ಕಲಬುರಗಿ : ಒಂದೇ ದಿನದಲ್ಲಿ ಶೌಚಾಲಯ ಕಟ್ಟಿಸಿಕೊಟ್ಟ ಪಾಲಿಕೆ

Posted By:
Subscribe to Oneindia Kannada

ಕಲಬುರಗಿ, ಆಗಸ್ಟ್ 03 : ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯು ಎನ್ಎಸ್ಎಸ್, ಎನ್‌ಸಿಸಿ ಮತ್ತು ಇಕೋ-ಕ್ಲಬ್‍ಗಳ ಸಹಯೋಗದೊಂದಿಗೆ ಕಲಬುರಗಿ ನಗರದಾದ್ಯಂತ ಆಗಸ್ಟ್ 1 ರಿಂದ 15ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಯಲು ಶೌಚಕ್ಕೆ ಹೋಗುತ್ತಿದ್ದವರಿಗೆ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಕೊಡಲಾಗಿದೆ.

ಸ್ವಚ್ಛತಾ ಕಾರ್ಯಕ್ರಮದ ಮೊದಲನೇ ಹಂತವಾಗಿ ಮಂಗಳವಾರ ನಗರದ ವಾರ್ಡ್ ಸಂಖ್ಯೆ 7ರ ರಾಜೀವ ಗಾಂಧಿ ನಗರ ಪ್ರದೇಶದಲ್ಲಿ ಬಯಲು ಶೌಚಾಲಯಕ್ಕೆ ಹೊರಟಿದ್ದ ಸುಮಾರು 20 ಜನರನ್ನು ಗುರುತಿಸಲಾಯಿತು. ಇವರು ಮನೆಯಲ್ಲಿ ವೈಯಕ್ತಿಕ ಶೌಚಾಲಯ ಇರುವುದಿಲ್ಲ. ಆದ್ದರಿಂದ, ನಾವು ಬಯಲು ಶೌಚಕ್ಕೆ ತೆರಳುತ್ತಿದ್ದೇವೆ ಹೇಳಿದರು.[ಶೀಘ್ರದಲ್ಲೇ ಕೊಪ್ಪಳ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ]

toliet

ಮೊದಲ ಹಂತದಲ್ಲಿ ಸೈಯ್ಯದ್ ಶಂಶೋದ್ದಿನ್ ರಾಜಾ ಹಕ್ಕೀಂ, ಮೀನಾಕ್ಷಿ ಶಿವಪ್ಪ, ಮಲ್ಲಮ್ಮ ಮಲ್ಲಿಕಾರ್ಜುನ, ಶೋಭಾ ಮನೋಹರ್ ಹಾಗೂ ಚಂದುಬಾಯಿ ವಸಂತ ಅವರಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಶೌಚಾಲಯ ನಿರ್ಮಿಸುವ ಮೊದಲು ಇವರ ಮನೆಗಳಿಗೆ ಹೋಗಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.[ವಿದ್ಯಾರ್ಥಿ ಮಲ್ಲಮ್ಮಳ ಉಪವಾಸಕ್ಕೆ ಫಲ ಸಿಕ್ಕಿತ್ತು]

ಮನೆಗೆ ಸಂಬಂಧಿಸಿದಂತೆ ಇರುವ ಸೂಕ್ತ ದಾಖಲೆ ಹಾಗೂ ಇತರೆ ದಾಖಲೆಗಳನ್ನು ಪಡೆದು ಅವರಿಗೆ ಸ್ಥಳದಲ್ಲಿಯೇ ಶೌಚಾಲಯವನ್ನು ಮಂಜೂರು ಮಾಡಿ, ಒಂದೇ ದಿನದಲ್ಲಿ ಇವರಿಗೆ ಶೌಚಾಲಯವನ್ನು ನಿರ್ಮಿಸಿಕೊಡಲಾಗಿದೆ.

kalaburagi

'ಇದೇ ರೀತಿ ಮುಂದಿನ ದಿನಗಳಲ್ಲಿ ಪಾಲಿಕೆಯು ಕಲಬುರಗಿ ನಗರವನ್ನು ಬಯಲು ಮುಕ್ತ ನಗರವನ್ನಾಗಿ ಮಾಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲ ಕುಮಾರ ಹೇಳಿದ್ದಾರೆ.[ಚಿತ್ರ : ಮಾಹಿತಿ : ಕಲಬುರಗಿ ವಾರ್ತೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In association with the various organizations Kalaburagi City Corporation launched Cleanliness campaign in city from August 1 to 15, 2016.
Please Wait while comments are loading...