ರಾಮಲಿಂಗಾರೆಡ್ಡಿಯವರೆ ಗಲ್ಲಿ ನಾಯಕರ ರೀತಿ ಮಾತನಾಡಬೇಡಿ: ಪ್ರಹ್ಲಾದ್
ಕಲಬುರಗಿ, ಫೆಬ್ರವರಿ 17 : ಸತ್ತವರೆಲ್ಲ ಬಿಜೆಪಿಯವರೆ ಎಂಬ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕುರಿತು ಸಂಸದ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಲಿಂಗಾರೆಡ್ಡಿಯವರೇ ನೀವು ಗಲ್ಲಿ ನಾಯಕರೆ ರೀತಿ ಮಾತನಾಡಬೇಡಿ ನೀವೊಬ್ಬರು ರಾಜ್ಯದ ಗೃಹ ಸಚಿವ ಎನ್ನುವುದು ನೆನಪಿರಲಿ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕೊಡುವ ಸರ್ಟಿಫಿಕೇಟ್ ನಮಗೆ ಬೇಡ, ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಮ್ ರಾಜಕಾರಣಿ, ಹಾಗಾಗಿ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅಕ್ರಮ ಆಸ್ತಿ ಗಳಿಕೆ ಆರೋಪ ವಿಚಾರ ಕುರಿತು ಮಾತನಾಡಿದ ಅವರು, ಖರ್ಗೆ ಅಕ್ರಮ ಆಸ್ತಿ ಗಳಿಕೆಯ ಅಧಿಕೃತ ದಾಖಲೆಗಳು ನನ್ನ ಬಳಿಯಿಲ್ಲ ಬಿಜೆಪಿ ಸೋಸಿಯಲ್ ಸೆಲ್‌ನಲ್ಲಿ ಖರ್ಗೆ ಅಕ್ರಮ ಆಸ್ತಿ ಗಳಿಕೆ ಲಿಸ್ಟ್ ಕಳೆದ ನಾಲ್ಕೈದು ವರ್ಷದಿಂದ ಹರಿದಾಡುತ್ತಿದೆ ದಾಖಲೆಗಳಿಲ್ಲದೇ ನಾ ಯಾವತ್ತು ಇನ್ನೊಬ್ಬರ ಬಗ್ಗೆ ಆರೋಪ ಮಾಡುವುದಿಲ್ಲ ಎಂದರು.

ಸಿದ್ದರಾಮಯ್ಯನವರು ರಾಜ್ಯವನ್ನ ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಇದು ಕೇವಲ ಘೋಷಣೆಗಳ ಬಜೆಟ್, ತೆರಿಗೆ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ ಬಜೆಟ್ ನ ಯೋಜನೆಗಳು 50% ರಷ್ಟು ಜಾರಿಯಾಗಿಲ್ಲ ತೆರಿಗೆ ಕ್ರೋಢಿಕರಣ ಮಾಡುವ ಯೋಗ್ಯತೆ ಸಿಎಂಗೆ ಇಲ್ಲ ಎಂದರು.












Click it and Unblock the Notifications