕರಂದ್ಲಾಜೆಗೆ ಅವಳು ಇವಳು ಎಂದು ಏಕವಚನದಲ್ಲಿ ಅನ್ನುತ್ತಾರೆ ಎಂದು ಕಿಡಿಕಾರಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+