ಕೊರೊನಾ ಶಂಕಿತ ವೃದ್ಧ ಬಲಿ: ಕರ್ನಾಟಕದ ಮೊದಲ ಸಾವು

ಕಲಬುರಗಿ, ಮಾರ್ಚ್ 11: ಕೊರೊನಾ ವೈರಸ್ ಶಂಕಿತ ಕರ್ನಾಟಕದ ವೃದ್ಧ ಸಾವನಪ್ಪಿದ್ದಾರೆ. ಗುಲ್ಬರ್ಗದ 75 ವರ್ಷ ಅಜ್ಜ ಕರ್ನಾಟಕದ ಮೊದಲ ಬಲಿಯಾಗಿದ್ದಾರೆ.

Recommended Video

      In Karnataka suspected coronavirus patient is no more | Oneindia Kannada

      ಕೊರೊನಾ ವೈರಸ್ ಶಂಕಿತರ ಹೆಸರು ಮಹಮ್ಮದ್ ಹುಸೇನ್ ಸಿದ್ಧಿಕಿ. ಫೆಬ್ರವರಿ 29 ರಂದು ದುಬೈನಿಂದ ಗುಲ್ಬರ್ಗಕ್ಕೆ ಇವರು ಬಂದಿದ್ದರು. ಅನಾರೋಗ್ಯ ಕಾರಣದಿಂದ ಗುಲ್ಬರ್ಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ವೈರಸ್ ಲಕ್ಷಣಗಳು ಕಂಡ ಕಾರಣ ಅವರನ್ನು ಪರೀಕ್ಷೆ ನಡೆಸಲಾಗಿತ್ತು.

      ಕೊರೊನಾ ಸೋಂಕು ಶಂಕೆ ವ್ಯಕ್ತವಾದ ಕಾರಣ ಕುಟುಂಬದವರು ಹೈದರಾಬಾದ್‌ಗೆ ಶಿಫ್ಟ್ ಮಾಡಿದರು. ಹೈದರಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ನಿನ್ನೆ ರಾತ್ರಿ ಸಾವನಪ್ಪಿದ್ದಾರೆ. ಆದರೆ, ವರದಿ ಬಂದ ನಂತರ ವೃದ್ಧ ಕೊರೊನಾ ವೈರಸ್ ನಿಂದಲೇ ಮರಣ ಹೊಂದಿದ್ದಾರೆ ಎಂದು ದೃಢವಾಗುತ್ತದೆ.

      ಹೈದರಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ನಿನ್ನೆ ರಾತ್ರಿ ಸಾವನಪ್ಪಿದ್ದಾರೆ. ಆದರೆ, ವರದಿ ಬಂದ ನಂತರ ವೃದ್ಧ ಕೊರೊನಾ ವೈರಸ್ ನಿಂದಲೇ ಮರಣ ಹೊಂದಿದ್ದಾರೆ ಎಂದು ದೃಢವಾಗುತ್ತದೆ.

      ಗುಲ್ಬರ್ಗದ ವೃದ್ಧ ಸಾವು

      ಗುಲ್ಬರ್ಗದ ವೃದ್ಧ ಸಾವು

      ಗುಲ್ಬರ್ಗದ 75 ವರ್ಷದ ಮಹಮ್ಮದ್ ಹುಸೇನ್ ಸಿದ್ಧಿಕಿ ಎಂಬ ವೃದ್ಧರ ಮೇಲೆ ಕೊರೊನಾ ವೈರಸ್ ಶಂಕೆ ಇತ್ತು. ಗುಲ್ಬರ್ಗದ ಜಿಮ್ಸ್ ಆಸ್ಪತ್ರೆಯಲ್ಲಿ ಶೀತ, ಕೆಮ್ಮ, ಜ್ವರ ಎಂದು ಮಹಮ್ಮದ್ ಹುಸೇನ್ ಸಿದ್ಧಿಕಿ ದಾಖಲಾಗಿದ್ದರು. ಇವುಗಳು ಕೊರೊನಾ ವೈರಸ್ ಲಕ್ಷಣಗಳ ಆಗಿದ್ದ ಕಾರಣ ವೈದ್ಯರು ಆರೋಗ್ಯ ತಪಾಸಣೆ ನಡೆದಿದ್ದರು. ಬಳಿಕ ಆ ವರದಿಯನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿದ್ದರು.

