SWR: ಬೆಂಗಳೂರು-ಕಲಬುರಗಿ ದೈನಂದಿನ ರೈಲುಗಳಿಗೆ ಹೆಚ್ಚಿದ ಬೇಡಿಕೆ
South Western Railway: ಕಲ್ಯಾಣ ಕರ್ನಾಟಕ ಭಾಗವು ಮೊದಲಿನಿಂದಲೂ ಹಿಂದೂಳಿದಿರುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಸಾರಿಗೆ ವ್ಯವಸ್ಥೆಯು ಸಹ ಸಮರ್ಪಕವಾಗಿಲ್ಲ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಕಾಣಿಸುತ್ತಿವೆ. ಇದೀಗ ಬೇಸಿಗೆ ಹಿನ್ನೆಲೆ 60 ರೈಲುಗಳನ್ನು ಬಿಡಲಾಗಿದೆ. ಹೀಗಿದ್ದರು ಕಲಬುರಗಿ ಹಾಗೂ ಯಾದಗಿರಿ ರೈಲು ನಿಲ್ದಾಣಗಳಲ್ಲಿ ನಿಲ್ದಾಣಗಳಲ್ಲಿ ಅಪಾರ ಜನಸಂದಣಿ ಸೃಷ್ಟಿಯಾಗುತ್ತಿದೆ. ಜನ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಸಾರ್ವಜನಿಕರು ಹೆಚ್ಚುವರಿ ರೈಲುಗಳನ್ನು ಕಾರ್ಯಾಚರಣೆಗೆ ಬೇಡಿಕೆ ಇಟ್ಟಿದ್ದಾರೆ..
ಇದೇ ಏಪ್ರಿಲ್ ಆರಂಭದಲ್ಲಿ ರೈಲ್ವೆ ಸಲಹಾ ಮಂಡಳಿಯು ಬೆಂಗಳೂರಿನಿಂದ-ಕಲಬುರಗಿಗೆ 60 ಬೇಸಿಗೆ ರೈಲುಗಳನ್ನು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿತು. ಕಲ್ಯಾಣ ಕರ್ನಾಟಕದ ಬೀದರ್‌ಗೆ ಜಿಲ್ಲೆಗೂ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಸ್ಥಗಿತಗೊಂಡಿದ್ದ ರೈಲನ್ನು ಪುನಾರಂಭಿಸಲಾಗಿದೆ. ಹೀಗಿದ್ದರು ಸಹಿತ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ರೈಲುಗಳ ಸಮರ್ಪಕ ಕಾರ್ಯಾಚರಣೆಗೆ ಆಗ್ರಹ ಕೇಳಿ ಬಂದಿದೆ.

ಬೆಂಗಳೂರಿನಿಂದ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ವಂದೇ ಭಾರತ್ ಸೇರಿದಂತೆ ಕೆಲವು ರೈಲುಗಳು ಸಂಚರಿಸುತ್ತದೆ. ಇದರಲ್ಲಿ ಪ್ಯಾಸೆಂಜರ್, ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿರುವ ವಿಡಿಯೋ ನೋಡಿದರೆ, ಕಲಬುರಗಿ ಹಾಗೂ ಯಾದಗಿರಿ ರೈಲು ನಿಲ್ದಾಣಗಳಲ್ಲಿ ಕಾಲಿಡದಷ್ಟು ಜಾಗವಿಲ್ಲದಂತೆ ಪ್ರಯಾಣಿಕರು ತುಂಬಿಕೊಂಡಿರುವುದು ಗೊತ್ತಾಗುತ್ತದೆ. ಒಂದೇ ಒಂದು ರೈಲು ಬಂದರು ಸಾಕು ಜನರು ಏರಿಬಿಡುತ್ತಾರೆ. ಕೂರಲು ಆಸನವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಜಿಲ್ಲೆಗಳಿಂದ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಂಗಳೂರಿನ ಕಡೆಗೆ ಬರುವವರ ಪ್ರಮಾಣ ಹೆಚ್ಚಿರುತ್ತದೆ. ಅವರಿಗೆ ಸೂಕ್ತ ರೈಲ್ವೆ ಸೇವೆ ಸಿಗಬೇಕಿದೆ. ಮಹಿಳೆ, ಮಕ್ಕಳ, ವೃದ್ಧ ಸೇರಿದಂತೆ ಪ್ರಯಾಣಿಕರು ನೂಕು ನುಗ್ಗಲಿನಲ್ಲಿ ನಿಲ್ದಾಣಗಳಿಗೆ ಬರುವ ರೈಲುಗಳನ್ನು ಏರುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಕಡಿಮೆ ರೈಲುಗಳಿದ್ದಾಗ ಜನದಟ್ಟಣೆ ಹೆಚ್ಚಾಗುವುದು ಸಾಮಾನ್ಯ. ಆದ್ದರಿಂದ ಹೆಚ್ಚುವರಿ ದೈನಂದಿನ ಕಾರ್ಯಾಚರಣೆ ರೈಲುಗಳ ಬಿಡುಗಡೆ ಮಾಡುವಂತೆ ಆಗ್ರಹಿಸಲಾಗಿದೆ.
Video 1 from Kalaburagi
— Rohith Kattimani (@rohith_rko) April 20, 2025
Video 2 from Yadgir
All these crowd are just for Bengaluru trains, present trains runs with Huge crowd. Additional trains required@SWRRLY @Central_Railway @SCRailwayIndia plz look into it & give us "New" daily train from Bidar/Kalaburagi to Bengaluru pic.twitter.com/zEP1rJBIZi
ಭಾರೀ ಜನಸಂದಣಿಯೊಂದಿಗೆ ಯಾದಗಿರಿ, ಕಲಬುರಗಿ ರೈಲು ನಿಲ್ದಾಣಕ್ಕೆ ಬರುವ ರೈಲುಗಳನ್ನು ಹತ್ತಲು ಸಮಸ್ಯೆ ಆಗುತ್ತಿದೆ. ಏಕೆಂದರೆ ರೈಲುಗಳಲ್ಲಿ ಮೊದಲೇ ಜನರು ತುಂಬಿರುತ್ತಾರೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಓಡಾಟ ಹೆಚ್ಚಿರುವ ಕಾರಣ ಈ ಭಾಗಕ್ಕೆ ಹೆಚ್ಚುವರಿ ರೈಲುಗಳು ಅಗತ್ಯವಿದೆ. ವಾರಕ್ಕೆ ಎರಡು ಬಾರಿ, ವಾರಕ್ಕೆ ಒಮ್ಮೆ ಓಡುವ ರೈಲುಗಳ ಬದಲಾಗಿ, ದೈನಂದಿನ ರೈಲಿನ ಸಂಖ್ಯೆ ಹೆಚ್ಚಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಸಲಾಗಿದೆ.
ಬೇಸಿಗೆ ರೈಲುಗಳು ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಹೊರಡುತ್ತವೆ. ಮಾರನೇ ದಿನ ಅಲ್ಲಿಂದ ಬೆಂಗಳೂರಿಗೆ ಬರುತ್ತಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸಹ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ಸೇವೆ ನೀಡುತ್ತಿದೆ. ಸಾರಿಗೆ ಸೇವೆ ವಿಚಾರದಲ್ಲಿ ಹಿಂದಿರುವ ಈ ಭಾಗಕ್ಕೆ ಹೆಚ್ಚಿನ ಸೇವೆ ಒದಗಿಸಬೇಕಿದೆ..












Click it and Unblock the Notifications