ಕುಮಾರಸ್ವಾಮಿ ತುಘಲಕ್ ದರ್ಬಾರ್ ನಡೆಸಿದ್ದಾರೆ: ಯಡಿಯೂರಪ್ಪ
ಚಿಂಚೋಳಿ, ಮೇ 15: ಹಾಸನದಲ್ಲಿನ ವಿಡಿಯೋ ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ತಮ್ಮ ಸರ್ಕಾರದ ನಡೆ ತಪ್ಪು ಎಂಬ ಅರಿವಿದ್ದರೂ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಪ್ರಭಾವ ಬೀರಿ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ.
ಇದೆಲ್ಲವು ತನಿಖೆಯ ನಂತರ ಹೊರ ಬೀಳಲಿದ್ದು ಕಾಲವೇ ಉತ್ತರ ನೀಡಲಿದೆ. ಚಿಂಚೋಳಿಯ ರೇವಗ್ಗಿಯಲ್ಲಿ ಮಾತನಾಡಿದ ಅವರು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಇದಕ್ಕೂ ಮುನ್ನ ಚಿಂಚೋಳಿ ಭಾಗದ ಪ್ರಭಾವಿ ದೈವ ರೇವಗ್ಗಿ ರೇವಣ ಸಿದ್ದೇಶ್ವರ ದೇವಾಲಯದಲ್ಲಿ ಚಿಂಚೋಳಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಗೆಲುವಿಗಾಗಿ ವಿಶೇಷ ಪೂಜೆ ಹರಕೆ ಸಲ್ಲಿಸಿದರು. ಈ ದೇಗುಲದಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಪಲಿಸುತ್ತದೆ ಎಂಬ ನಂಬಿಕೆ ಇದ್ದು, ನೂರೊಂದು ಜಂಗಮರಿಗೆ ದೇವಾಲಯದಲ್ಲಿ ಊಟ, ವಸ್ತ್ರ, ಕಾಣಿಕೆ ನೀಡಿ ಜಂಗಾಮಾರ್ಚನೆ ಸೇವೆಯ ಹರಕೆ ಸಲ್ಲಿಸಿದರು.

ಬಿಜೆಪಿ ಕಾರ್ಯಕರ್ತರ ಸಮಾವೇಶ
ನಂತರ ಅರುಣಕಲ್ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ ನವರು, ಅವಿನಾಶ್ ಜಾಧವ್ 25 ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.
ಖರ್ಗೆ ಹೇಳ್ತಾರೆ ಉಮೇಶ್ ಜಾಧವ್ ಕಾಂಗ್ರೆಸ್ ಗೆ ಮೋಸ ಮಾಡಿದ್ದಾರೆ ಎಂದು. ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಅವಮಾನ ಮಾಡಿಲ್ಲವೇ? ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ ಪಡೆದು ಅವಮಾನ ಮಾಡಿದರು.

ರೈತರ ಸಾಲಾಮನ್ನಾ ಮಾಡಿ
ರಾಜೀನಾಮೆ ಪಡೆದ ನಂತರ ಯಾರೊಬ್ಬರೂ ಅವರ ಜೊತೆ ಇರಲಿಲ್ಲ. ಶುಗರ್ ಫ್ಯಾಕ್ಟರಿ ಶುರುಮಾಡುವುದು ಹಾಗೂ ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರ್ಪಡೆಗೊಳಿಸುವುದಾಗಿ ಭರವಸೆಯನ್ನು ನೀಡಿದರು. ಈ ಬಾರಿ ಅಧಿವೇಶನದಲ್ಲಿ ರೈತರ ಸಾಲಾಮನ್ನಾ ಮಾಡಿ ಎನ್ನುತ್ತೇನೆ. ಇಲ್ಲಾ ಎಂದರೆ ಅಧಿಕಾರ ಬಿಟ್ಟು ತೊಲಗಿ ಎಂದು ಗುಟುರು ಹಾಕಿದರು.

166 ತಾಲ್ಲೂಕುಗಳೂ ಬರದಿಂದ ತತ್ತರಿಸಿವೆ
166 ತಾಲ್ಲೂಕುಗಳೂ ಬರದಿಂದ ತತ್ತರಿಸಿವೆ.ಇದರ ಬಗ್ಗೆ ಗಮನ ಹರಿಸಬೇಕಾಗಿದ್ದ ರಾಜ್ಯ ಸರಕಾರದ ಸಚಿವರು ಮಾತ್ರಾ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಶಾಸಕರ ಸಭೆಯನ್ನು ಕರೆದು ಕ್ರಮ ತಗೆದುಕೊಳ್ಳುತ್ತೇನೆ ಎಂದರು. ಇದು ಮಲ್ಲಿಕಾರ್ಜುನ ಖರ್ಗೆ ಅವರ ಕೊನೆ ಚುನಾವಣೆ. ಉಮೇಶ್ ಜಾಧವ್ ಗೆಲ್ಲತ್ತಾರೆ. ಗೆಲ್ಲುವು ಮೂಲಕ ನಿಮ್ಮ ಎಲ್ಲಾ ಮಾತುಗಳಿಗೂ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ ರಾಜ್ಯದಲ್ಲಿ ರಾಜ್ಯದಲ್ಲಿ ಸರ್ಕಾರ ಇಲ್ಲ, 'ಹುಚ್ಚು ಮುಂಡೆ ಮದ್ವೆಲಿ ಉಂಡೋನೆ ಜಾಣ' ಅನ್ನೋ ಹಾಗಿದೆ. ನಿಂಬೆಣ್ಣ ರೇವಣ್ಣ ಹೇಳಿದ ಹಾಗೆ ಕುಮಾರಸ್ವಾಮಿ ಮತ್ತು ಮಂತ್ರಿಗಳು ಕೇಳುತ್ತಾರೆ. ಹೀಗಿರುವಾಗ ವಿಡಿಯೋ ಡಿಲಿಟ್ ಮಾಡೋದು ಇವರಿಗೆ ದೊಡ್ಡ ವಿಚಾರವೇ ಅಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಚಿಂಚೋಳಿಯಲ್ಲಿ ಪ್ರಚಾರ ನಿರತ ಯಡಿಯೂರಪ್ಪ
ತಮ್ಮ ಸರ್ಕಾರದ ನಡೆ ತಪ್ಪು ಎಂಬ ಅರಿವಿದ್ದರೂ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಪ್ರಭಾವ ಬೀರಿ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ. ಇದೆಲ್ಲವು ತನಿಖೆಯ ನಂತರ ಹೊರ ಬೀಳಲಿದ್ದು ಕಾಲವೇ ಉತ್ತರ ನೀಡಲಿದೆ. ಚಿಂಚೋಳಿಯ ರೇವಗ್ಗಿಯಲ್ಲಿ ಮಾತನಾಡಿದ ಅವರು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.












Click it and Unblock the Notifications