      ವರದಿ ಬರುವ ಮುಂಚೆ ಹೈದರಾಬಾದ್‌ಗೆ ಶಿಫ್ಟ್

      ವರದಿ ಬರುವ ಮುಂಚೆ ಹೈದರಾಬಾದ್‌ಗೆ ಶಿಫ್ಟ್

      ಗುಲ್ಬರ್ಗದ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಗೆ ಮಹಮ್ಮದ್ ಹುಸೇನ್ ಸಿದ್ಧಿಕಿ ತಪಾಸಣೆ ವಿವರ ತಲುಪಿತ್ತು. ಆದರೆ, ಅಲ್ಲಿಂದ ವರದಿ ಬರುವ ಮುನ್ನವೇ, ಕುಟುಂಬದವರು ವೃದ್ಧನನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ನಿನ್ನೆ ರಾತ್ರಿ ಮರಣ ಹೊಂದಿದ್ದಾರೆ. ಕೊರೊನಾ ಶಂಕಿತನ ಕರ್ನಾಟಕದ ಮೊದಲ ಸಾವಿನ ಪ್ರಕರಣ ಇದಾಗಿದೆ.

      ಕೊರೊನಾದಿಂದ ಸಾವು ಎಂದು ಧೃಡಪಟ್ಟಿಲ್ಲ

      ಕೊರೊನಾದಿಂದ ಸಾವು ಎಂದು ಧೃಡಪಟ್ಟಿಲ್ಲ

      ಮಹಮದ್ ಹುಸೇನ್ ಸಿದ್ದಿಕಿ ಕೊರೊನಾ ವೈರಸ್ ಶಂಕೆ ಇರುವುದು ನಿಜ. ಆದರೆ, ಅವರು ಕೊರೊನಾ ವೈರಸ್‌ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ದೃಢಪಟ್ಟಿಲ್ಲ. ವೈದ್ಯರು ಅಥವಾ ಆರೋಗ್ಯ ಇಲಾಖೆ ಕಡೆಯಿಂದ ಮಾಹಿತಿ ಸಿಕ್ಕ ಬಳಿಕವಷ್ಟೇ ಇದು ಕೊರೊನಾದಿಂದ ಬಂದ ಸಾವು ಎನ್ನವುದು ತಿಳಿಯುತ್ತದೆ.

      ಕೊರೊನಾದಿಂದ ಭಾರತೀಯ ಸಾವು

      ಕೊರೊನಾದಿಂದ ಭಾರತೀಯ ಸಾವು

      ಕೊರೊನಾದ ಭಾರತದ ಮೊದಲ ಸಾವಿನ ಪ್ರಕರಣ ನಡೆದಿದೆ. ಬ್ರಿಟನ್‌ನಲ್ಲಿ ವಾಸವಾಗಿದ್ದ, ಮನೋಹರ್ ಕೃಷ್ಣ ಪ್ರಭು ನಿಧನ ಹೊಂದಿದ್ದಾರೆ. ಇಟಲಿಯ ವ್ಯಕ್ತಿಯಿಂದ ಇವರಿಗೆ ಕೊರೊನಾ ವೈರಸ್ ಹಬ್ಬಿತ್ತು. ಆಡಿಯೋ ಉಪಕರಣ ಪಡೆಯಲು ಬಂದ ವ್ಯಕ್ತಿಯಿಂದ ವೈರಸ್ ಹರಡಿತ್ತು. ಮನೋಹರ್‌ ಪುತ್ರನಿಗೂ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+