ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.16ರಂದು ಸಿಎಂ ಸಿದ್ದರಾಮಯ್ಯನವರ ಯಾತ್ರೆ ಕಲಬುರಗಿಯತ್ತ

|
Google Oneindia Kannada News

ಕಲಬುರಗಿ, ಡಿಸೆಂಬರ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡಿರುವ 'ನವಕರ್ನಾಟಕ ನಿರ್ಮಾಣ ಯಾತ್ರೆ' ನಾಳೆ ಅಂದರೆ ಡಿಸೆಂಬರ್ 16ರಂದು ಕಲುಬುರಗಿ ಜಿಲ್ಲೆಯತ್ತ ಸಾಗಲಿದೆ.

ಡಿಸೆಂಬರ್ 16ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ರಾಯಚೂರಿನ ಯರಮರಸ್ ಹೆಲಿಪ್ಯಾಡ್ ನಿಂದ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿ ಜಿಲ್ಲೆಯ ಅಫಜಲಪುರ ಹೆಲಿಪ್ಯಾಡಿಗೆ ತೆರಳುವರು.

ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳಾವುವು?ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳಾವುವು?

ನಂತರ ಅಫಜಲಪುರ ನ್ಯಾಶನಲ್ ಫಂಕ್ಷನ್ ಹಾಲ್‍ ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

CM Siddaramaiah's 'Nava Karnataka Nirmana Yatra' move to the Kalaburagi district on Dece 16

ಅಂದು ಮಧ್ಯಾಹ್ನ 12.30 ಗಂಟೆಗೆ ಅಫಜಲಪುರ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 1.10 ಗಂಟೆಗೆ ಸೇಡಂ ವಾಸವದತ್ತ ಸಿಮೆಂಟ್ ಫ್ಯಾಕ್ಟರಿ ಹೆಲಿಪ್ಯಾಡಿಗೆ ಆಗಮಿಸಿ, ಸೇಡಂ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

ದೇವರಾಜ ಅರಸು ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿ: ಸಿದ್ದರಾಮಯ್ಯದೇವರಾಜ ಅರಸು ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿ: ಸಿದ್ದರಾಮಯ್ಯ

ಮಧ್ಯಾಹ್ನ 3.45 ಗಂಟೆಗೆ ಸೇಡಂ ವಾಸವದತ್ತ ಸಿಮೆಂಟ್ ಫ್ಯಾಕ್ಟರಿ ಹೆಲಿಪ್ಯಾಡಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು, ಸಂಜೆ 4.15 ಗಂಟೆಗೆ ಜೇವರ್ಗಿ ತಾಲೂಕಿನ ಯಡ್ರಾಮಿ ಹೆಲಿಪ್ಯಾಡಿಗೆ ಆಗಮಿಸಿ, ಯಡ್ರಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

ಅಂದು ಸಂಜೆ 6 ಗಂಟೆಗೆ ಯಡ್ರಾಮಿಯಿಂದ ರಸ್ತೆ ಮೂಲಕ ಕಲಬುರಗಿಗೆ ತೆರಳಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ಡಿಸೆಂಬರ್ 17ರಂದು ರವಿವಾರ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ವುಮೆನ್ಸ್ ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು.

ಬೆಳಿಗ್ಗೆ 10 ಗಂಟೆಗೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಸಭಾಂಗಣ ಉದ್ಘಾಟಿಸುವರು. ನಂತರ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಡಿ.ಎ.ಆರ್. ಪೊಲೀಸ್ ಮೈದಾನದ ಹೆಲಿಪ್ಯಾಡಿನಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ಗ್ರಾಮಕ್ಕೆ ಪ್ರಯಾಣ ಬೆಳಸುವರು.

English summary
Karnataka Chief Minister Siddaramaiah's 'Nava Karnataka Nirmana Yatra' move to Kalaburagi district from Raichur on December 16. He inaugurates some development works in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X