ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಕೈ ಕಾರ್ಯಕರ್ತರು

Posted By:
Subscribe to Oneindia Kannada

ಕಲಬುರಗಿ, ಡಿಸೆಂಬರ್ 05 : ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನಿನ್ನೆ (ಡಿಸೆಂಬರ್ 04) ಕಲಬುರಗಿ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಮಹಾಗಾಂವ್ ಗ್ರಾಮದ ಹನುಮಂತ್, ಕಾಶಿನಾಥ್ ಹಲ್ಲೆಗೊಳಗಾದ ಯುವಕರು.

Congress party works beats BJP party workers

ಕಾಂಗ್ರೆಸ್ ಕಾರ್ಯಕರ್ತರಾದ ವಿಶ್ವನಾಥ್ ತಡಕಲ್, ಜಾವೀದ್, ಅಖಿಲ್, ಗುರುನಾಥ್ ಅವರುಗಳು ರಾಜಕೀಯ ದ್ವೇಷದಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.

ಹಲ್ಲೆ ಮಾಡಿದವರಲ್ಲಿ ವಿಶ್ವನಾಥ್ ತಡಕಲ್ ಎಂಬುವನು ಮಹಾಗಾಂವ್ ಜಿ ಪಂ ಸದಸ್ಯ ವೈಜಿನಾಥ್ ತಡಕಲ್ ಸಹೋದರನಾಗಿದ್ದಾನೆ.

ಸಮಾವೇಶದಲ್ಲಿ ಅಡುಗೆ ಬಡಿಸುವ ಕಾರ್ಯದಲ್ಲಿ ಹನುಮಂತ್ (40) ಕಾಶಿನಾಥ್ ತೊಡಗಿಸಿಕೊಂಡಿದ್ದರು ಆ ಸಮಯದಲ್ಲಿ ಬಿಜೆಪಿ ಮುಖಂಡರುಗಳ ಜೊತೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರಿಂದ ಕೆರಳಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಗಾಯಾಳುಗಳನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP party workers Hanumanth and Kashinath was beaten by Congress party members Vishwanath, Javeed, Anil, Gurunath in Kalaburagi district Mahangav village. complaint lodge against congress party workers in Mahangav police station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