ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲೂವ್ಹೇಲ್ ಆತ್ಮಹತ್ಯೆ ಕೂಪಕ್ಕೆ ಕಲಬುರಗಿಯ ಬಾಲಕ ಬಲಿ

|
Google Oneindia Kannada News

ಕಲಬುರಗಿ, ಅಕ್ಟೋಬರ್ 09: ಮಾರಣಾಂತಿಕ ಬ್ಲೂವ್ಹೇಲ್ ಗೇಮ್ ಗೆ ಕಲಬುರಗಿಯ ಮಹಾಲಕ್ಷ್ಮಿ ಲೇಔಟ್ ನ ಬಾಲಕನೊಬ್ಬ ಬಲಿಯಾಗಿದ್ದು ಕರ್ನಾಟಕದಾದ್ಯಂತ ಆತಂಕ ಸೃಷ್ಟಿಸಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಇಲ್ಲಿನ ಸೆಂಟ್ ಮೇರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಸಮರ್ಥ್(12) ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ಆತ ಬ್ಲೂವ್ಹೇಲ್ ಗೇಮ್ ಆಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!

ತಾಯಿಯ ದುಪ್ಪಟ್ಟಾ ಹಿಡಿದು ಆಟವಾಡುತ್ತಿದ್ದ ಸರ್ಥ್, ನಂತರ ತಾಯಿ ಮನೆಯಲ್ಲಿಲ್ಲದ ಸಮಯದಲ್ಲಿ ರೂಮಿನಲ್ಲಿದ್ದ ಫ್ಯಾನಿಗೆ ದುಪ್ಪಟ್ಟಾ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾನೆ.

Addicted to Deadly Blue whale online game: Student commits suicide in Kalaburagi

ಅಪಾಯಕಾರಿ ಆನ್ ಲೈನ್ ಆಟವಾದ ಬ್ಲೂವ್ಹೇಲ್ ನ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಅರಿವು ಮೂಡಿಸಬೇಕು ಎಂದು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು. ಇದುವರೆಗೆ ವಿಶ್ವದಾದ್ಯಂತ ಬ್ಲೂವ್ಹೇನ್ ಆಟಕ್ಕೆ 150 ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.

ಬ್ಲೂವ್ಹೇಲ್ ಗೇಮ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿ: ಸುಪ್ರೀಂ ಸೂಚನೆ ಬ್ಲೂವ್ಹೇಲ್ ಗೇಮ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿ: ಸುಪ್ರೀಂ ಸೂಚನೆ

ಬ್ಲೂವ್ಹೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುತ್ತದೆ. ಪ್ರತಿ ಟಾಸ್ಕ್ ನಲ್ಲೂ ವ್ಯಕ್ತಿ ತನ್ನ ದೇಹಕ್ಕೆ ತಾನೇ ಹಿಂಸೆ ಕೊಟ್ಟುಕೊಳ್ಳಬೇಕು. ಕೊನೆಯ ಟಾಸ್ಕ್ ನಲ್ಲಿ ಆಟಗಾರ ಆತ್ಮಹತ್ಯೆಗೆ ಶರಣಾಗಬೇಕು. ಇಂಥ ವಿಚಿತ್ರ, ಅಪಾಯಕಾರಿ, ವಿಕೃತ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿರುವುದು ಸರ್ಕಾರಕ್ಕೂ, ನ್ಯಾಯಾಲಯಕ್ಕೂ ತಲೆನೋವಾಗಿ ಪರಿಣಮಿಸಿತ್ತು.

ಇತ್ತೀಚೆಗಷ್ಟೆ whatsapp ನಲ್ಲಿ ಮೋಮೋ ಎಂಬ ಡೆಡ್ಲಿ ಆನ್ ಲೈನ್ ಆಟವೂ ಹರಡುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

English summary
A 12 year old boy, studying 7th standard committed suicide in Kalaburagi district. Police suspected the boy was addicted to deadly Blue whale online game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X